ತುಮಕೂರು : 60 ವರ್ಷದ ವ್ಯಕ್ತಿಗೆ ಸೊಂಟದ ಕೀಲು ಮರು ಜೋಡಣೆ ಯಶಸ್ವಿ

ತುಮಕೂರು : 

      ನಗರದ ಶ್ರೀದೇವಿ ಇನ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‍ನ ಕೀಲು ಮತ್ತು ಮೂಳೆ ವಿಭಾಗ ವೈದ್ಯರು 60 ವರ್ಷದ ವ್ಯಕ್ತಿಗೆ ಅತ್ಯಂತ ಕ್ಲಿಷ್ಟಕರ ಶಸ್ತ್ರಚಿಕಿತ್ಸೆ ನಡೆಸಿ ಸ್ವಾವಲಂಬಿಯಾಗಿ ನಡೆದಾಡುವಂತೆ ಮಾಡಿದ್ದಾರೆ.

      ಕೊರಟಗೆರೆ ತಾಲ್ಲೂಕಿನ ಸಿಂಗಳೀಕಪುರ ಗ್ರಾಮದ ಅರಸಪ್ಪ (60) ಎಂಬುವವರು ಸೊಂಟ ಮತ್ತು ಕಾಲು ನೋವಿನಿಂದ ಬಳಲುತ್ತಿದ್ದರು. ಇವರ ಜೀವನ ತುಂಬ ದುಸ್ತರವಾಗಿತ್ತು. ದಿನನಿತ್ಯದ ಕೆಲಸಗಳಿಗೆ ಬೇರೆಯವರ ಸಹಾಯ ಯಾಚಿಸುವಂತಾಗಿತ್ತು. ಶ್ರೀದೇವಿ ಆಸ್ಪತ್ರೆ ಕೀಲು ಮತ್ತು ಮೂಳೆ ವಿಭಾಗದ ತಜ್ಞ ವೈದ್ಯರುಗಳು ಸಕಲ ಪರೀಕ್ಷೆ ಮಾಡಿ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿದರು.

      ರೋಗಿಯೂ ಸಾಮಾನ್ಯ ಶಸ್ತ್ರಚಿಕಿತ್ಸೆಗೆ ಗುಣವಾಗುವುದು ಕಷ್ಟವಾಗಿರುವುದರಿಂದ ಸೊಂಟದ ಕೀಲು, ಮಂಡಿ ಮರುಜೋಡಣೆ ಶಸ್ತ್ರಚಿಕಿತ್ಸೆ ಮಾಡಿ ಅತಿ ಕಡಿಮೆ ಅವಧಿಯಲ್ಲಿ ಯಶಸ್ವಿಯಾಗಿ ತಾವೇ ನಡೆದಾಡುವಂತಾಗಿದ್ದಾರೆ. ಇವರು ಸುಮಾರು 10 ವರ್ಷಗಳ ಕಾಲ ನೋವಿನಿಂದ ಬಳಲುತ್ತಿದ್ದರು, ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯ ಎ.ಬಿ.ಎ.ಆರ್.ಕೆ. ಮತ್ತು ಇ.ಎಸ್.ಐ. ಅಡಿಯಲ್ಲಿ ಉಚಿತವಾಗಿ ಶಸ್ತ್ರಚಿಕಿತ್ಸೆ ನಡೆಸಿ ಸ್ವಾವಲಂಬಿಯಾಗಿ ನಡೆದಾಡುವಂತಾಗಿದ್ದಾರೆ ಎಂದು ಶ್ರೀದೇವಿ ಇನ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‍ನ ಕೀಲು ಮತ್ತು ಮೂಳೆ ವಿಭಾಗದ ತಜ್ಞ ವೈದ್ಯ ಡಾ.ಕೆ.ಆರ್.ರಾಧೇಶ್ ತಿಳಿಸಿದರು.

      ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಹೋಗಿದ್ದರೆ, ಲಕ್ಷಾಂತರ ರೂ. ಖರ್ಚು ಆಗುತ್ತಿತ್ತು, ಆದರೆ ತುಮಕೂರಿನ ಶ್ರೀದೇವಿ ಆಸ್ಪತ್ರೆಗೆ ಬಂದಿರುವುದರಿಂದ ಅತಿ ಕಡಿಮೆ ವೆಚ್ಚದಲ್ಲಿ ಶಸ್ತ್ರಚಿಕಿತ್ಸೆಯಾಗಿದೆ. ಶ್ರೀದೇವಿ ಮೆಡಿಕಲ್ ಕಾಲೇಜಿನ ವೈದ್ಯರು ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಕ್ಲಿಷ್ಟಕರವಾದುದನ್ನು ಸಾಧಿಸಿದ್ದಾರೆ. ತುಮಕೂರಿನ ಶಿರಾ ರಸ್ತೆಯಲ್ಲಿರುವ ಶ್ರೀದೇವಿ ವೈದ್ಯಕೀಯ ಕಾಲೇಜಿನಲ್ಲಿ ಅತ್ಯಾಧುನಿಕ ಸೌಲಭ್ಯಗಳಿದ್ದು, ಸಾರ್ವಜನಿಕರು ಉಪಯೋಗ ಮಾಡಿಕೊಳ್ಳಬೇಕು. ಅತ್ಯಂತ ಕಡಿಮೆ ವೆಚ್ಚದಲ್ಲಿ ರೋಗಿಗಳು ಚಿಕಿತ್ಸೆ ಪಡೆದುಕೊಳ್ಳಬಹುದಾಗಿದೆ ಎಂದು ವೈದ್ಯರು ತಿಳಿಸಿದರು.

      ಶ್ರೀದೇವಿ ಆಸ್ಪತ್ರೆ ಕೀಲು ಮತ್ತು ಮೂಳೆ ವಿಭಾಗದ ಮುಖ್ಯಸ್ಥರಾದ ಡಾ.ಶಶಿಕುಮಾರ್, ಡಾ. ಕೆ.ಆರ್.ರಾಧೇಶ್, ಡಾ. ಅಕ್ಬರ್ ಇಕ್ರಂ ಅಹಮ್ಮದ್, ಡಾ.ಅಬ್ದುಲ್ ಖಾದರ್, ಡಾ.ಮಂಜುನಾಥ್, ಶ್ರೀದೇವಿ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆ ಸೇರಿದಂತೆ ಅನುಭವಿ ವೈದ್ಯರ ತಂಡ ಶಸ್ತ್ರಚಿಕಿತ್ಸೆಯಲ್ಲಿ ಪಾಲ್ಗೊಂಡಿದ್ದರು. ಶ್ರೀದೇವಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ.ಎಂ.ಆರ್.ಹುಲಿನಾಯ್ಕರ್, ಶ್ರೀದೇವಿ ವೈದ್ಯಕೀಯ ನಿರ್ದೇಶಕರಾದ ಡಾ.ರಮಣ್ ಆರ್ ಹುಲಿನಾಯ್ಕರ್, ಶ್ರೀದೇವಿ ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕರಾದ ಎಂ.ಎಸ್.ಪಾಟೀಲ್ ಮತ್ತು ಶ್ರೀದೇವಿ ವೈದ್ಯಕೀಯ ಕಾಲೇಜು ಪ್ರಾಂಶುಪಾಲರಾದ ಡಾ.ಡಿ.ಕೆ.ಮಹಾಬಾಲರಾಜು, ಉಪಪ್ರಾಂಶುಪಾಲರಾದ ಡಾ.ರೇಖಾಗುರುಮೂರ್ತಿ ಹಾಗೂ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರನ್ನು ಅಭಿನಂದಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link