ಮಿಡಿಗೇಶಿ :

ಮಧುಗಿರಿ ತಾಲ್ಲೂಕಿನ ಮಿಡಿಗೇಶಿ ಹೋಬಳಿಗೆ ಸೇರಿದ ಬೇಡತ್ತೂರು ಗ್ರಾಮದಲ್ಲಿ ಸಾರ್ವಜನಿಕರ ಕುಡಿಯುವ ನೀರಿಗಾಗಿ ಇಪ್ಪತ್ತೈದು ಸಾವಿರ ಲೀಟರ್ ಸಾಮಥ್ರ್ಯದ ಓವರ್ ಹೆಡ್‍ಟ್ಯಾಂಕ್ 1983ರಲ್ಲಿ ನಿರ್ಮಾಣವಾಗಿತ್ತು. ಗ್ರಾಮದ ಮಧ್ಯಭಾಗದಲ್ಲಿನ ಸದರಿ ಓವರ್ ಹೆಡ್ ಟ್ಯಾಂಕ್ ಹಳೆಯದಾಗಿದ್ದು ಟ್ಯಾಂಕ್‍ನ ನಾಲ್ಕು ಪಿಲ್ಲರ್‍ಗಳು ಮತ್ತು ನಾಲ್ಕು ಬೀಮ್ಸ್‍ಗಳಲ್ಲಿ ಸಿಮೆಂಟ್ ಕಳಚಿ ಬಿದ್ದು, ಶಿಥಿಲವಾಗಿದೆ. ಅಷ್ಟೇ ಅಲ್ಲದೆ ಯಾವ ಕ್ಷಣದಲ್ಲಾದರೂ ನೆಲಕ್ಕೆ ಉರುಳಿ ಬಲಿಗಾಗಿ ಕಾದುಕುಳಿತಿದೆ.
ಟ್ಯಾಂಕ್ ಪಕ್ಕದಲ್ಲಿಯೇ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಶ್ರೀರಾಮದೇವರ ದೇವಸ್ಥಾನವಿರುತ್ತದೆ. ನವಗ್ರಹ ದೇವಸ್ಥಾನ, ಸರ್ಕಾರಿ ಪ್ರಾಥಮಿಕ ಉಪ ಆರೋಗ್ಯ ಕೇಂದ್ರ ಹಾಗೂ ಪೆಟ್ಟಿಗೆ ಅಂಗಡಿಗಳು ಹಾಗೂ ಗ್ರಾಮ ಪಂಚಾಯಿತಿ ಗ್ರಂಥಾಲಯವಿರುತ್ತದೆ. ಆದ್ದರಿಂದ ಓವರ್ ಹೆಡ್ ಟ್ಯಾಂಕ್ ಗಾಳಿಗೋ, ಮಳೆಗೋ ನೆಲಕ್ಕುರುಳಿ ಯಾವುದೇ ಅವಘಡ ಸಂಭವಿಸುವ ಮುನ್ನ ಟ್ಯಾಂಕನ್ನು ತೆರವು ಗೊಳಿಸುವಂತೆ ಮಹಿಳೆಯರಾದಿಯಾಗಿ ಸಾವಿರಾರು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಟ್ಯಾಂಕ್ ತೆರವುಗೊಳಿಸುವಂತೆ ಈಗಾಗಲೇ ಹಲವು ಬಾರಿ ಗ್ರಾಮ ಪಂಚಾಯಿತಿಯ, ಶಾಸಕರ ಹಾಗೂ ತಾಲ್ಲೂಕು ಪಂಚಾಯಿತಿ ಅಧಿಕಾರಿಗಳ ಗಮನಕ್ಕೆ ಗ್ರಾಮಸ್ಥರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು ತಂದಿದ್ದರೂ ಪ್ರಯೋಜನವಿಲ್ಲವಾಗಿದೆ ಎಂದು ಪತ್ರಿಕೆ ಮೂಲಕ ಸಂಬಂಧಿಸಿ ಮೇಲಧಿಕಾರಿಗಳಿಗೆ ಎಚ್ಚರಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








