ತುಮಕೂರು : ಪಾಲಿಕೆ ಆಂಬುಲೆನ್ಸ್ ಕಾರ್ಯಾಚರಣೆ ಆರಂಭ

 ತುಮಕೂರು : 

      ನಗರದಲ್ಲಿ ಹೋಂ ಐಸೋಲೇಷನ್‍ನಲ್ಲಿರುವ ಸೋಂಕಿತರನ್ನು ಕ್ಯಾತ್ಸಂದ್ರ ಕೋವಿಡ್ ಕೇರ್ ಸೆಂಟರ್‍ಗೆ ಸ್ಥಳಾಂತರಿಸಲು ಅಗತ್ಯವಾದ ಆಂಬ್ಯುಲೆನ್ಸ್ ಅನ್ನು ತುಮಕೂರು ಮಹಾನಗರಪಾಲಿಕೆ ಮಂಗಳವಾರ ಕಾರ್ಯಚರಣೆಗಿಳಿಸಿದೆ.

      ಪಾಲಿಕೆ ಆಡಳಿತದ ಮನವಿ, ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಜಿಲ್ಲಾಸ್ಪತ್ರೆಯ ಒಂದು ಆಂಬುಲೆನ್ಸ್ ಅನ್ನು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಬರುವ ಕೋವಿಡ್ ಪಾಸಿಟಿವ್‍ನಿಂದ ಹೋಂ ಐಸೋಲೇಷನ್ ಆಗಿರುವ ಅರ್ಹ ವ್ಯಕ್ತಿಗಳನ್ನುಸ್ಥಳಾಂತರಿಸಲು ಬಳಕೆಗೆ ನೀಡಿದ್ದು, ಪಾಲಿಕೆ ಆವರಣದಲ್ಲಿ ಕಾರ್ಯಚರಣೆಗೆ ವಿದ್ಯುಕ್ತ ಚಾಲನೆ ನೀಡಲಾಯಿತು.

      ಕೋವಿಡ್ ಕೇರ್ ಸೆಂಟರ್‍ಗೆ ಸ್ಥಳಾಂತರಕ್ಕೆ ನಗರ ವ್ಯಾಪ್ತಿಯಲ್ಲಿ ಆಂಬುಲೆನ್ಸ್ ಬೇಕಾದರವರು ಚಾಲಕ ಹನುಮಂತರಾಯ, ಮೊ 9743440078 ಅಥವಾ ಕೋವಿಡ್ ವಾರ್‍ರೂಂಗೆ ಕರೆ ಮಾಡಬಹುದಾಗಿದೆ.

      ಮೇಯರ್ ಬಿ.ಜಿ.ಕೃಷ್ಣಪ್ಪ, ಉಪಮೇಯರ್ ನಾಜೀಮಾ ಬಿ, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್‍ನಯಾಜ್, ಆಯಕ್ತರಾದ ರೇಣುಕಾ, ಆರೋಗ್ಯಾಧಿಕಾರಿ ರಕ್ಷಿತ್‍ಕುಮಾರ್ ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link