ಕೊರಟಗೆರೆ : ಆಕಸ್ಮಿಕ ಬೆಂಕಿಗೆ 4 ಗುಡಿಸಲುಗಳು ಸುಟ್ಟು ಭಸ್ಮ!!

 ಕೊರಟಗೆರೆ :

     

     ಪಟ್ಟಣದ 4ನೇ ವಾರ್ಡಿನ ಗಿರಿನಗರದಲ್ಲಿ ಭಾನುವಾರ ಮಧ್ಯಾಹ್ನ 2 ಗಂಟೆ ಸುಮಾರಿನಲ್ಲಿ ಬೆಂಕಿ ಬಿದ್ದ ಪರಿಣಾಮ ನಾಲ್ಕು ಗುಡಿಸಲುಗಳು ಸಂಪೂರ್ಣ ಸುಟ್ಟು ಕರಕಲಾಗಿರುವ ಘಟನೆ ನಡೆದಿದೆ.

      ಗುಡಿಸಲಲ್ಲಿದ್ದ ದವಸ-ಧಾನ್ಯ, ಪಡಿತರ ಚೀಟಿ, ಆಧಾರ್ ಕಾರ್ಡ್ ಇನ್ನು ಇತರ ದಾಖಲೆ ಪತ್ರಗಳು, ಬಟ್ಟೆ ಇತರೆ ವಸ್ತುಗಳು ಸಂಪೂರ್ಣ ಸುಟ್ಟು ಭಸ್ಮವಾಗಿವೆ. ನಾಲ್ಕು ಗುಡಿಸಲುಗಳು ಸೇರಿ ಸುಮಾರು ಎಂಟು ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ. ಸುದ್ದಿ ತಿಳಿದ ತಕ್ಷಣ ಪೊಲೀಸ್ ಸಿಬ್ಬಂದಿ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಜತೆ ಸ್ಥಳೀಯರು ಸೇರಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

      ಸುದ್ದಿ ತಿಳಿದ ತಕ್ಷಣ ತಾಲ್ಲೂಕು ದಂಡಾಧಿಕಾರಿಗಳು ಹಾಗೂ ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ ಸೇರಿದಂತೆ ಪಟ್ಟಣ ಪಂಚಾಯಿತಿಯ ಸದಸ್ಯರು ಭೇಟಿ ನೀಡಿ ಗುಡಿಸಲುಗಳನ್ನು ಕಳೆದುಕೊಂಡ ನಿರಾಶ್ರಿತರನ್ನು ಸಮಾಧಾನಪಡಿಸಿ ಅವರಿಗೆ ಬೇಕಾಗುವ ಸೌಕರ್ಯಗಳನ್ನು ಒದಗಿಸುವುದಾಗಿ ಭರವಸೆ ನೀಡಿದರು.

      ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಲಕ್ಷ್ಮಣ್ ಕುಮಾರ್ ಮಾತನಾಡಿ, ನಾಲ್ಕು ಗುಡಿಸಲುಗಳು ಭಸ್ಮವಾಗಿವೆ. ಗುಡಿಸಲು ವಾಸಿಗಳಾದ ಐದು ಕುಟುಂಬಸ್ಥರಿಗೆ ಊಟ ಹಾಗೂ ಬಟ್ಟೆಯ ವ್ಯವಸ್ಥೆಗಾಗಿ ತಲಾ ಐದು ಸಾವಿರ ರೂ. ಕೊಡಲು ಪಟ್ಟಣ ಪಂಚಾಯಿತಿ ಸದಸ್ಯರ ಜತೆಗೂಡಿ ಚರ್ಚಿಸಿದ್ದು, ಕೂಡಲೇ ಕೊಡಲು ನಿರ್ಧರಿಸಿದೆ ಎಂದು ತಿಳಿಸಿದರು.

      ಪಟ್ಟಣ ಪಂಚಾಯಿತಿ ಸದಸ್ಯ ನಟರಾಜ್ ಮಾತನಾಡಿ, ನಮ್ಮ ಕ್ಷೇತ್ರದ ಶಾಸಕರಾದ ಡಾllಜಿ.ಪರಮೇಶ್ವರ್‍ ರವರ ಜೊತೆ ಮಾತನಾಡಿ, ಕೂಡಲೆ ಇವರಿಗೆ ಮನೆ ಮಂಜೂರು ಮಾಡಿಕೊಡುವಂತೆ ಮಾತನಾಡುತ್ತೇವೆ. ಹಾಗೆಯೇ ಇವರಿಗೆ ದಿನಬಳಕೆಯ ವಸ್ತುಗಳಿಗೆ ಆಗುವ ಸಹಾಯವನ್ನು ಈ ಕೂಡಲೆ ಮಾಡುತ್ತೇವೆ ಎಂದು ತಿಳಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link