11 ದಿನಗಳಿಂದ ವೃಧ ಕಣ್ಮರೆ: ಪೊಲೀಸ್ ಠಾಣೆ ಮೆಟ್ಟಿಲೇರಿದ ಕುಟುಂಬ

ತುಮಕೂರು :-

    ಕುಟುಂಬದೊಂದಿಗೆ ತುಂಬಾ ಬಾಂಧವ್ಯ ಹೊಂದಿದ್ದ ವಯೋ ವೃದ್ಧನೂರ್ವ ಡಿಸೆಂಬರ್ 10ರ ಮಂಗಳವಾರ

    ತುಮಕೂರು ನಗರಕ್ಕೆ ಹೋಗಿ ಬರುವುದಾಗಿ ಕುಟುಂಬಸ್ಥರಿಗೆ ಹೇಳಿ ಹೋದವರು ಕಣ್ಮರೆಯಾಗಿದ್ದು ಇಲ್ಲಿಯವರೆಗೂ ಮನೆಗೆ ವಾಪಸ್ ಬಾರದ ಕಾರಣ ಕುಟುಂಬಸ್ಥರು ಪೊಲೀಸ್ ಠಾಣಾ ಮೆಟ್ಟಿಲೇರಿರುವ ಘಟನೆ ತುಮಕೂರು ಜಿಲ್ಲೆಯ ಕೋರ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಜರುಗಿದೆ.

    ತುಮಕೂರು ತಾಲೂಕಿನ ಕೋರ ಹೋಬಳಿ ಅವಳಿಪಾಳ್ಯ ಗ್ರಾಮದ ನರಸಿಂಹಯ್ಯ (85 ವರ್ಷ) ಎಂಬುವ ವಯೋ ವೃದ್ಧ ಕುಟುಂಬಸ್ಥರಿಗೆ ತುಮಕೂರು ನಗರಕ್ಕೆ ಹೋಗಿ ಬರುವುದಾಗಿ ಡಿಸೆಂಬರ್ 10ರ ಮಂಗಳವಾರ ಹೋದವರು ಈವರೆಗೂ ಮನೆಗೆ ಹಿಂತಿರುಗದೆ ಕಣ್ಮರೆಯಾಗಿರುವ ಬಗ್ಗೆ ಪೊಲೀಸ್ ಮೆಟ್ಟಿಲೇರಿದ್ದಾರೆ. 

    ನರಸಿಂಹಯ್ಯ ಆರೋಗ್ಯವಂತರಾಗಿ ಕುಟುಂಬಸ್ಥರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದು, ಕುಟುಂಬಸ್ಥರಿಗೆ ತುಮಕೂರು ನಗರಕ್ಕೆ ಹೋಗಿ ಬರುವುದಾಗಿ ಹೇಳಿ ಹೋದವರು ಈವರೆಗೂ ವಾಪಸ್ ಮನೆಗೆ ಬಾರದೆ ಜೊತೆಗೆ ಯಾವುದೇ ಸಂಬಂಧಿಕರು ನೆಂಟರು ನಿಷ್ಠರು ಮನೆಗೂ ಹೋಗದೆ ನಿಗೂಢ ರೀತಿಯಲ್ಲಿ ಕಣ್ಮರೆಯಾಗಿರುವುದು ಕುಟುಂಬಕ್ಕೆ ಆಘಾತ ಮೂಡಿದ್ದು, 85 ವರ್ಷ ಉಳ್ಳ ನರಸಿಂಹಯ್ಯ ಕೋಲು ಮುಖ, ಸಾಧಾರಣ ಮೈಕಟ್ಟು, 6 ಅಡಿ ಎತ್ತರ ,ಕೆಂಪು ಮೈ ಬಣ್ಣ ,ತುಂಬು ತೋಳು ಶರ್ಟ್ ಹಾಗೂ ಬಿಳಿ ಪಂಚೆ ಹುಟ್ಟು ಮನೆಯಿಂದ ಹೋದವರು ಈವರೆಗೂ ಹಿಂತಿರುಗಿರುವುದಿಲ್ಲ ಎಂದು ಮನೆಯವರು ಪೊಲೀಸ್ ಠಾಣೆಗೆ ದೂರು ನೀಡಲಿದ್ದಾರೆ. 

    ಇವರ ಬಗ್ಗೆ ಯಾರಿಗಾದರೂ ಮಾಹಿತಿ ದೊರಕಲ್ಲಿ ತುಮಕೂರು ಜಿಲ್ಲಾ ನಿಸ್ತಂತು ಕೊಠಡಿ. 0816 2278000…9480802900 ಅಥವಾ ಕೋರ ಪೊಲೀಸ್ ಠಾಣೆ 0816242006 . 948080 2949 ಗೆ ಕರೆ ಮಾಡಿ ಮಾಹಿತಿ ನೀಡಲು ಕೋರಿದೆ…

Recent Articles

spot_img

Related Stories

Share via
Copy link