ಪಾವಗಡ : ಮೃಗ-ಪಕ್ಷಿಗಳಿಗೆ ನೀರು ಕಲ್ಪಿಸಿದ ಜಪಾನಂದಜಿ

 ಪಾವಗಡ :

      ಇಲ್ಲಿನ ಶ್ರೀರಾಮಕೃಷ್ಣ ಸೇವಾಶ್ರಮದ ವತಿಯಿಂದ ಏ. 12ರಂದು ಸ್ವಾಮಿ ಜಪಾನಂದಜಿರವರು ಸ್ವತಃ ಕೆ.ರಾಂಪುರ ನವಿಲುಧಾಮದಲ್ಲಿ ಬತ್ತಿರುವ ಹಳ್ಳಗಳಿಗೆ, ದೊಣೆಗಳಿಗೆ ಟ್ಯಾಂಕರ್‍ನಿಂದ ಪಂಪ್‍ಸೆಟ್ ಮೂಲಕ ಸುಮಾರು 100 ಅಡಿಗಿಂತಲೂ ಎತ್ತರವಾದ ನೀರಿನ ಶೇಖರಣಾ ಸ್ಥಳಗಳಿಗೆ ನೀರನ್ನು ತುಂಬಿಸಿದರು.

      ಈ ಯೋಜನೆಯ ವಿಶೇಷತೆ ಎಂದರೆ ಸುಮಾರು 60ಕ್ಕೂ ಹೆಚ್ಚು ಕೆ.ರಾಂಪುರದ ಶಾಲಾ ಮಕ್ಕಳು ಈ ನೀರು ಶೇಖರಣಾ ಸ್ಥಳಗಳನ್ನು ಶುಚಿಗೊಳಿಸಿದರು. ಮಕ್ಕಳ ಉತ್ಸಾಹ ಹಾಗೂ ಚೈತನ್ಯವನ್ನು ನಿಜಕ್ಕೂ ಕಂಡು ಆನಂದಪಡಬಹುದಾಗಿತ್ತು. ಸುಮಾರು 10,000 ಲೀಟರಿನ ಟ್ಯಾಂಕರ್‍ನೊಂದಿಗೆ ಸ್ವಾಮಿ ಜಪಾನಂದಜೀ ರವರು ನವಿಲುಗಳಿಗೆ, ಜಿಂಕೆಗಳಿಗೆ, ಕರಡಿಗಳಿಗೆ ಹಾಗೂ ಮೃಗ ಪಕ್ಷಿಗಳಿಗಾಗಿ ಸಂಪೂರ್ಣವಾಗಿ ಬತ್ತಿ ಹೋದ ನೀರಿನ ಶೇಖರಣಾ ಸ್ಥಳಗಳಿಗೆ ನೀರನ್ನು ಹರಿಸಿದ್ದು, ಉರಿಯುವ ಬಿಸಿಲಿನ ತಾಪದಲ್ಲಿ ಮೃಗ-ಪಕ್ಷಿಗಳಿಗೆ ಆಹಾರ-ನೀರುಣಿಸುವ ಯೋಜನೆ ನಿರಂತರವಾಗಿ ನಡೆಯುತ್ತಿದೆ.

      ಸ್ವಾಮಿ ಜಪಾನಂದಜೀ ರವರೊಂದಿಗೆ ಶ್ರೀ ರಾಮಕೃಷ್ಣ ಸೇವಾಶ್ರಮದ ವಿವೇಕ ಬ್ರಿಗೇಡ್‍ನ ಸದಸ್ಯರುಗಳು ಈ ಕಾರ್ಯದಲ್ಲಿ ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap