ಹುಳಿಯಾರು ಮಾರುಕಟ್ಟೆಯಲ್ಲೀಗ ದ್ರಾಕ್ಷಿ ಭರಾಟೆ

 ಹುಳಿಯಾರು : 

     ಪಟ್ಟಣದಲ್ಲಿ ಎರಡ್ಮೂರು ವಾರಗಳಿಂದ ಭಾರಿ ಪ್ರಮಾಣದಲ್ಲಿ ದ್ರಾಕ್ಷಿ ಆವಕವಾಗುತ್ತಿದ್ದು, ಎಲ್ಲಿ ನೋಡಿದರಲ್ಲಿ ವ್ಯಾಪಾರಿಗಳು ತಳ್ಳು ಗಾಡಿಗಳಲ್ಲಿ ದ್ರಾಕ್ಷಿ ರಾಶಿ ಹಾಕಿಕೊಂಡು ಮಾರಾಟ ಮಾಡುತ್ತಿರುವ ದೃಶ್ಯ ಕಂಡು ಬರುತ್ತಿದೆ.

ಮಾರುಕಟ್ಟೆಯಲ್ಲಿ ಸೀಡ್‍ಲೆಸ್ ಬಿಳಿ ದ್ರಾಕ್ಷಿಗಳು ಮಾರಾಟವಾಗುತ್ತಿದ್ದು ಆಕಾರದಲ್ಲಿ ಸ್ವಲ್ಪ ಉದ್ದವಾಗಿರುವ ಸೋನಕಾ ತಳಿಯ ದ್ರಾಕ್ಷಿಗೆ ಕೆ.ಜಿ. 80 ರೂ ಇದೆ. ಮತ್ತು ಗಾತ್ರದಲ್ಲಿ ಚಿಕ್ಕದಾಗಿ ಗುಂಡಗಾಗಿರುವ ಸ್ಥಳೀಯ ತಳಿಯ ದ್ರಾಕ್ಷಿಗೆ ಕೆ.ಜಿ. 60 ರೂ.ನಿಂದ 80 ರೂ. ಇದೆ.
ದ್ರಾಕ್ಷಿ ಬೆಳೆಯ ಋತು ಆರಂಭವಾಗಿದ್ದು ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿದೆ. ಪಟ್ಟಣದ ರಾಮಗೋಪಾಲ್ ಸರ್ಕಲ್ ಬಸ್ ನಿಲ್ದಾಣ ಮತ್ತು ರಾಜಕುಮಾರ್ ರಸ್ತೆಯಲ್ಲಿ ತಳ್ಳುವ ಗಾಡಿಯಲ್ಲಿ ದ್ರಾಕ್ಷಿ ಮಾರಲಾಗುತ್ತಿದೆ. ಬೆಲೆ ಸ್ಪಲ್ಪ ದುಭಾರಿಯಾಗಿದ್ದರೂ ತಿನ್ನಲು ರುಚಿ ಮತ್ತು ಎರಡು ದಿನಕ್ಕೊಮ್ಮೆ ಫ್ರೆಷ್ ದ್ರಾಕ್ಷಿ ಬರುತ್ತಿರುವುದರಿಂದ ಗ್ರಾಹಕರು ಖರೀದಿಗೆ ಉತ್ಸಾಹ ತೋರುತ್ತಿದ್ದಾರೆ.

     ಈ ಹಿಂದೆ ಸೀಬೆ, ಸಪೋಟೋ, ಹಲಸಿನಹಣ್ಣು, ನೇರಳೆ ಹಣ್ಣುಗಳನ್ನು ತಳ್ಳುವಗಾಡಿಯಲ್ಲಿ ತುಂಬಿಕೊಂಡು ಮಾರುತ್ತಿದ್ದ ವ್ಯಾಪಾರಿಗಳೇ ಈಗ ದ್ರಾಕ್ಷಿಗೆ ಬದಲಾಗಿದ್ದು ನಿತ್ಯ 500 ರೂ ಹಣ ಸಂಪಾದಿಸುತ್ತಿದ್ದಾರೆ. ಇನ್ನೆರಡು ತಿಂಗಳು ದ್ರಾಕ್ಷಿ ಸೀಜನ್ ಇದ್ದು ಅಲ್ಲಿಯವರೆವಿಗೆ ದ್ರಾಕ್ಷಿ ವ್ಯಾಪಾರ ಮಾಡಿ ನಂತರ ಬರುವ ಮಾವಿನ ಸೀಜನ್‍ನಲ್ಲಿ ಮಾವು ಮಾರಾಟಕ್ಕೆ ಇಳಿಯುವುದಾಗಿ ಎಂದು ವ್ಯಾಪಾರಿಯಾದ ಮುಬಾರಕ್ ತಿಳಿಸುತ್ತಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link