ವಿದ್ಯುತ್ ಕ್ಷೇತ್ರದ ಖಾಸಗಿಕರಣ ವಿರುದ್ಧ ಬೆಸ್ಕಾಂ ಸಿಬ್ಬಂದಿ ಹೋರಾಟ

ಕುಣಿಗಲ್

    ಕೇಂದ್ರ ಸರಕಾರದ 2003 ವಿದ್ಯುತ್ ಕಾಯ್ದೆ ತಿದ್ದುಪಡಿ ಹಾಗೂ ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿಕರಣವನ್ನು ವಿರೋಧಿಸಿ ಪಟ್ಟಣದ ಬೆಸ್ಕಾಂ ಕಚೇರಿ ಎದುರು ಬೆಸ್ಕಾಂ ನೌಕರರು ಹಾಗೂ ಅಧಿಕಾರಿಗಳು ಕಪ್ಪು ಪಟ್ಟಿ ಧರಿಸಿ ಸಾಂಕೇತಿಕವಾಗಿ ಸೋಮವಾರ ಪ್ರತಿಭಟನೆ ನಡೆಸಿದರು.

    ಕರ್ನಾಟಕ ವಿದ್ಯುತ್ ಪ್ರಸರಣಾ ನಿಗಮದ ನೌಕರರ ಸಂಘದ ಮತ್ತು ಅಸೋಸಿಯೇಷನ್‍ಗಳ ಒಕ್ಕೂಟದ ರಾಜ್ಯ ಉಪಾಧ್ಯಕ್ಷ ಶ್ರೀನಿವಾಸ್ ಗೌಡ ಅವರ ನೇತೃತ್ವದಲ್ಲಿ ಕರ್ತವ್ಯಕ್ಕೆ ತೆರಳುವ ಮುನ್ನ ಬೆಸ್ಕಾಂ ನೌಕರರು ಹಾಗೂ ಅಧಿಕಾರಿಗಳು ಕಚೇರಿ ಅವರಣದಲ್ಲಿ ಸಮಾವೇಶಗೊಂಡು ಕೇಂದ್ರ ಸರಕಾರದ ಖಾಸಗಿಕರಣ ನೀತಿ ಹಾಗೂ ವಿದ್ಯುತ್ ಕಾಯ್ದೆ ತಿದ್ದುಪಡಿ ವಿರುದ್ದ ಘೋಷಣೆ ಕೂಗಿದರು.

    ಕರ್ನಾಟಕ ವಿದ್ಯುತ್ ಪ್ರಸರಣಾ ನಿಗಮದ ನೌಕರರ ಸಂಘದ ಮತ್ತು ಅಸೋಸಿಯೇಷನ್‍ಗಳ ಒಕ್ಕೂಟದ ರಾಜ್ಯ ಉಪಾಧ್ಯಕ್ಷ ಶ್ರೀನಿವಾಸ್ ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿ, ಕೇಂದ್ರ ಸರಕಾರವು 2003ರ ವಿದ್ಯುತ್ ಕಾಯ್ದೆಗೆ ಪ್ರಸ್ತಾಪಿತ ತಿದ್ದುಪಡಿ ತರಲು ಮುಂದಾಗಿದೆ. ಇದರ ಜೊತೆಗೆ ವಿದ್ಯುತ್ ಕ್ಷೇತ್ರದಲ್ಲಿ ಹೊರಗುತ್ತಿಗೆ ಹಾಗೂ ಖಾಸಗಿಕರಣ ಮಾಡುತ್ತಿರುವುದು ಕಾರ್ಮಿಕ ವಿರೋದಿ ನೀತಿಯಾಗಿದೆ.

    ಇದರಿಂದ ರೈತರು, ಗ್ರಾಹಕರು, ಜನ ಸಾಮಾನ್ಯರು ಸೇರಿದಂತೆ ಬೆಸ್ಕಾಂ ನೌಕರ ಹಾಗೂ ಅಧಿಕಾರಿಗಳ ವರ್ಗಕ್ಕೂ ಹೊರೆಯಾಗಲಿದೆ ಎಂದು ಆರೋಪಿಸಿದರು. ಈ ಸಂಬಂಧ ಒಂದಿನ ಸಾಂಕೇತಿಕವಾಗಿ ನೌಕರರು ಹಾಗೂ ಅಧಿಕಾರಿಗಳು ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದ್ದೇವೆ. ಕೇಂದ್ರ ಸರಕಾರ ತನ್ನ ಧೋರಣೆಯನ್ನು ಕೈ ಬಿಟ್ಟು ಬೆಸ್ಕಾಂ ನೌಕರರು ಹಾಗೂ ಅಧಿಕಾರಿಗಳ ಸೇರಿದಂತೆ ಸಾರ್ವಜನಿಕರ ಹಿತ ಕಾಯಲು ಮುಂದಾಗದೇ ಕಾಯ್ದೆ ತಿದ್ದುಪಡಿಗೆ ಮುಂದಾದರೇ ಉಗ್ರಹೋರಾಟಕ್ಕೆ ನೌಕರರ ಸಂಘ ಸಿದ್ದವಾಗಲಿದೆ ಎಂದು ಎಚ್ಚರಿಸಿದರು.

   ಇಇ ಪುರೋಷತ್ತಮ್, ಎಇಇ ಗಿರೀಶ್, ಎಒ ಶೋಯಿಲ್ ಅಹಮದ್, ಕೆಪಿಟಿಸಿಎಸ್ ಎಇ ಅಜೀತ್, ಸ್ಥಳಿಯ ಸಮಿತಿ ಅಧ್ಯಕ್ಷ ರಾಜಶೇಖರ್, ಉಪಾಧ್ಯಕ್ಷ ಸುರೇಶ್, ಕಾರ್ಯದರ್ಶಿ ವಿ.ಮಹೇಶ್, ಖಜಾಂಚಿ ಸರದಾರ್ ಪಾಷಾ, ಸಹ ಕಾರ್ಯದರ್ಶಿ ಹೆಚ್.ಬಿ.ರಾಜು, ಸದಸ್ಯರಾದ ರವಿ, ನಟರಾಜು, ಗೀರೀಶ್, ರಾಮಚಂದ್ರ ಮುಂತಾದವರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link