ತಿಪಟೂರು :
ಕೋವಿಡ್ -19 ಲಾಕ್ಡೌನ್ ಪ್ರಾರಂಭವಾದಾಗಿನಿಂದಲೂ ಹಸಿವಿಂದ ಯಾರು ಇರಬಾರದು ಎಂಬ ಉದ್ದೇಶದಿಂದ ಈ ಕೆ.ಟಿ.ಎಸ್ ಸಂಚಾರಿ ಕ್ಯಾಂಟೀನ್ ಪ್ರಾರಂಭಿಸಲಾಗಿದ್ದು ಅದು 30 ದಿನ ಪೂರ್ಣಗೊಂಡ ಸಂತಸಕ್ಕಾಗಿ ಇಂದು ಎಲ್ಲರಿಗೂ ಹೋಳಿಗೆ, ಕೋಸಂಬರಿ ಮತ್ತು ಪಲಾವ್ ವಿತರಿಸಲಾಗುತ್ತಿದೆ ಎಂದು ಕೆ.ಪಿ.ಸಿ.ಸಿ ಕಾರ್ಮಿಕ ಘಟಕದ ಕಾರ್ಯದರ್ಶಿ ಕೆ.ಟಿ.ಶಾಂತಕುಮಾರ್ ತಿಳಿಸಿದರು.
ಹೋಳಿಗೆಯನ್ನು ವಿತರಿಸಿ ಮಾತನಾಡಿದ ಅವರು ಇಂದು ನಮ್ಮ ನಾಯಕ ಸಿದ್ದರಾಮಯ್ಯನವರ ಅನ್ನಭಾಗ್ಯ ಯೋಜನೆಯನ್ನು ಅನುಸರಿಸಿ, ಲಾಕ್ಡೌನ್ ಸಮಯದಲ್ಲಿ ನಿರ್ಗತಿಕರಿಗೆ ಮತ್ತು ಕೂಲಿ ಕೆಲಸಕಳೆದುಕೊಂಡ ಅಸಂಘಟಿತ ನೌಕರರಿಗೆ ಆಹಾರದ ಕಿಟ್ಗಳನ್ನು ವಿತರಿಸುವ ಸಂದರ್ಭದಲ್ಲಿ ಯಾರೋ ಒಬ್ಬರು ನೀವು ಆಹಾರದ ಕಿಟ್ ಕೊಡುತ್ತಿರುವುದು ಸಂತೋಷದ ವಿಷಯ ಆದರೆ ನಗರದಲ್ಲಿ ಹೋಟೆಲ್ಗಳಿಲ್ಲದೇ ಮತ್ತು ಬಸ್ ಸಂಚಾರವಿಲ್ಲದೇ ರೋಗಿಗಳಿಗೆ ಆಹಾರ ಸಿಗುತ್ತಿಲ್ಲವೆಂದಾಗ ನಾವು ಈ ಉಚಿತ ಕೆ.ಟಿ.ಎಸ್ ಸಂಚಾರಿ ಕ್ಯಾಂಟಿನ್ ಆರಂಬಿಸಿದೆವು ಇದರಿಂದ ರೋಗಿಗಳಿಗೆ ಅವರ ಸಹಚರರಿಗೆ ಮತ್ತು ಅಸಹಾಯಕರಿಗೆ ಊಟವನ್ನು ಕೊಡಲು ಪ್ರಾರಂಭಿಸಿದೆವು. ಈ ಕಾರ್ಯ ಇಂದಿಗೆ 30 ದಿನಗಳು ತುಂಬಿದ್ದರಿಂದ ಎಲ್ಲರಿಗೂ ಸಿಹಿ ಊಟವನ್ನು ಕೊಡಿಸುವ ಉದ್ದೇಶದಿಂದ ಎಲ್ಲರಿಗೂ ಹೋಳಿಗೆ, ಕೋಸಂಬರಿ ಹಾಗೂ ಪಲಾವ್ ನೀಡುತ್ತಿದ್ದೆವೆಂದು ತಿಳಿಸಿದರು.
ಕೋವಿಡ್ ಸಂದರ್ಭದಲ್ಲಿ ಕೇಂದ್ರ ಸರ್ಕಾರ ದೀಪಾವಳಿಯವರೆಗೂ ಉಚಿತ ಪಡಿತರವನ್ನು ಘೋಷಿಸಿರುವುದು ಸ್ವಾಗತಾರ್ಹವೆಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ