ಅಕ್ರಮ ಮದ್ಯ ಮಾರಾಟ : ಅಬಕಾರಿ ಅಧಿಕಾರಿಗಳ ಅಸಡ್ಡೆ

 ನಿಟ್ಟೂರು :

     ಗುಬ್ಬಿ ತಾಲ್ಲೂಕಿನ ನಿಟ್ಟೂರು ಗ್ರಾಮದ ಹಲವೆಡೆ ಹಾಗೂ ಹಳ್ಳಿ ಹಳ್ಳಿಗಳಲ್ಲೂ ಅಕ್ರಮ ಮದ್ಯ ಮಾರಾಟದ ದಂಧೆ ಹೆಚ್ಚಿದ್ದು, ಅಬಕಾರಿ ಇಲಾಖಾಧಿಕಾರಿಗಳು ಕಡಿವಾಣ ಹಾಕುವಲ್ಲಿ ಅಸಡ್ಡೆತನ ತೋರುತ್ತಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

     ಗ್ರಾಮದ ಬಾರ್ ರೆಸ್ಟೋರೆಂಟ್‍ಗಳಿಂದ ರಾಜಾರೋಷವಾಗಿ ಹಳ್ಳಿಹಳ್ಳಿಗೂ ಎಲ್ಲಾ ತರಹದ ಮದ್ಯದಬಾಟಲ್‍ಗಳು ಸಾಗಾಣಿಕೆಯಾಗುತ್ತವೆ ಎಂದು ಸಾರ್ವಜನಿಕರಿಂದ ದೂರುಗಳು ವ್ಯಕ್ತವಾಗುತ್ತಿದ್ದು, ನಿಟ್ಟೂರಿನ ಸುತ್ತಮುತ್ತ ಅಕ್ರಮ ಮದ್ಯ ಮಾರಾಟದಲ್ಲಿ ಕೆಲ ವ್ಯಕ್ತಿಗಳು ತೊಡಗಿರುವುದು ಕಂಡುಬಂದಿದೆ.

      ಅಕ್ರಮ ಮದ್ಯ ಮಾರಾಟದಿಂದ ರೈತರ ತೋಟ, ಶಾಲಾ ಮೈದಾನಗಳನ್ನು ಮದ್ಯವ್ಯಸನಿಗಳು ಕುಡಿತದ ತಾಣವಾಗಿಸಿಕೊಂಡಿದ್ದು ಹೊಲ ತೋಟಗಳಿಗೆ ಹೋಗಿ ಬರುವ ರೈತರು, ಹೆಂಗಸರು-ಮಕ್ಕಳು, ಶಾಲಾ ವಿದ್ಯಾರ್ಥಿಗಳು-ಪೋಷಕರು ಬೇಸತ್ತು ಹೋಗಿದ್ದಾರೆ.

      ಶಾಲಾ ಮೈದಾನದಲ್ಲಿ ಬಿದ್ದಿದ್ದ ಮದ್ಯ ಬಾಟಲ್‍ಗಳನ್ನು ಶಾಲಾ ಶಿಕ್ಷಕರೇ ಬಾಚಿ ಹೊರಹಾಕುವ ದುರ್ಗತಿ ಒದಗಿಬಂದಿದೆ. ಇನ್ನು ಮುಂದಾದರೂ ಅಬಕಾರಿ ಅಧಿಕಾರಿಗಳು ಕಣ್ತೆರೆದು, ಅಕ್ರಮ ಮದ್ಯ ಮಾರಾಟದ ದಂಧೆಗೆ ಬ್ರೇಕ್ ಹಾಕಬೇಕಾಗಿದೆ ಎಂಬುದು ನಾಗರಿಕರ ಆಗ್ರಹವಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link