ಮಿಡಿಗೇಶಿ :
ಮಧುಗಿರಿ ಕಡೆಯಿಂದ ಪಾವಗಡಕ್ಕೆ ಹಾದು ಹೋಗುವ ರಾಜ್ಯ ಹೆದ್ದಾರಿಯಲ್ಲಿ (ನಲ್ಲೇಕಾಮನಹಳ್ಳಿಯಿಂದ ಬೇಡತ್ತೂರು ಗ್ರಾಮಕ್ಕೆ ಹೋಗುವ ಕ್ರಾಸ್ ಸಮೀಪದ) ದ್ವಿಚಕ್ರ ವಾಹನ ಮತ್ತು ಕಾರ್ ನಡುವೆ ಗುರುವಾರ ಅಪಘಾತವಾಗಿದ್ದು, ಮಡಕಶಿರಾ ತಾಲ್ಲೂಕಿನ ಮಣೂರು ಗ್ರಾಮದ ಗೋವಿಂದಪ್ಪ (45), ರಾಜಣ್ಣ (58) ಮಡಕಶಿರಾ ಕಡೆಯಿಂದ ಮಧುಗಿರಿ ಕಡೆಗೆ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದಾಗ, ಯಲಹಂಕದಿಂದ ಪೆನುಗೊಂಡ ಗ್ರಾಮಕ್ಕೆ ಹೋಗುತ್ತಿದ್ದ ಕಾರು ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನದಲ್ಲಿದ್ದ ಈ ಇಬ್ಬರಿಗೂ ತೀವ್ರ ಪೆಟ್ಟು ಬಿದ್ದಿದ್ದು ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ 108 ಅಂಬ್ಯುಲೆನ್ಸ್ ಮೂಲಕ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದೇ ದಿನ ಬೇಡತ್ತೂರು ಗ್ರಾಮಕ್ಕೆ ಹಾದು ಹೋಗುವ ಕ್ರಾಸ್ ಬಳಿ ಕಾರು ಮತ್ತು ದ್ವಿಚಕ್ರ ವಾಹನ ನಡುವೆ ಡಿಕ್ಕಿ ಸಂಭವಿಸಿದ್ದು, ಮಡಕಶಿರಾ ತಾಲ್ಲೂಕಿನ ಬುಡ್ಡಯ್ಯನ ಪಾಳ್ಯದ ರಂಗನಾಥ (43) ಇವರ ಕೈ ಮುರಿದಿದ್ದು, ಗಾಯಾಳುವನ್ನು ಚಿಕಿತ್ಸೆಗಾಗಿ ಮಧುಗಿರಿ ಪಟ್ಟಣದ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೇಲ್ಕಂಡ ಎರಡು ಪ್ರತ್ಯೇಕ ಅಪಘಾತಗಳ ಬಗ್ಗೆ ಮಿಡಿಗೇಶಿ ಪೊಲೀಸ್ ಠಾಣಾಧಿಕಾರಿ ಹನುಮಂತರಾಯಪ್ಪ ಪ್ರಕರಣ ದಾಖಲಿಸಿಕೊಂಡಿದು,್ದ ಅಪಘಾತಕ್ಕೀಡಾದ ನಾಲ್ಕು ವಾಹನಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ತನಿಖೆ ಮುಂದುವರೆದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ