ತುಮಕೂರು ; ಒಂದೇ ದಿನ 1396 ಮಂದಿಗೆ ಸೋಂಕು ; ಐವರ ಸಾವು!!

 ತುಮಕೂರು : 

      ಜಿಲ್ಲೆಯಲ್ಲಿ ಹೊಸದಾಗಿ ಗುರುವಾರ 1396 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಐವರು ಸಾವನ್ನಪ್ಪಿದ್ದಾರೆ. ಇದರೊಂದಿಗೆ ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 34233ಕ್ಕೆ ಏರಿಕೆಯಾಗಿದ್ದು, 383 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. 6028 ಸಕ್ರಿಯ ಪ್ರಕರಣಗಳಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

      1396 ಮಂದಿ ಸೋಂಕಿತರ ಪೈಕಿ ಚಿ.ನಾ.ಹಳ್ಳಿ 69, ಗುಬ್ಬಿ 138, ಕೊರಟಗೆರೆ 89, ಕುಣಿಗಲ್ 97, ಮಧುಗಿರಿ 109, ಪಾವಗಡ 187, ಶಿರಾ 59, ತಿಪಟೂರು 78, ತುಮಕೂರು 509, ತುರುವೇಕೆರೆ 61 ಪ್ರಕರಣಗಳು ಕಂಡುಬಂದಿದ್ದು, ಕಡಿಮೆ ಸೋಂಕಿತರಿದ್ದ ಪಾವಗಡದಲ್ಲೂ 187 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿರುವುದು ಆತಂಕಕಾರಿ ಎನಿಸಿದೆ.

      ಸೋಂಕಿತರಲ್ಲಿ 801 ಪುರುಷರು, 595 ಮಹಿಳೆಯರಿದ್ದು, 5 ವರ್ಷದೊಳಿಗಿನ 19 ಮಕ್ಕಳು ಸೇರಿದ್ದಾರೆ. 60 ವರ್ಷ ಮೇಲ್ಪಟ್ಟ 199 ಹಿರಿಯ ನಾಗರಿಕರಿಗೆ ಸೋಂಕು ದೃಡಪಟ್ಟಿದೆ.

     ಮೃತರ ವಿವರ:

      ಗುರುವಾರ ಮೃತಪಟ್ಟವರಲ್ಲಿ ಮಧುಗಿರಿ ತಾಲೂಕು ಕೆ.ಟಿ.ಹಳ್ಳಿ ಗ್ರಾಮದ 45 ವರ್ಷದ ಪುರುಷ, ತುಮಕೂರು ತಾಲೂಕು ಮಂಚನಹಳ್ಳಿ ಗ್ರಾಮದ 45 ವರ್ಷದ ಮಹಿಳೆ, ತುಮಕೂರಿನ ಭರತ್‍ನಗರದ 58 ವರ್ಷದ ಮಹಿಒಳೆ, ತುಮಕೂರಿನ ಆದರ್ಶ ನಗರದ 58 ವರ್ಷದ ಪುರುಷ ಹಾಗೂ ಕೊರಟಗೆರೆ ನಗರದ ದೊಡ್ಡಪೇಟೆಯ 72 ವರ್ಷದ ಮಹಿಳೆ ಸೇರಿದ್ದು, ಇವರೆಲ್ಲರೂ ಶ್ರೀದೇವಿ, ಸರಕಾರಿ, ಸಿದ್ಧಗಂಗಾ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link