ತೋವಿನಕೆರೆ :
ರಸ್ತೆಯಲ್ಲಿ ಕುರಿ ಅಟ್ಟಿಕೊಂಡು ಹೋಗುತ್ತಿದ್ದ ಕುರಿಗಾಹಿ ಮತ್ತು ಕುರಿಗಳ ಮೇಲೆ ಲಘು ವಾಹನವೊಂದು ಶುಕ್ರವಾರ ಹರಿದು 65 ವರ್ಷದ ಕುರಿ ಮಾಲೀಕ ಬಾಲಯ್ಯ ಮತ್ತು ಐದು ಕುರಿಗಳು ಸಾವನಪ್ಪಿದ್ದು ಹಲವು ಕುರಿಗಳು ತೀವ್ರವಾಗಿ ಗಾಯ ಗೊಂಡಿವೆ.
ತೀವ್ರವಾಗಿ ಗಾಯಗೊಂಡಿದ್ದ ಮೃತರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದು ಕೊಂಡು ಹೋಗಲಾಗಿತ್ತು. ಚಿಕಿತ್ಸೆ ಫಲಿಸದೇ ಅವರು ನಿಧನರಾಗಿದ್ದಾರೆ. ಕೊರಟಗೆರೆ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ