ಹಿಂದೂಪುರ ಮಾಜಿಶಾಸಕ ಕೆ.ತಿಪ್ಪೆಸ್ವಾಮಿ ನಿಧನ

 ತುಮಕೂರು : 

      ಆಂಧ್ರಪ್ರದೇಶದ ಹಿಂದೂಪುರ ಮಾಜಿಶಾಸಕರು ಸೇವಾಮಂದಿರದ ಅಧ್ಯಕ್ಷರು,ಮಹಾತ್ಮಾಗಾಂಧಿ ಅನುಯಾಯಿಗಳು ಆದ ಕೆ.ತಿಪ್ಪೆಸ್ವಾಮಿ(81) ಭಾನುವಾರ ಮುಂಜಾನೆ ಹಿಂದೂಪುರದಲ್ಲಿ ನಿಧನರಾಗಿದ್ದಾರೆ.

      ಪತ್ನಿ ಶಾಂತಮ್ಮ,ಮಗ ಶ್ರೀಧರ್, ಪುತ್ರಿ ರೇಣುಕಾ, ಹಾಗೂ ಮೂವರೂ ಸಹೋದರರು, ಇಬ್ಬರು ಸಹೋದರಿಯರು ಅಪಾರ ಸಂಖ್ಯೆಯ ಬಂಧು ಬಳಗವನ್ನು ಆಗಲಿದ್ದಾರೆ. ಭಾನುವಾರ ಸಂಜೆ ಹಿಂದೂಪುರದಲ್ಲಿ ಅಂತ್ಯಕ್ರಿಯೆ ನೆರವೇರಿತು. 

     ಕೆ.ತಿಪ್ಪೆಸ್ವಾಮಿ ಅವರ ಹುಟ್ಟೂರು ಶಿರಾ ತಾಲ್ಲೂಕು ಕಾಮಗೊಂಡನಹಳ್ಳಿ.ದಿವಗಂತ ಕೆ.ಎಲ್.ಕಾಟಣ್ಣನವರ ಹಿರಿಯ ಪುತ್ರರು. ಹಿಂದೂಪುರದಲ್ಲಿ ಇದ್ದ ದೊಡ್ಡಪ್ಪ ಎ.ಎಮ್.ಲಿಂಗಣ್ಣ ಅವರ ದತ್ತುಪುತ್ರರಾಗಿ ಅಲ್ಲಿಗೆ ತೆರಳಿದ ತಿಪ್ಪೆಸ್ವಾಮಿ ಅಲ್ಲಿಯೆ ಬೆಳೆದು ಹೆಸರು ಮಾಡಿದರು. ಎ.ಎಮ್.ಲಿಂಗಣ್ಣ ಅವರು ಸ್ವಾತಂತ್ರ್ಯ ಹೋರಾಟಗಾರಗಿದ್ದರು ಅವರ ನಿಧನಾ ನಂತರ ಕೆ.ತಿಪ್ಪೆಸ್ವಾಮಿಯವರೆ ಎಲ್ಲಾ ಜವಾಬ್ದಾರಿ ವಹಿಸಿಕೊಂಡರು.

1978-83ರ ಅವಧಿಯಲ್ಲಿ ಹಿಂದೂಪುರ ಶಾಸಕರಾದರು. ಅಲ್ಲಿನ ಸೇವಾ ಮಂದಿರ ಸೊಸೈಟಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು. ಈ ಸೊಸೈಟಿಯಡಿಯಲ್ಲಿ ವ್ಯಯಸ್ಕರ ಶಿಕ್ಷಣ. ಗ್ರಾಮೀಣ ಅಭಿವೃದ್ಧಿ ಯೋಜನೆ. ಯೂನಿಸೆಫ್.ಐಎಲ್‍ಒ. ಮೊದಲಾದ ಯೋಜನೆಗಳನ್ನು ಜಾರಿ ಗೊಳಿಸಲಾಗಿದೆ. ಎ.ಎಮ್.ಲಿಂಗಣ್ಣ ಮೆಮೋರಿಯಲ್ ಸ್ಕೂಲ್ ಅಧ್ಯಕ್ಷರಾಗಿ ಸಂಸ್ಥೆಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದಿದ್ದಾರೆ.
ಆಂಧ್ರಪ್ರದೇಶದ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ. ಗಾಂಧಿ ಅನುಯಾಯಿಗಳಾಗಿ, ಹಲವು ಸಂಘ ಸಂಸ್ಥೆಗಳ ಮುಖಂಡರಾಗಿ ಬೆಳೆದ ಕೆ.ತಿಪ್ಪೆಸ್ವಾಮಿ ಅವರಿಗೆ ನ್ಯಾಷನಲ್ ಯೂನಿಟಿಆವಾರ್ಡ್ ಇಂದಿರಾ ಪ್ರೀಯದರ್ಶಿನಿ ಆವಾರ್ಡ್ ಮತ್ತಿತರ ಪ್ರಶಸ್ತಿಗಳು ಇವರಿಗೆ ಬಂದಿದ್ದವು.
 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link