ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಶುದ್ಧ ನೀರಿನ ಘಟಕ ಕೊಡುಗೆ

ಶಿರಾ

       ದೇವರ ಸನ್ನಿದಾನಕ್ಕೆ ಬರುವಂತ ಭಕ್ತರಿಗೆ ಶುದ್ದ ಕುಡಿಯುವ ನೀರು ಕೊಡ ಬೇಕೆಂಬ ಉದ್ದೇಶದಿಂದ ಜಲಪ್ರಸಾದ ಕಾರ್ಯಕ್ರಮದಡಿ ಐತಿಹಾಸಿಕ ಪ್ರಸಿದ್ದ ಶ್ರೀಕ್ಷೇತ್ರಗಳಿಗೆ ಶುದ್ದ ಕುಡಿಯುವ ನೀರಿನ ಘಟಕ ನೀಡಲಾಗಿದೆ. ನೀರು ಮನುಷ್ಯ ಆರೋಗ್ಯ ಕಾಪಾಡುವ ಜೀವಜಲ ನೀರಿನ ಸಂರಕ್ಷಣೆ ಪ್ರತಿಯೊಬ್ಬ ನಾಗರೀಕನ ಜವಾಬ್ದಾರಿಯಾಗ ಬೇಕೆಂದು ಖ್ಯಾತ ವೈದ್ಯ, ಸಮಾಜ ಸೇವಕ ಡಾ.ಎಂ.ರಾಜೇಶ್ ಗೌಡ ಹೇಳಿದರು.

       ಅವರು ತಾಲೂಕಿನ ಚಿಕ್ಕನಹಳ್ಳಿ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಜಲಪ್ರಸಾದ ಯೋಜನೆಯಡಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಉಡುಗೊರೆಯಾಗಿ ನೀಡಿ ಮಾತನಾಡಿದರು. ಇಂದು ಕುಡಿಯುವ ನೀರಿಗೆ ಹಾಹಾಕಾರ ಏರ್ಪಡುತ್ತಿದ್ದು, ಇದಕ್ಕೆ ಕಾರಣ ಪರಿಸರ ನಾಶ, ಅಭಿವೃದ್ದಿಯ ಹೆಸರಿನಲ್ಲಿ ಗಿಡಮರಗಳ ನಾಶ ಇದರಿಂದ ಕಾಲಕ್ಕೆ ಸರಿಯಾಗಿ ಮಳೆ ಬಾರದೆ ಜಲಾಶಯಗಳು, ಕೆರೆಕಟ್ಟೆಗಳು ತುಂಬದೆ ಅಂತರ್ಜಲ ಕುಸಿತವಾಗಿ ನೀರಿಗೆ ಅಭಾವ ಉಂಟಾಗಿದೆ.

      ನೀರಿನ ಸಮಸ್ಯೆಯನ್ನು ಮನಗಂಡು ತಾಲೂಕಿನಲ್ಲಿ ಸುಮಾರು 29 ಶಾಲೆ ಹಾಗೂ ದೇವಸ್ಥಾನಗಳಲ್ಲು ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಜಲಪ್ರಸಾದ ಎಂಬ ಯೋಜನೆಯ ಮೂಲಕ ಅಳವಡಿಸಲಾಗುತ್ತಿದೆ. ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಮತ್ತು ದೇವಸ್ಥಾನಗಳಲ್ಲಿ ಬರುವ ಭಕ್ತರಿಗೆ ಶುದ್ಧ ಕುಡಿಯುವ ನೀರು ಸಿಗಲಿ ಎಂಬ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದರು.

      ಬರದಿಂದ ರೈತ ಮತ್ತು ಜನಸಾಮಾನ್ಯ ಬದುಕಿನ ಮೇಲೆ ಕೆಟ್ಟ ಪರಿಣಾಮ ಬಿರುತ್ತಿದ್ದು, ಶಿರಾ ತಾಲೂಕಿಗೆ ಶಾಶ್ವತ ನೀರಾವರಿ ಯೋಜನೆಗಳ ಅನುಷ್ಟಾನ ಅಗತ್ಯವಾಗಿದೆ. ಕುಡಿಯುವ ನೀರು ಮನುಷ್ಯ ಸೇರಿದಂತೆ ಸಕಲ ಜೀವರಾಶಿಗಳಿಗೆ ಆಧಾರ ಪ್ರತಿಯೊಬ್ಬರ ಬಳಕೆಗೆ ಪ್ರತಿದಿನವೂ ಬೇಕಾಗುವ ಅತ್ಯಮೂಲ್ಯ ನೈಸರ್ಗಿಕ ಸಂಪತ್ತು.

       ಆದ್ದರಿಂದ ನೀರಿನ ಮಿತ ಬಳಕೆ, ಸದ್ಬಳಕೆ ಮತ್ತು ಸಂರಕ್ಷಣೆ ಬಗ್ಗೆ ಪ್ರತಿಯೊಬ್ಬರಲ್ಲೂ ತಿಳುವಳಿಕೆ ಇರಬೇಕು ಈ ಹಿನ್ನೆಲೆಯಲ್ಲಿ ಕುಡಿಯುವ ನೀರನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು. ಕಾರ್ಯಕ್ರಮದಲ್ಲಿ ಶ್ರೀ ರಾಮಾಂಜನೇಯ ಸೇವಾ ಸಮಿತಿಯ ಅಧ್ಯಕ್ಷರಾದ ಜಯಕುಮಾರ್, ಕಾರ್ಯದರ್ಶಿ ಬಿ.ಎಂ.ರಾಜಣ್ಣ, ಬಿ.ಪಿ.ಶಾಂತರಾಜು, ಗ್ರಾ.ಪಂ. ಸದಸ್ಯ ಬಸವರಾಜು, ಹನುಮಂತರಾಯಪ್ಪ, ಮಾದೇವಪ್ಪ , ಎಂ.ಎಲ್.ಎ. ರಾಮಣ್ಣ, ಬಿ.ಸಿ.ರಂಗನಾಥಪ್ಪ, ಸಿದ್ದೇಶ್ವರ, ಕೃಷ್ಣಪ್ಪ, ಈರಣ್ಣ, ನಾರಾಯಣಪ್ಪ, ರಾಜು.ಕೆ, ಶಿವರಾಮಯ್ಯ, ರಾಜಣ್ಣ.ಆರ್, ಸಣ್ಣ ರಂಗಪ್ಪ, ದೇವಸ್ಥಾನದ ಅರ್ಚಕ ಸತ್ಯಮೂರ್ತಿ ಮತ್ತಿತರರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link