ತುಮಕೂರು : ಅನಧಿಕೃತವಾಗಿ ಅಡವಿಟ್ಟಿದ್ದ ಆಟೋಗಳು ವಶ

 ತುಮಕೂರು :

      ಹಣಕಾಸು ಸಂಸ್ಥೆಯಲ್ಲಿ ಸಾಲ ಪಡೆದ ಆಟೋಗಳನ್ನು ಅನಧಿಕೃತವಾಗಿ ಖಾಸಗಿಯವರಿಗೆ ಅಡವಿಟ್ಟಿದ್ದ ಆರು ಆಟೋಗಳನ್ನು ಪೊಲೀಸರು ವಶಪಡಿಸಿಕೊಂಡು ಸಾಲ ನೀಡಿದ ಸಂಸ್ಥೆ ವಶಕ್ಕೆ ಒಪ್ಪಿಸಿದ್ದಾರೆ.

      ನಗರದ ತುಮಕೂರು ಡೀಲರ್ಸ್, ಏಜೆಂಟ್ಸ್ ಮತ್ತು ಫೈನಾನ್ಷಿಯರ್ಸ್ ಕ್ಷೇಮಾಭಿವೃದ್ಧಿ ಸಂಘದಿಂದ ಆಟೋ ಸಾಲ ಪಡೆದವರು ಖಾಸಗಿಯವರಿಗೆ ಆಟೋಗಳನ್ನು ಅಡಮಾನ ಮಾಡಿದ್ದರು. ಜೊತೆಗೆ ಸಾಲ ಮರುಪಾವತಿ ಮಾಡಿರಲಿಲ್ಲ. ಇದರಿಂದ ನಮಗೆ ವ್ಯವಹಾರ ನಡೆಸಲು ಸಮಸ್ಯೆಯಾಗಿದೆ, ಅಡಮಾನ ಮಾಡಿರುವ ಆಟೋಗಳನ್ನು ಬಿಡಿಸಿಕೊಡುವಂತೆ ತುಮಕೂರು ಡೀಲರ್ಸ್, ಏಜೆಂಟ್ಸ್ ಮತ್ತು ಫೈನಾನ್ಷಿಯರ್ಸ್ ಕ್ಷೇಮಾಭಿವೃದ್ಧಿ ಸಂಘದವರು ತುಮಕೂರು ಡಿವೈಎಸ್‍ಪಿ ಹೆಚ್.ಶ್ರೀನಿವಾಸ್ ಅವರಿಗೆ ಮನವಿ ಸಲ್ಲಿಸಿದ್ದರು.

      ಈ ಬಗ್ಗೆ ವಿಚಾರಣೆ ನಡೆಸಿದ ಡಿವೈಎಸ್‍ಪಿಯವರು. ದಾಖಲಾತಿಗಳಿಲ್ಲದೆ ಅಕ್ರಮವಾಗಿ ಆರು ಆಟೋಗಳನ್ನು ಅಡಮಾನ ಮಾಡಿಕೊಂಡಿರುವುದು ಗೊತ್ತಾಯಿತು. ಕಾನೂನು ಕ್ರಮದ ಅನ್ವಯ ಆಟೋಗಳನ್ನು ವಶಪಡಿಸಿಕೊಂಡ ಪೊಲೀಸರು, ಹಣಕಾಸು ಸಂಸ್ಥೆ ವಶಕ್ಕೆ ಒಪ್ಪಿಸಿದರು.

      ನಗರದಲ್ಲಿ ಈ ರೀತಿಯ ಅನಧಿಕೃತ ಚಟುವಟಿಕೆಗಳನ್ನು ನಡೆಸುವವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

      ತುಮಕೂರು ಡೀಲರ್ಸ್, ಏಜೆಂಟ್ಸ್ ಮತ್ತು ಫೈನಾನ್ಷಿಯರ್ಸ್ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಟಿ.ಆರ್.ಸುರೇಶ್, ಗೌರವಾಧ್ಯಕ್ಷ ಸೈಯದ್ ರಫಿಕ್, ಸದಸ್ಯರಾದ ಲೋಕೇಶ್, ವೆಂಕಟೇಶ್ ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link