ತಿಪಟೂರು :
ರಾಜ್ಯದಎಲ್ಲಾಕಡೆಗ್ರಾಮ ಪಂಚಾಯಿತಿಚುನಾವಣೆ ನಡೆದುಅಧ್ಯಕ್ಷರು, ಉಪಾಧ್ಯಕ್ಷರು ಸದಸ್ಯರುಗಳು ತಮ್ಮ ಹಕ್ಕನ್ನು ಚಲಾವಣೆ ಮಾಡುತ್ತಿದ್ದಾರೆ. ಆದರೆ ತಾಲ್ಲೂಕಿನ ಹೊನ್ನವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನರು ಮಾತ್ರ ನೀರುಕೊಡುವವರೆಗೂ ಚುನಾವಣೆಯನ್ನು ಬಹಿಷ್ಕರಿಸಿದ್ದರು. ಈಗ ಮತ್ತೆ ಪಂಚಾಯ್ತಿಗೆ ಮರುಚುನಾವಣೆ ಎದುರಾಗಿದೆ. ಆದರೆ ಈ ಬಾರಿ ಚುನಾವಣೆಯನ್ನು ಬಹಿಷ್ಕರಿಸುತ್ತಾರಾ, ಇಲ್ಲ ಹೋರಾಟ ಮಾಡಿದ ನಾಯಕರಲ್ಲಿ ಒಡಕು ಮೂಡಿಸಿ ಮರು ಚುನಾವಣೆಗೆ ಮುಂದಾಗುತ್ತಾರಾ ಎಂಬ ಚರ್ಚೆ ಶುರವಾಗಿದೆ.
ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲೇ ನಮಗೆ ಸೂಕ್ತ ಕುಡಿಯುವ ನೀರಿನ ವ್ಯವಸ್ಥೆಇಲ್ಲ, ಹೇಮಾವತಿ ಮತ್ತುಎತ್ತಿನ ಹೊಳೆ ಯೋಜನೆಗೆ ಭೂಮಿಕೊಟ್ಟಿದ್ದೇವೆ. ಆದರೆ ದೀಪದ ಬುಡದಲಿ ್ಲಕತ್ತಲು ಎಂಬಂತೆ ನಮಗೆ ನೀರು ಸಿಗುತ್ತಿಲ್ಲವೆಂದು ಚುನಾವಣಾ ಬಹಿಷ್ಕಾರ ಮಾಡುತ್ತೇವೆಂದು ಘೊಷಿಸಿದ್ದರು. ಆದರೆ ರಾಜಕೀಯ ಮೇಲಾಟದಲ್ಲಿಇದ್ದಗುಂಪನ್ನು ಹೊಡೆದು ನಮ್ಮನ್ನು ಚುನಾವಣೆಯಲ್ಲಿ ಗೆಲ್ಲಿಸಿದರೆ ನಿಮಗೆ ನೀರುಕೊಡುತ್ತೇವೆಂದು ಸಭೆಗಳು ನಡೆದು ಮತ ಪಡೆದ ರಾಜಕಾರಣಿಗಳು ಮತ್ತೆ ತಿರುಗಿಯು ಕ್ಷೇತ್ರವನ್ನು ನೋಡಿಲ್ಲ. ಹೀಗಾಗಿ ಕಳೆದ ಡಿಸೆಂಬರ್‍ನಲ್ಲಿ ನಡೆದ ಗ್ರಾಮ ಪಂಚಾಯಿತಿಯಚುನಾವಣೆಯನ್ನು ಬಹಿಷ್ಕರಿಸುತ್ತವೆಂದು ತಿಳಿಸಿ ಅದರಲ್ಲಿ ಯಶಸ್ವಿಯೂ ಆಗಿದ್ದರು. ಒಂದು ಕಡೆ ಒಗ್ಗಟ್ಟನ್ನು ನೋಡಿಆರಕ್ಷಕರು ಸೂಕ್ತ ಬಿಗಿ ಬಂದೂಬಸ್ತ್ ಮಾಡಿದರು. ಯಾರು ಸಹ ಅರ್ಜಿಯನ್ನು ಸಲ್ಲಿಸದೇ ಗ್ರಾಮಪಂಚಾಯಿತಿ ಚುನಾವಣೆಯನ್ನು ಬಹಿಷ್ಕರಿಸಿದ್ದರು.
ನಾವು ಕುಡಿಯಲು ನೀರಿಲ್ಲದೇ ಪರದಾಡುತ್ತಿದ್ದು, ಕೆಲವು ಶುದ್ದಕುಡಿಯುವ ನೀರಿನ ಘಟಕಗಳು ನೀರಿಲ್ಲದೇ ನಿಂತಿವೆ. ಹಾಗೂ ಜನುವಾರುಗಳ ಸ್ಥಿತಿಯನ್ನಂತು ಕೇಳುವ ಆಗಿಲ್ಲ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನಮ್ಮ ಕೆರೆಗಳ ಪಾಲಿನ ನೀರನ್ನು ಸಹ ಸೂಕ್ತವಾಗಿ ನೀಡಿಲ್ಲ. ಇನ್ನು ಬಿಟ್ಟಿರುವ ನೀರು ನೀರು ಬೀಳುವ ಸ್ಥಳದಿಂದ ಕದಲುತ್ತಿಲ್ಲ ಹಾಗೂ ನಮ್ಮ ಕೆರೆಗಳಿಗೆ ಎಷ್ಟು ನೀರು ಹಂಚಿಕೆಯಾಗಿದೆ, ಅಷ್ಟು ನೀರು ಬಂದಿದೆಯೇಎಂಬುದು ಸಹ ತಿಳಿಯದೆ ಜನಪ್ರತಿನಿಧಿಗಳಿಗೆ ಮತ್ತು ಸರ್ಕಾರಕ್ಕೆ ನಮ್ಮ ಮನವಿಯದನಿಯು ಕೇಳುತ್ತಿಲ್ಲವೆಂದು ಬಹಿಷ್ಕಾರದ ವೇಳೆ ಹೇಳಿದ್ದೆವು .ಆದರೆ ಈ ಬಾರಿ ನಮ್ಮಲ್ಲಿಒಡಕು ಮುಡಿಸಿ ತಮ್ಮರಾಜಕೀಯ ಬೆಳೆಯನ್ನು ಬೇಯಿಸಿಕೊಳ್ಳಲು ರಾಜಕಾರಣಿಗಳು ಪ್ರಯತ್ನಿಸುತ್ತಿದ್ದಾರೆ. ಕೆಲವರು ನಾವು ಚುನಾವಣೆಗೆ ಸ್ಪರ್ಧಿಸುವುದಾಗ ಹೇಳಿತಿಳ್ತುದ್ದಾರೆ. ಆದರೂ ಈ ಬಾರಿ ಚುನಾವಣೆ ಏನಾಗುತ್ತದೆ ಎಂದು ಕಾದು ನೋಡಬೇಕಾಗಿದೆ ಎಂದು ಹೊನ್ನವಳ್ಳಿ ಹೋಬಳಿ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಎಚ್.ಎನ್.ಚಂದ್ರೇಗೌಡ ತಿಳಿಸಿದ್ದಾರೆ.
ಅಧಿಕಾರವಿದ್ದರೆ ವಿದಾನಸೌಧಕ್ಕೆ ಹೋಗಬಹುದಿತ್ತೇನೋ !!! :
ನಾವು ನೀರನ್ನು ಕೇಳಲು ಈಗ ವಿದಾನಸೌಧಕ್ಕೆ ಹೋಗಲು ಸಾಧ್ಯವಿಲ.್ಲ ಅದೇ ನಾವು ಚುನಾವಣೆಯಲ್ಲಿ ಗೆದ್ದು ಅಧ್ಯಕ್ಷರು, ಉಪಾಧ್ಯಕ್ಷರೊಂದಿಗೆ, ಸದಸ್ಯರು ಹಾಗೂ ಗ್ರಾಮಸ್ಥರು ನೇರವಾಗಿ ವಿಧಾನಸೌಧದ ಹತ್ತಿರ ಹೋಗಿ ರಾಜ್ಯದ ಗಮನ ಸೆಳೆಯಬಹುದಾಗಿತ್ತು. ಆದರೆಚುನಾವಣೆ ನಡೆಯದೇ ನಮಗೆ ಅಧಿಕಾರವಿಲ್ಲದೇ ಅದು ಸಾಧ್ಯವಾಗಲ್ಲ ನಮ್ಮದನಿಗೆ ಬೆಲೆ ಕಡಿಮಾಗುತ್ತದೆ. ನಾವು ಗ್ರಾಮ ಪಂಚಾಯಿತಿಚುನಾವಣೆಯನ್ನು ಬಹಿಷ್ಕರಿಸಿದಾಗ ಏಕೆ ಎಂದು ಕೇಳದೇ ನಮ್ಮ ಮನವೊಲಿಸಿ ಚುನಾವಣೆಯನ್ನು ನಡೆಸಲು ಅಧಿಕಾರಿಗಳು ಬಂದಿದ್ದರು. ಆದರೆ ನಾವು ಪಟ್ಟು ಬಿಡಲಿಲ್ಲ, ಈಗ ಮತ್ತೆಚುನಾವಣೆ ಬಂದಿದೆಆದರೂ ನಮ್ಮ ಸಮಸ್ಯೆಗಳನ್ನು ಯಾರು ಬಗೆಹರಿಸಿಲ್ಲ ಸೌಜನ್ಯಕ್ಕದರು ಬಂದು ನೋಡದಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಈಗ ಮತ್ತೆಚುನಾವಣೆ ನಡೆಸಲು ಬಂದಿದ್ದಾರೆ ಎಂದು ಹೋರಾಟಗಾರರು ತಿಳಿಸಿದ್ದಾರೆ.
ಮತ್ತೆ ಒಗ್ಗಟ್ಟು ಒಡೆಯುವ ಹುನ್ನಾರ:
ಕಳೆದ ಚುನಾವಣೆಗಳಲ್ಲಿ ಮತ ಬಹಿಷ್ಕಾರದ ಮಾತುಗಳು ಕೇಳಿಬರುತ್ತಿರುವ ಸಂದರ್ಭದಲ್ಲಿಒಟ್ಟಾಗುವ ರಾಜಕಾರಣಿಗಳು ಚುನಾವಣೆಯಒಗ್ಗಟ್ಟನ್ನುಒಡೆಯುತ್ತಾರೆ. ಆದರೆಗ್ರಾಮ ಪಂಚಾಯಿತಿಚುನಾವಣೆಯ ವೇಳೆಯಲ್ಲಿ ಈ ತಂತ್ರ ಫಲಿಸಲಿಲ್ಲ. ಈಗ ಮತ್ತೆಗ್ರಾಮಸ್ಥರಲ್ಲಿಯೇಒಡಕು ಮಡಿಸಲುತೆರೆಮರೆಯಲ್ಲಿ ಸಭೆಗಳು ನಡೆಯುತ್ತಿದ್ದುಎಲ್ಲರೂ ಹೇಗೆ ಹೋಗುತ್ತಾರೋಕಾಯ್ದು ನೋಡಿ ನೀವು ಹಾಗೆಯೇ ಮಾಡಿಎಂದು ಕೆಲವು ಪಕ್ಷದವರು ಹೇಳಿದ್ದಾರೆ ಎಂಬ ಮಾತು ಸಹ ಕೇಳಿಬರುತ್ತಿದೆ.
