ಗುಬ್ಬಿ : ಪಿಡಿಓ ಬದಲಿಸುವಂತೆ ಗ್ರಾ.ಪಂ.ಸದಸ್ಯರ ಆಗ್ರಹ!!

 ಗುಬ್ಬಿ:

      ದೊಡ್ಡಗುಣಿ ಗ್ರಾ.ಪಂ ಪಿಡಿಓ ಅವರನ್ನು ಬದಲಾಯಿಸಬೇಕು ಎಂದು ಗ್ರಾ.ಪಂ.ಸದಸ್ಯರು ಒಕ್ಕೊರಲಿನಿಂದ ಶಾಸಕ ಎಸ್.ಆರ್.ಶ್ರೀನಿವಾಸ್ ಅವರಿಗೆ ಮನವಿ ಮಾಡಿದ್ದಾರೆ.

      ತಾಲೂಕಿನ ದೊಡ್ಡಗುಣಿ ಗ್ರಾ.ಪಂ ವ್ಯಾಪ್ತಿಯಲ್ಲಿ ನಡೆದ ಕೊರೊನ ಟಾಸ್ಕ್‍ಪೋರ್ಸ್ ಸಭೆಯಲ್ಲಿ ಶಾಸಕ ಎಸ್.ಆರ್.ಶ್ರೀನಿವಾಸ್ ಮಾತನಾಡಲು ಮುಂದಾದ ತಕ್ಷಣ ಸದಸ್ಯರು ನಮಗೆ ಯಾವುದೇ ಮಾಹಿತಿಯನ್ನು ಪಂಚಾಯಿತಿ ನೀಡುತ್ತಿಲ್ಲ ಸದಸ್ಯರು ಲೆಕ್ಕಕ್ಕೆ ಇಲ್ಲದಂತಾಗಿದ್ದೇವೆ ಎಂದು ತಮ್ಮ ಬೇಸರ ವ್ಯಕ್ತಪಡಿಸಿದರು. ಆಗ ಶಾಸಕ ಎಸ್.ಆರ್.ಶ್ರೀನಿವಾಸ್ ಪ್ರತಿಕ್ರಿಯಿಸಿ ಕೂಡಲೆ ಪಿಡಿಓ ಬದಲಾವಣೆ ಮಾಡಲಾಗುತ್ತದೆ ಆದರೇ ದೊಡ್ಡಗುಣಿ ಪಂಚಾಯತಿಯನ್ನು ಕೆಂಪು ವಲಯ ಎಂದು ಗುರುತಿಸಲಾಗಿದ್ದು ಸದಸ್ಯರು ಬಹಳ ತಾಳ್ಮೆ ಮತ್ತು ಎಚ್ಚರಿಕೆಯಿಂದ ಇರಬೇಕು ಎಂದರು.

     ಮುಂದಿನ ದಿನಗಳಲ್ಲಿ ಮೂರನೇ ಅಲೆ ಮಕ್ಕಳಿಗೆ ಬಡಿಯುತ್ತದೆ ಎಂಬ ಮಾತುಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಪೆÇೀಷಕರು ಎಚ್ಚರಿಕೆಯಿಂದ ಇರಲು ಮನವಿ ಮಾಡಿದರು. ಪಾಸಿಟಿವ್ ಬಂದ ಕೂಡಲೆ ಕಡ್ಡಾಯವಾಗಿ ಕೋವಿಡ್‍ಕೇರ್ ಸೆಂಟರ್‍ಗೆ ಕಳಿಸಲೇಬೇಕು ಎಂದು ತಿಳಿಸಿದರು.

     ತಹಶೀಲ್ದಾರ್ ಡಾ.ಪ್ರದೀಪ್‍ಕುಮಾರ್ ಹಿರೇಮಠ್ ಮಾತನಾಡಿ ಈ ಭಾಗದ ಕಂಚಿಗಾನಹಳ್ಳಿ, ದೊಡ್ಡಗುಣಿ, ತಗ್ಗಿಹಳ್ಳಿ, ಗ್ರಾಮದಲ್ಲಿ ಪ್ರಕರಣಗಳ ಸಂಖ್ಯೆ ಜಾಸ್ತಿ ಇದ್ದು, ಜನರು ಹೆಚ್ಚು ಹೊರ ಬರುತ್ತಿರುವುದರಿಂದ ಈ ಭಾಗದಲ್ಲಿ ಸೋಂಕು ನಿಯಂತ್ರಣಕ್ಕೆ ಬರುತ್ತಿಲ್ಲ ಎಂದರು. ನಿಮ್ಮ ಜೀವ, ಜೀವನ ನಿಮ್ಮ ಕೈನಲ್ಲೆ ಎನ್ನುವುದನ್ನು ಮರೆಯಬೇಡಿ, ಸರಕಾರ ಮಾಡಿರುವ ಆದೇಶವನ್ನು ಎಲ್ಲರೂ ಪಾಲಿಸಿ ಎಂದು ತಿಳಿಸಿದರು.

     ಡಿವೈಎಸ್‍ಪಿ ಕುಮಾರಪ್ಪ ಮಾತನಾಡಿ 45 ವರ್ಷದ ಮೇಲ್ಪಟ್ಟವರು ಲಸಿಕೆ ಪಡೆಯಲೇ ಬೇಕಿದೆ ಇದರಿಂದ ನಿಮ್ಮಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಲಸಿಕೆ ಹಾಕಿಸಿ ಕೊಂಡರೆ ಅಪಾಯ ಗುಂಪುಗೂಡಿ ಕ್ರಿಕೆಟ್ ಆಡುವುದು, ಇಸ್ಪೀಟ್ ಆಡುವಂತ ಪ್ರಕರಣಗಳು ಕಂಡು ಬಂದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

     ಈ ಸಂದರ್ಭದಲ್ಲಿ ಗ್ರಾ.ಪಂ.ಅಧ್ಯಕ್ಷೆ ಸವಿತಾಶಿವಾನಂದ್, ಗ್ರಾ.ಪಂ.ನ ಎಲ್ಲಾ ಸದಸ್ಯರುಗಳು, ನೋಡಲ್ ಅಧಿಕಾರಿ ಆನಂದ್‍ಕುಮಾರ್, ಸಿಪಿಐ ನದಾಫ್, ಅಭಿವೃದ್ಧಿ ಅಧಿಕಾರಿ ರಂಗಸ್ವಾಮಿ, ಆಶಾ, ಅಂಗನವಾಡಿ ಕಾರ್ಯಕರ್ತರು, ಆಸ್ಪತ್ರೆ ಸಿಬ್ಬಂದಿ ಇನ್ನಿತರರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap