ಕುಣಿಗಲ್ :
ತಾಲ್ಲೂಕಿನ ಕೆ.ಹೊನ್ನಮಾಚನಹಳ್ಳಿಯಲ್ಲಿ ಪ್ರಯಾಣಿಕರಿಗೆಂದು ನಿರ್ಮಿಸಿದ ತಂಗುದಾಣವು ಕುಡುಕರ ತಾಣವಾಗಿದ್ದು, ಪ್ರಯಾಣಿಕರ ಉಪಯೋಗಕ್ಕೆ ಬಾರದಂತಾಗಿ ರೋಗ ಹರಡುವ ತಾಣವಾಗಿದೆ.
ಪ್ರತಿ ಗ್ರಾಮಗಳ ಊರ ಹೊರಗೆ ಅಥವಾ ಕ್ರಾಸ್‍ಗಳಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ತಂಗುದಾಣಗಳನ್ನು ಸರ್ಕಾರ ಹಾಗೂ ಖಾಸಗಿ ಸಂಘ-ಸಂಸ್ಥೆಗಳು ಕಟ್ಟಿ ಕೊಡುತ್ತಿವೆ. ತಂಗುದಾಣಗಳನ್ನು ಆಯಾ ಗ್ರಾಮದ ಜನರು ಸಮರ್ಪಕವಾಗಿ ರಕ್ಷಿಸಿಕೊಳ್ಳಬೇಕು. ಆದರೆ ಕೆ.ಹೊನ್ನಮಾಚನಹಳ್ಳಿಯ ಹೃದಯ ಭಾಗದಲ್ಲಿರುವ ಈ ತಂಗುದಾಣವು ಇದ್ದರೂ ಪ್ರಯಾಣಿಕರಿಗೆ ಉಪಯೋಗಕ್ಕೆ ಭಾರದಂತಾಗಿರುವುದು ವಿಪರ್ಯಾಸ.
ತಂಗುದಾಣದ ಕೂಗಳತೆಯ ದೂರದಲ್ಲಿಯೇ ಗ್ರಾಪಂ ಕಾರ್ಯಾಲಯವಿದೆ ಹಾಗೆಯೇ ಸರ್ಕಾರಿ ಆಸ್ಪತ್ರೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸೇರಿದಂತೆ ಆ ಊರಿನ ಸರ್ಕಲ್ ಕೂಡ ಅಲ್ಲೇ ಇದೆ. ಇನ್ನು ಪಕ್ಕದಲ್ಲಿ ಅಂಗಡಿ, ಹೋಟೆಲ್‍ಗಳು ಇವೆ. ಇವೆಲ್ಲ ಎಲ್ಲೋ ಊರಿಂದ ಆಚೆ ಇಲ್ಲ, ಗಾಮದ ನಡು ಭಾಗದಲ್ಲಿಯೇ ಇವೆ. ತಂಗುದಾಣವು ಕುರಿ, ಮೇಕೆ, ಕರುಗಳ ಕೊಟ್ಟಿಗೆಯೂ ಆಗಿದೆ.
ಸದರಿ ತಂಗುದಾಣವು ಇಷ್ಟೆಲ್ಲಾ ಅದ್ವಾನಗಳಿಗೆ ಕಾರಣವಾಗಿದ್ದರೂ ಇಲ್ಲಿನ ಜನ ಪ್ರತಿನಿಧಿಗಳು, ಮುಖಂಡರು, ಅಧಿಕಾರಿಗಳು ಈ ತಂಗುದಾಣವನ್ನು ಕಂಡರೂ ಕಾಣದೆ ಕುರುಡರಾಗಿದ್ದಾರೆ ಎಂದು ಗ್ರಾಮದ ಸಾರ್ವಜನಿಕರು ಹಿಡಿ ಶಾಪಹಾಕುತ್ತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ