ಶಿರಾ
ನಗರದ ವಿವಿಧ ಅಂಗಡಿ ಮುಗ್ಗಟ್ಟುಗಳಿಗೆ ತಾಲ್ಲೂಕು ದಂಡಾಧಿಕಾರಿ ಶ್ರೀಮತಿ ನಾಹಿದಾ ಜಮ್ ಜಮ್ ಧಿಡೀರ್ ಭೇಟಿ ನೀಡಿ ಮಾಸ್ಕ್ ಧರಿಸದೆ ಬರುವ ಗ್ರಾಹಕರನ್ನಷ್ಟೇ ಅಲ್ಲದೆ ಅಂಗಡಿಗಳ ಮಾಲೀಕರನ್ನು ಕೂಡಾ ತೀವ್ರ ತರಾಟೆಗೆ ತೆಗೆದುಕೊಂಡರು.
ಶನಿವಾರ ಅನೇಕ ಅಂಗಡಿಗಳಿಗೆ ಭೇಟಿ ನೀಡಿದ ಅವರು ಅಂಗಡಿಗಳಿಗೆ ವ್ಯಾಪಾರಕ್ಕೆಂದು ಬಂದಿದ್ದ ಅನೇಕ ಮಮದಿ ಗ್ರಾಹಕರು ಮಾಸ್ಕ್ ಧರಿಸದೆ ಇದ್ದುದನ್ನು ಕಂಡು ಅಂಗಡಿಗಳ ಮಾಲೀಕರ ಮೇಲೆ ಕಿಡಿ ಕಾರಿದರು. ಕಳೆದ 60 ದಿನಗಳಿಂದಲೂ ಮಾಸ್ಕ್ ಧರಿಸದವರ ವಿರುದ್ಧ ದಂಡ ವಿಧಿಸುತ್ತಿದ್ದರೂ ನಿರ್ಲಕ್ಷ್ಯ ವಹಸಿರುವ ಬಗ್ಗೆ ಮತ್ತೊಮ್ಮೆ ತಿಳುವಳಿಕೆ ನೀಡಿದರು. ನಗರ ಠಾಣೆಯ ಪಿ.ಎಸ್.ಐ. ಶ್ರೀಮತಿ ಭಾರತಿ ಸೇರಿದಂತೆ ಆರಕ್ಷಕ ಇಲಾಖೆಯ ಸಿಬ್ಬಂಧಿ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
