ನವದೆಹಲಿ :
ಹೈದರಾಬಾದ್ ಮೃಗಾಲಯದ 8 ಏಷ್ಯಾಟಿಕ್ ಸಿಂಹಗಳಿಗೆ ಕೋವಿಡ್-19 ಪಾಸಿಟಿವ್ ದೃಢಪಟ್ಟಿದೆ.
ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಉದ್ಯಾನವನಗಳು ಮತ್ತು ಅಭಯಾರಣ್ಯಗಳನ್ನು ಮುಚ್ಚಲು ಕೇಂದ್ರ ಪರಿಸರ ಸಚಿವಾಲಯ ನಿರ್ದೇಶನ ನೀಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹೈದರಾಬಾದ್‌ನ ಸೆಲ್ಯುಲಾರ್ ಮತ್ತು ಆಣ್ವಿಕ ಜೀವಶಾಸ್ತ್ರ ಕೇಂದ್ರ (ಸಿಸಿಎಂಬಿ) ಸೋಮವಾರ ಸಿಂಹಗಳಿಗೆ ಸೋಂಕನ್ನು ಸಚಿವಾಲಯದ ವನ್ಯಜೀವಿ ವಿಭಾಗಕ್ಕೆ ದೃಢಪಡಿಸಿದ ನಂತರ ಈ ನಿರ್ದೇಶನ ಬಂದಿದೆ.
8 ಸಿಂಹಗಳಲ್ಲಿ ಒಣ ಕೆಮ್ಮು, ಮೂಗು ಸೋರುವಿಕೆ ಮತ್ತು ಹಸಿವಿನ ಕೊರತೆ ಸೇರಿದಂತೆ ಸೌಮ್ಯ ರೋಗಲಕ್ಷಣಗಳನ್ನು ಮೃಗಾಲಯದ ಪಶುವೈದ್ಯರು ಗಮನಿಸಿದ ಕೆಲವು ದಿನಗಳ ನಂತರ ಸಿಂಹಗಳ ಒರೊಫಾರ್ಂಜಿಯಲ್ ಸ್ವ್ಯಾಬ್ ಮಾದರಿ ಸಂಗ್ರಹಿಸಿ ಸಿಸಿಎಂಬಿಗೆ ಕಳುಹಿಸಲಾಗಿತ್ತು.
Eight Asiatic lions housed in Hyderabad zoo infected with COVID-19
Read @ANI Story | https://t.co/DdkfwkSLSi pic.twitter.com/knmllRlWbJ
— ANI Digital (@ani_digital) May 4, 2021
ಸಿಸಿಎಂಬಿಯ ನಿರ್ದೇಶಕ ರಾಕೇಶ್ ಮಿಶ್ರಾ, ‘ಸಿಂಹಗಳಲ್ಲಿ ಕೋವಿಡ್ ಸೌಮ್ಯ ರೋಗಲಕ್ಷಣಗಳು ಕಂಡುಬಂದ ಬಗ್ಗೆ ನಮಗೆ ಒಂದು ವಾರದ ಹಿಂದೆ ತಿಳಿಸಲಾಯಿತು. ನಾವು ಆರ್‌ಟಿ-ಪಿಸಿಆರ್ ಪರೀಕ್ಷೆ ನಡೆಸಿದ ನಂತರ, ಅವುಗಳಲ್ಲಿ 8 ಸಿಂಹಗಳಿಗೆ ಪಾಸಿಟಿವ್ ಬಂದಿದೆ ಎಂದು ತಿಳಿಸಿದ್ದಾರೆ.
ವೈರಸ್ ಮೊದಲು ಪ್ರಾಣಿಗಳ ಪಾಲನೆದಾರರಿಗೆ ತಗುಲಿರಬಹುದು ಮತ್ತು ನಂತರ ಅದು ಸಿಂಹಗಳಿಗೆ ಹರಡಬಹುದು ಎಂದು ವರದಿ ಸೂಚಿಸುತ್ತದೆ. ಪ್ರಾಣಿಗಳನ್ನು ಹೇಗೆ ನೋಡಿಕೊಳ್ಳಬೇಕು ಮತ್ತು ಇತರ ಪ್ರಾಣಿಗಳು ವೈರಸ್ ತಗುಲದಂತೆ ಹೇಗೆ ನೋಡಿಕೊಳ್ಳಬೇಕು ಎಂಬುದರ ಬಗ್ಗೆ ನಾವು ಮೃಗಾಲಯದ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದ್ದೇವೆ ಎಂದು ಮಿಶ್ರಾ ಹೇಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ