ಕೊರಟಗೆರೆ :
ಸರಕಾರಿ ನ್ಯಾಯಬೆಲೆಅಂಗಡಿಯಲ್ಲಿ ಬಯೋಮೆಟ್ರಿಕ್ ಪದ್ದತಿಯಿಂದಕೊರೊನಾರೋಗ ಹರಡುವ ಬೀತಿಎದುರಾಗಿದೆ. ಸರಕಾರ ಬಯೊಮೆಟ್ರಿಕ್ ರದ್ದುಪಡಿಸಿ ಓಟಿಪಿ ಅಥವಾಚೆಕ್ಲಿಸ್ಟ್ನ ಮೂಲಕ ಪಡಿತರ ಪದಾರ್ಥ ವಿತರಣೆಗೆ ಅವಕಾಶ ಕಲ್ಪಿಸುವಂತೆ ಆಗ್ರಹಿಸಿ ಕೊರಟಗೆರೆ ನ್ಯಾಯಬೆಲೆ ಅಂಗಡಿಗಳ ಮಾಲೀಕರ ಸಂಘ ಶುಕ್ರವಾರ ತಹಶೀಲ್ದಾರ್ ಗೋವಿಂದರಾಜು ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.
ಕೊರಟಗೆರೆ ತಾಲೂಕಿನ ನಾಲ್ಕು ಹೋಬಳಿ ವ್ಯಾಪ್ತಿಯಲ್ಲಿ 84ಸರಕಾರಿ ನ್ಯಾಯಬೆಲೆ ಅಂಗಡಿಗಳಿವೆ. ಅಂತ್ಯೋದಯ, ಬಿಪಿಎಲ್ ಮತ್ತುಎಪಿಎಲ್ ಸೇರಿ 40ಸಾವಿರಕ್ಕೂ ಅಧಿಕ ಪಡಿತರ ಕಾರ್ಡುಗಳಿವೆ. ಜನರು ಪಡಿತರ ಪಡೆಯುವಾಗಕಡ್ಡಾಯವಾಗಿ ಬಯೋಮೆಟ್ರಿಕ್ ನೀಡಬೇಕಾಗಿದೆ. ಕೊರೊನಾರೋಗದ ಸಾಮಾಜಿಕಅಂತರ ಮತ್ತು ಹರಡುವಿಕೆ ತಡೆಯಲು ನಮಗೆ ಕಷ್ಟಸಾಧ್ಯವಾಗಿದೆ. ತಕ್ಷಣ ಬಯೋಮೆಟ್ರಿಕ್ರದ್ದು ಪಡಿಸುವಂತೆರಾಜ್ಯ ಸರಕಾರಕ್ಕೆಒತ್ತಾಯ ಮಾಡಿದರು.
ಕೊರಟಗೆರೆ ಸರಕಾರಿ ನ್ಯಾಯಬೆಲೆಅಂಗಡಿ ಮಾಲೀಕರ ಸಂಘದಅಧ್ಯಕ್ಷಚಿಕ್ಕರಂಗಯ್ಯ ಮಾತನಾಡಿಕರ್ನಾಟಕರಾಜ್ಯದಲ್ಲಿ ಈಗಾಗಲೇ ಕೊರೊನಾರೋಗದ ಸೊಂಕಿನಿಂದ 83ಜನ ನ್ಯಾಯಬೆಲೆಅಂಗಡಿ ಮಾಲೀಕರು ಮೃತಪಟ್ಟಿದ್ದಾರೆ. ಕೊರೊನಾ ಲಾಕ್ಡೌನ್ ವೇಳೆ ಕರ್ನಾಟಕ ಸರಕಾರ ಹಿಂದಿನ ವರ್ಷ ಬಯೋಮೆಟ್ರಿಕ್ ನಿಲ್ಲಿಸಿ ಓಟಿಪಿಗೆ ಅವಕಾಶ ಕಲ್ಪಿಸಿತ್ತು. ಅದೇರೀತಿಪ್ರಸ್ತುತ ವರ್ಷವುಓಟಿಪಿಗೆ ಅವಕಾಶ ಕಲ್ಪಿಸಬೇಕಾಗಿದೆಎಂದುಆಗ್ರಹ ಮಾಡಿದರು.
ದಾಸರಹಳ್ಳಿ ಸರಕಾರಿ ನ್ಯಾಯಬೆಲೆಅಂಗಡಿಯ ಮಾಲೀಕರಮೇಶ್ ಮಾತನಾಡಿ ನ್ಯಾಯಬೆಲೆಅಂಗಡಿ ಮಾಲೀಕರಿಗೆ ಸರಕಾರಯಾವುದೇ ಭದ್ರತೆ ಕಲ್ಪಿಸಿಲ್ಲ. ಕೊರಟಗೆರೆತಾಲೂಕಿನ 84ಪಡಿತರ ಕೇಂದ್ರದಲ್ಲಿಯು ಕನಿಷ್ಟ 700ರಿಂದ 800ಪಡಿತರ ಕಾರ್ಡುಗಳಿವೆ. ಗ್ರಾಮೀಣಜನತೆಯ ನೇರವಾಗಿ ಸಂಪರ್ಕ ನಮಗೆ ಇರುತ್ತದೆ. ನಮಗೆ ಆರೋಗ್ಯಭದ್ರತೆಯಜೊತೆ ಸರಕಾರದ ವಿಶೇಷ ಸೌಲಭ್ಯಘೋಷಣೆ ಮಾಡಬೇಕುಎಂದು ಹೇಳಿದರು.
ಕೊರಟಗೆರೆ ತಹಶೀಲ್ದಾರ್ ಗೋವಿಂದರಾಜು ಮಾತನಾಡಿ ಸರಕಾರಿ ನ್ಯಾಯಬೆಲೆಅಂಗಡಿಯ ಮಾಲೀಕರು ಸಲ್ಲಿಸಿರುವ ಮನವಿಯನ್ನು ನಾನು ಕೊಡಲೇಜಿಲ್ಲಾಧಿಕಾರಿ ಮತ್ತು ಸರಕಾರಕ್ಕೆ ಪತ್ರ ಬರೆಯುತ್ತೇನೆ. ಜನತೆ ಪಡಿತರ ಪಡೆಯುವಾಗ ಸಾಮಾಜಿಕಅಂತರ ಮತ್ತುಕೊರೊನಾರೊಗದ ಹರಡುವಿಕೆಯ ಬಗ್ಗೆ ಎಚ್ಚರಿಕೆ ವಹಿಸಬೇಕಾದ ಅನಿವಾರ್ಯತೆಇದೆಎಂದು ತಿಳಿಸಿದರು.
ಮನವಿ ಸಂದರ್ಭದಲ್ಲಿ ಕೊರಟಗೆರೆ ನ್ಯಾಯಬೆಲೆ ಅಂಗಡಿ ಮಾಲೀಕರ ಸಂಘದ ನಿರ್ದೆಶಕರಾದ ದಾಸರಹಳ್ಳಿ ರಮೇಶ್, ರಂಗರಾಜು, ನಾಗೇಶ್, ಆನಂದ್, ಸೋಮಶೇಖರ್, ರಾಮಚಂದ್ರಪ್ಪ, ಶಿವಣ್ಣ, ರಂಗಧಾಮಯ್ಯ, ನಂದೀಶ್ ಸೇರಿದಂತೆ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ