ತಿಪಟೂರು :
ತಾಲ್ಲೂಕಿನ ಹೊನ್ನವಳ್ಳಿ ಹೋಬಳಿ, ನೆಲಗೊಂಡನಹಳ್ಳಿ ಗ್ರಾಮದ ತೀರ್ಥಪ್ರಸಾದ್ (29) ಎಂಬ ಯುವಕನ ಮೇಲೆ ಜಮೀನಿನ ವಿಚಾರವಾಗಿ ಹಲ್ಲೆಯಾಗಿ, ತಿಪಟೂರು ಸಾರ್ವಜನಿಕ ಆಸ್ಪತ್ರೆಗೆ ಸಾಗಿಸುವಾಗ ಆತ ಮಾರ್ಗ ಮಧ್ಯೆ ಮೃತಪಟ್ಟ ಘಟನೆ ನಡೆದಿದೆ.
ನೆಲಗೊಂಡನಹಳ್ಳಿಯ ಗ್ರಾಮದ ಬಸವರಾಜು, ಚಂದ್ರಶೇಖರ್, ಸುರೇಶ್, ಮಧು, ಪುಟ್ಟಯ್ಯ, ಲೋಕೇಶ್ ಎಂಬ ವ್ಯಕ್ತಿಗಳ ಮೇಲೆ ಈ ಕುರಿತು ಎಫ್‍ಐಆರ್ ದಾಖಲಿಸಲಾಗಿದ್ದು ತನಿಖೆ ಮುಂದುವರೆದಿದೆ.
ಜಮೀನಿನ ವಿಚಾರವಾಗಿ ತಡರಾತ್ರಿ ಈ ಘಟನೆ ನಡೆದಿದ್ದು ಈ 6 ಜನ ವ್ಯಕ್ತಿಗಳು ಸೇರಿ ತೀರ್ಥಪ್ರಸಾದ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಸಂಶಯವನ್ನು ಗ್ರಾಮಸ್ಥರು ವ್ಯಕ್ತಪಡಿಸಿದ್ದು, ಹೊನ್ನವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಿಪಟೂರು ಸಾರ್ವಜನಿಕ ಆಸ್ಪತ್ರೆಯ ಶವಾಗಾರದಲ್ಲಿ ಜೂ.17 ರ ರಾತ್ರಿಯೆಲ್ಲಾ ಇದ್ದ ಶವವನ್ನು ಜೂ.18 ರ ಸಂಜೆ 5 ಗಂಟೆ ಸಮಯದಲ್ಲಿ ಮರಣೋತ್ತರ ಪರೀಕ್ಷೆಗಾಗಿ ಹಾಸನಕ್ಕೆ ಕಳುಹಿಸುತ್ತೇವೆಂದು ವೈದ್ಯರು ತಿಳಿಸಿದ ನಂತರ ಸ್ನೇಹಿತರು ಮತ್ತು ಗ್ರಾಮಸ್ಥರು ಆಸ್ಪತ್ರೆಯ ಮುಂದೆ ಆಕ್ರೋಶ ವ್ಯಕ್ತಪಡಿಸಿ ವ್ಯವಸ್ಥೆಯ ವಿರುದ್ಧ ತಮ್ಮ ಅಸಮಾಧಾನ ಹೊರ ಹಾಕಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
