ತುರುವೇಕೆರೆ :
ಪಟ್ಟಣದ ಎಪಿಎಂಸಿ ಆವರಣದಲ್ಲಿ ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನಿಯಮಿತದಿಂದ ಪ್ರಾರಂಬವಾದ ರಾಗಿ ಖರೀದಿ ಕೇಂದ್ರಕ್ಕೆ ಅವಧಿ ಸಮೀಪಿಸುತ್ತಿರುವಂತೆಯೇ ರೈತರು ಅಪಾರ ಪ್ರಮಾಣದಲ್ಲಿ ನಾಮುಂದು-ತಾಮುಂದು ಎಂಬಂತೆ ರಾಗಿ ಬಿಡುತ್ತಿರುವ ದೃಶ್ಯ ಗುರುವಾರವೂ ಕಾಣಬಂತು.
ರಾಗಿ ಖರೀದಿ ಎಲ್ಲಿ ಸ್ಥಗಿತಗೊಳ್ಳುವದೋ ಎಂಬ ಆತಂಕಕ್ಕೊಳಗಾದ ರೈತರು ಅಧಿಕ ಪ್ರಮಾಣದಲ್ಲಿ ರಾಗಿಯನ್ನು ಟ್ರಾಕ್ಟರ್ ಗಳಲ್ಲಿ ತಂದು ಖರೀದಿ ಸುತ್ತ ಮುತ್ತ ಅಡ್ಡಾದಿಡ್ಡಿ ನಿಲ್ಲಿಸುವುದರಿಂದ ಕೃಷಿ ಮಾರುಕಟ್ಟೆಯಲ್ಲಿ ಬೇರೆ ವಹಿವಾಟುಗಳಿಗೆ ತೊಂದರೆಯಾಗುತ್ತಿದೆ. ಫೆ. 2ರಂದು ರಾಗಿ ಖರೀದಿ ಕೇಂದ್ರ ಪ್ರಾರಂಭವಾಗಿ ಒಟ್ಟು 5822 ರೈತರು ನೊಂದಾಯಿಸಿದ್ದು ಇದುವರೆವಿಗೂ 4445 ರೈತರಿಂದ 94034 ಕ್ವಿಂಟಾಲ್ ರಾಗಿ ಖರೀದಿಸಲಾಗಿದೆ.
ಪ್ರತಿ ದಿನ 250 ರೈತರಿಂದ 3500 ಕ್ವಿಂಟಾಲ್ ರಾಗಿ ಖರೀದಿ ಮಾಡಲಾಗುತ್ತಿದೆ. ಈಗಾಗಲೇ ನೊಂದಣಿ ಮಾಡಿರುವ 1377 ರೈತರಿಂದ ಮಾತ್ರ ರಾಗಿಯನ್ನು ಮಾ.25 ರವರೆವಿಗೆ ಖರೀದಿಸಲಾಗುವುದು. ಇದುವರೆವಿಗೂ ಖರೀದಿಸಿದ ರಾಗಿಯನ್ನು ತುಮಕೂರು, ತುರುವೇಕೆರೆ ಹಾಗೂ ಶ್ರೀರಾಂಪುರದಲ್ಲಿ ದಾಸ್ತಾನು ಮಾಡಲಾಗುತ್ತಿದೆ. ರೈತರ ಸಮಸ್ಯೆಗಳಿಗೆ ಸ್ಪಂದಿಸಿ ರೈತರಿಗೆ ತೊಂದರೆಯಾಗದ ರೀತಿಯಲ್ಲಿ ಸೈಬರ್ ಸಮಸ್ಯೆಯಿಂದ ತೊಂದರೆಯಾಗುತ್ತಿದ್ದರೂ ಸಹಾ ತಾವೇ ಮುತುವರ್ಜಿ ವಹಿಸಿ ರೈತರಿಗೆ ತೊಂದರೆಯಾಗದ ರೀತಿಯಲ್ಲಿ ಕಾರ್ಯ ನಿರ್ವಹಿಸಿ ರಾಗಿ ಖರೀದಿಸುತ್ತಿದ್ದೇವೆ ಎಂದು ಖರೀದಿ ಅಧಿಕಾರಿ ರವಿಕುಮಾರ್ ತಿಳಿಸಿದ್ದಾರೆ.
ಈ ಸಂಧರ್ಬದಲ್ಲಿ ರಾಗಿ ಖರೀದಿ ಕೇಂದ್ರದ ಸಹಾಯಕರಾದ ರಮೇಶ್, ಲಾರಿ ಗುತ್ತಿಗೆದಾರ ಬಸವರಾಜು ಸೇರಿದಂತೆ ರೈತರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
