ಚಿಕ್ಕನಾಯಕನಹಳ್ಳಿ :
ಪಟ್ಟಣದ ಮಾರುಕಟ್ಟೆ ಸ್ಥಳವು ಸರ್ಕಾರಿ ಪ್ರೌಡಶಾಲಾ ಆವರಣದಲ್ಲಿ ಮಂಗಳವಾರದಿಂದ ಆರಂಭವಾಗಿದ್ದು ಪುರಸಭೆ ಗುರುತು ಮಾಡಿಕೊಟ್ಟ ಸ್ಥಳದಲ್ಲಿ ವ್ಯಾಪಾರಸ್ಥರು ವ್ಯಾಪಾರ ಶುರು ಮಾಡಿದ್ದಾರೆ. ಮಾರುಕಟ್ಟೆ ಸ್ಥಳಾಂತರ ಜನರಿಗೆ ಅಷ್ಟಾಗಿ ತಿಳಿಯದ ಕಾರಣ ಹಳೆಯ ಮಾರುಕಟ್ಟೆ ಸ್ಥಳವಾದ ವೆಂಕಟರಮಣ ದೇವಾಲಯದ ಬಳಿ ಜನರು ಆಗಮಿಸಿ ವ್ಯಾಪಾರಸ್ಥರು ಯಾರು ಇಲ್ಲದೆ ಶಾಲಾ ಆವರಣಕ್ಕೆ ಮಾರುಕಟ್ಟೆ ಬದಲಾಗಿದೆ ಎಂದ ತಿಳಿದು ಕೊಂಡು ನಂತರ ಹೊಸದಾಗಿ ನಡೆಯುತ್ತಿರುವ ಮಾರುಕಟ್ಟೆ ಜಾಗಕ್ಕೆ ಜನರು ತೆರಳುತ್ತಿದ್ದರು.
ಸರ್ಕಾರಿ ಪ್ರೌಡಶಾಲಾ ಆವರಣಕ್ಕೆ ಮಾರುಕಟ್ಟೆ ಬದಲಾದ ಮೊದಲ ದಿನವೆ 60 ಕ್ಕೂ ಹೆಚ್ಚು ವ್ಯಾಪಾರಸ್ಥರು ಸೇರಿದ್ದರು ಒಂದರಂತೆ ಎಂಟು ಲೈನ್ ಗಳನ್ನು ವ್ಯಾಪಾರಸ್ಥರು ಮಾಡಿದ್ದರು. ಈ ಹಿಂದೆ ನಡೆಯುತ್ತಿದ್ದ ಮಾರುಕಟ್ಟೆಗೂ ಈಗ ನಡೆಯುತ್ತಿರುವ ಮಾರುಕಟ್ಟೆಯೂ ವಿಶಾಲವಾಗಿರುವುದರಿಂದ ವ್ಯಾಪಾರಸ್ಥರು ಅಂತರ ಕಾಪಾಡಿಕೊಂಡು, ಪುರಸಭೆ ಗುರುತಿಸಿರುವ ಸ್ಥಳದಲ್ಲೆ ವ್ಯಾಪಾರಸ್ಥರು ವ್ಯಾಪಾರ ಮಾಡುತ್ತಿದ್ದರು.
ಮಾರುಕಟ್ಟೆಗೆ ಬರುವ ಜನರಿಗೂ ಅವರು ತರುವ ವಾಹನಗಳಿಂದಲೂ ಯಾವುದೆ ಸಮಸ್ಯೆ ಎದುರಾಗದಂತೆ ಪುರಸಭೆ ಒಂದು ಭಾಗದಲ್ಲಿ ವಾಹನ ನಿಲುಗಡೆಗೂ ಸೂಚಿಸಿತ್ತು, ಕೆಲ ವ್ಯಾಪಾರದ ಸ್ಥಳದಲ್ಲಿ ಹೂವಿನ ವ್ಯಾಪಾರವೆ ಒಂದು ಭಾಗ ಸೊಪ್ಪಿನ ವ್ಯಾಪಾರವೆಲ್ಲ ಒಂದು ಕಡೆ ನಡೆಯುತ್ತಿತ್ತು.
ಮಾರುಕಟ್ಟೆಯಲ್ಲಿ ವ್ಯಕ್ತಿಗತ ಅಂತರ ಕಾಯ್ದುಕೊಂಡು, ಮಾಸ್ಕ್ ಧರಿಸಿ ವ್ಯಾಪಾರ ಮಾಡುತ್ತಿರುವರೆ ಎಂದು ಪುರಸಭೆಯ ಆರೋಗ್ಯ ಸಹಾಯಕರಾದ ಜ್ಯೋತಿಶ್ವರಿ ಸ್ಥಳಕ್ಕೆ ಆಗಮಿಸಿ ವ್ಯಾಪಾರ ಹಾಗೂ ಜನರನ್ನು ಗಮನಿಸುತ್ತಿದ್ದರು.
ಮದ್ಯವನ್ನು ಶೇಖರಿ ಸಿಟ್ಟ ಜನ ಸರ್ಕಾರ 14 ದಿನಗಳ ಕಾಲ ಕಠಿಣ ರೂಲ್ಸ್ ಜಾರಿಗೆ ತರಲಿದೆ ಜನತಾ ಕರ್ಪ್ಯೂ ಎಂದಾಕ್ಷಣ ಬಾರ್ ಗಳು ಯಾವಾಗ ಬಾಗಿಲು ಮುಚ್ಚತವೆಯೊ ಎಂಬ ಆತಂಕದಿಂದ ಕೆಲ ಮದ್ಯಪಾನ ಪ್ರಿಯರು ಸೋಮವಾರ ಸಂಜೆಯೆ ಬಾರ್ ಗಳಿಗೆ ತೆರಳಿ ಒಂದು ವಾರ ಕ್ಕಾಗುವಷ್ಟು ಮದ್ಯವನ್ನು ತಮ್ಮ ಮನೆಗಳಿಗೆ ತರಿಸಿಕೊಂಡಿದ್ದಾರೆ.
ಸರ್ಕಾರ ಸೋಮವಾರ ಸಂಜೆ ವೇಳೆಗೆ 14 ದಿನಗಳು ಲಾಕ್ ಡೌನ್ ಇನ್ನೂ ಕಠಿಣ ನಿಯಮಗಳು ಇಡಿ ರಾಜ್ಯಾದ್ಯಂತ ಜಾರಿಗೆ ಬರಲಿದೆ ಎಂದು ಹೇಳಿಕೆ ಕೊಟ್ಟ ತಕ್ಷಣವೆ ಆ ಕ್ಷಣಕ್ಕಾಗುವಷ್ಟು ದಿನಕ್ಕಾಗುವಷ್ಟು ಮದ್ಯವನ್ನು ಕೊಂಡುಕೊಳ್ಳುತ್ತಿದ್ದರು. ಆದರೆ ಕಠಿಣ ನಿಯಮ ಎನ್ನುತ್ತಿದ್ದಂತೆ ಒಂದೇ ಬಾರಿಗೆ ಸಾವಿರ 10 ಸಾವಿರಕ್ಕಾಗುವಷ್ಟು ಮದ್ಯವನ್ನು ಖರೀದಿ ಮಾಡಿ ಕೊಂಡೊಯ್ದ ದೃಶ್ಯ ಸಾಮಾನ್ಯವಾಗಿ ಬಾರ್ ಗಳ ಮುಂದೆ ಕಾಣಿಸುತ್ತಿತ್ತು.
ನಗರಗಳಿಂದ ಹಳ್ಳಿಗಳಿಗೆ ಆಗಮಿಸಿದ ಜನ ಇನ್ನೂ ಲಾಕ್ ಡೌನ್ ನಿಮಯ ಜಾರಿ ಎಂಬ ಸಂದೇಶ ರವಾನೆಯಾಗುತ್ತಿದ್ದಂತೆ ಬೆಂಗಳೂರು, ತುಮಕೂರು ನಂತೆ ಬೇರೆ ಊರುಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಾಕಷ್ಟು ಮಂದಿ ವಾಪಾಸ್ ತಮ್ಮ ಊರುಗಳಿಗೆ ತೆರಳುತ್ತಿದ್ದರು,
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ