ರೈತರನ್ನು ಎದುರು ಹಾಕಿಕೊಂಡ ಸರಕಾರಕ್ಕೆ ಉಳಿವಿಲ್ಲ

ತಿಪಟೂರು :

ವಿದ್ಯುತ್ ಖಾಸಗೀಕರಣದ ವಿರುದ್ಧ ಪೋಸ್ಟರ್ ಪ್ರಕಟಿಸಿದ ರೈತನಾಯಕರು

      ಕೃಷಿ ಪ್ರಧಾನ ದೇಶದಲ್ಲಿ ಕೃಷಿಕರ ಬಗ್ಗೆ ಮಸೂದೆಗಳು ಸಂಸತ್‍ನಲ್ಲಿ ಚರ್ಚೆಯಾಗದೆ ಜಾರಿಮಾಡುವುದು ವಿಷಾದಕರ, ದೇಶದ ರೈತರ ಹಿತ ಕಾಯುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ರಾಜ್ಯ ರೈತ ಸಂಘದ ಮುಂಖಡ ಕೆ.ಟಿ.ಗಂಗಾಧರ್ ತಿಳಿಸಿದರು.

      ನಗರದ ರೈತ ಭವನದಲ್ಲಿ ಏರ್ಪಟಿಸಿದ್ದ ಪತ್ರಿಕಾಘೋಷ್ಠಿಯಲ್ಲಿ ಮಾತನಾಡಿದ ಅವರು ನಮ್ಮದು ಕೃಷಿ ಪ್ರಧಾನ ರಾಷ್ಟ್ರ. ಆದರೆ ಇಲ್ಲಿನ ಸರಕಾರಕ್ಕೆ ರೈತರ ಬಗ್ಗೆ ನೀತಿಗಳನ್ನು ಅಳವಡಿಸುವಾಗ ಅದನ್ನು ಚರ್ಚಿಸಬೇಕೆಂಬ ಪರಿಜ್ಞಾನವು ಇಲ್ಲದಂತಾಗಿರುವುದು ವಿಪರ್ಯಾಸವೆಂದರು. ಇದೇ ರೀತಿ ರೈತರ ಪ್ರತಿಭಟನೆಯನ್ನು ಹತ್ತಿಕ್ಕಲು ಹೋಗಿ 1980 ಜುಲೈ 20 ರಂದು ನರಗುಂದದಲ್ಲಿ ಶಾಂತರೀತಿಯಿಂದ ಪ್ರತಿಭಟನೆ ಮಾಡುತ್ತಿದ್ದ ರೈತರ ಮೇಲೆ ಗೋಲಿಬಾರ್ ಮಾಡಿ ಹತ್ಯೆ ಮಾಡಿದ್ದರ ಪರಿಣಾಮವಾಗಿ ಕರ್ನಾಟಕದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷದ ಸ್ಥಿತಿ ಏನಾಯಿತು ಎಂದು ಎಲ್ಲರಿಗೂ ಗೊತ್ತಿದೆ. ಅದೇ ರೀತಿ ಕೇಂದ್ರದಲ್ಲಿ ರೈತವಿರೋಧಿ ನೀತಿಯನ್ನು ಜಾರಿಗೆ ತಂದರೆ ಇವರಿಗೂ ಅದೇ ಗತಿಕಾದಿದೆ ಎಂದು ಸರ್ಕಾರಗಳನ್ನು ಎಚ್ಚರಿಸಿ, ನಮ್ಮ ಕೃಷಿ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸುವವರೆಗೆ ಕೃಷಿಗೆ ಬಳಸುವ ವಿದ್ಯುತ್ ಅನ್ನು ಖಾಸಗೀಕರಣಗೊಳಿಸುವುದಕ್ಕೆ ಬಿಡುವುದಿಲ್ಲವೆಂದು ಇದರ ಬಗ್ಗೆ ಸಂಸತ್ತಿನಲ್ಲಿ ಸುಧೀರ್ಘವಾಗಿ ಚರ್ಚೆ ಆಗಬೇಕು ಎಂದರು.

ದೆಹಲಿಯಲ್ಲಿ ಮೊಳಗಲಿದೆ ನರಗುಂದ ಬಂಡಾಯ :

      ದೆಹಲಿ ಗಾಜಿಪುರಗಡಿಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಭಾರತೀಯ ಕಿಸಾನ್ ಸಂಘ ನಡೆಸುತ್ತಿರುವ ರೈತವಿರೋಧಿ ಕಾನೂನು ಹಿಂಪಡೆಯುವ ಚಳುವಳಿಯಲ್ಲಿ ಕರ್ನಾಟಕಕ್ಕೆ ಒಂದು ಡೇರೆಯನ್ನು ನಿರ್ಮಿಸಿಕೊಟ್ಟಿದ್ದು ಅಲ್ಲಿ 41ನೇ ನರಗುಂದ ಬಂಡಾಯದ ವಿಷಯಗಳನ್ನು ತಿಳಿಸಿ ಪ್ರತಿ 2 ಜಿಲ್ಲೆಗಳಿಗೆ 1 ತಂಡವನ್ನು ಸಂಘಟಿಸಿ ನಿರಂತರವಾಗಿ ನಾವು ಸಹ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತೇವೆ. ಇದಕ್ಕೆ ರೈತರ ಸಹಕಾರ ಅಗತ್ಯವೆಂದರು.

      ಪತ್ರಿಕಾಗೋಷ್ಠಿಯಲ್ಲಿ, ರೈತ ಮುಖಂಡರಾದ ಬಸ್ತಿಹಳ್ಳಿರಾಜಣ್ಣ, ದೇವರಾಜು, ಯೋಗಣ್ಣ, ಮನೋಹರ್‍ಪಾಟೀಲ್, ಬೆಲಕಾವಲು ಸಮಿತಿಯ ಶ್ರೀಕಾಂತ್ ಕೆಳಹಟ್ಟಿ ಮತ್ತಿತರರು ಹಾಜರಿದ್ದರು.

      ನಮ್ಮ ಮಾರುಕಟ್ಟೆಯಲ್ಲಿ 2 ವಿಧಗಳಿವೆ. ಒಂದು ಕೊಳ್ಳುವವರ ಮಾರುಕಟ್ಟೆ, ಇನ್ನೊಂದು ಮಾರುವವರ ಮಾರುಕಟ್ಟೆ, ಮಾರುವ ಸರಕಿಗೆ ಅವರೆ ಬೆಲೆ ನಿಯಂತ್ರಿಸುತ್ತಾರೆ. ಅದನ್ನು ನಾವು ಪ್ರಶ್ನಿಸುವ ಹಾಗಿಲ್ಲ, ಆದರೆ ಅವರು ಮಾರುವ ಬೆಲೆಯನ್ನು ಅವರೇ ನಿರ್ಧರಿಸುತ್ತಾರೆ. ನಾವು ಅವರು ಹೇಳಿದಷ್ಟು ಕೊಡಬೇಕು ಇಲ್ಲದಿದ್ದರೆ ಸರಕಿಲ್ಲ ಎನ್ನುತ್ತಾರೆ. ಅನ್ಯ ಮಾರ್ಗವಿಲ್ಲದೇ ನಮ್ಮ ಸರಕನ್ನು ಅವರೇ ನಿರ್ಧರಿಸಿದ ದರಕ್ಕೆ ಮಾರುತ್ತೇವೆ ಇದೆಂತಹ ವಿಪರ್ಯಾಸ

– ಕೆ.ಟಿ.ಗಂಗಾಧರ್, ರಾಜ್ಯ ರೈತ ಸಂಘದ ಮುಂಖದ

Recent Articles

spot_img

Related Stories

Share via
Copy link