ತುಮಕೂರು
ತುಮಕೂರು ವಿಶ್ವವಿದ್ಯಾನಿಲಯದ 2018-19ನೆ ಸಾಲಿನ ಬಿ.ಎಸ್ಸಿ, ಬಿ.ಕಾಂ, ಬಿ.ಎ, ಬಿ.ಎಸ್.ಡಬ್ಲ್ಯೂ, ಬಿ.ಸಿ.ಎ ಹಾಗೂ ಇತರೆ ಪದವಿ ವಿದ್ಯಾರ್ಥಿಗಳಿಗೆ ನಾಲ್ಕನೆ ಸೆಮಿಸ್ಟರ್ ಹಾಗೂ ಐದನೆ ಸೆಮಿಸ್ಟರ್ ಅಂಕಪಟ್ಟಿ ವಿತರಿಸುವ ಪ್ರಕ್ರಿಯೆಯಲ್ಲಿ ವಿಳಂಬವಾಗಿದೆ. ಇದರಿಂದ ಸಾವಿರಾರು ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗಿದ್ದು, ಸ್ನಾತಕೋತ್ತರ ಪ್ರವೇಶ ಪಡೆಯಲು ನಾಲ್ಕನೇ ಹಾಗೂ ಐದನೇ ಸೆಮಿಸ್ಟರ್ ಅಂಕಪಟ್ಟಿ ಅವಶ್ಯಕತೆ ಇದೆ.
ಆದರೆ ಪರೀಕ್ಷೆ ಮುಗಿದು ಒಂದು ವರ್ಷವಾದರೂ ಸಹ ಅಂಕಪಟ್ಟಿ ವಿತರಿಸಿರುವುದಿಲ್ಲ. ವಿದ್ಯಾರ್ಥಿಗಳ ಅಂಕಪಟ್ಟಿ ವಿಳಂಬವಾಗು ತ್ತಿರುವುದು ಖಂಡನೀಯ. ತುಮಕೂರು ವಿಶ್ವವಿದ್ಯಾನಿಲಯ ವಿದ್ಯಾರ್ಥಿಗಳ ಬದುಕಿನ ಜೊತೆ ಚೆಲ್ಲಾಟವಾಡುತ್ತಿದೆ. ವಿದ್ಯಾರ್ಥಿಗಳಿಗೆ ಇನ್ನು ಹತ್ತು ದಿನಗಳ ಒಳಗೆ ಅಂಕಪಟ್ಟಿಯನ್ನು ವಿ.ವಿ ವಿತರಿಸಬೇಕು. ಇಲ್ಲದಿದ್ದಲ್ಲಿ ಜಿಲ್ಲಾದ್ಯಂತ ಎಬಿವಿಪಿ ವತಿಯಿಂದ ಉಗ್ರ ಹೋರಾಟ ಮಾಡಲಾಗುವುದು ಎಂದು ಅಪ್ಪುಪಾಟಿಲ್, ತ್ರಿನೇತ್ರ, ನಂದೀಶ್, ನಂದಿನಿ, ರಾಧಾಕೃಷ್ಣ, ಕೃಷ್ಣಮೂರ್ತಿ,ರಾಮೇಗೌಡ, ನವೀನ್, ವೀರೇಶ್, ಸುದೀಪ್, ಅಂಜನ್, ಕಾವೇರಿ, ಪ್ರೀತಿ ಜಂಟಿಯಾಗಿ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ