ಹುಲ್ಲೆಕೆರೆ ಗ್ರಾಪಂ ಅಧ್ಯಕ್ಷೆಯಾಗಿ ಸರಳಾ ಆಯ್ಕೆ

ತುರುವೇಕೆರೆ

           ತಾಲ್ಲೂಕಿನ ಹುಲ್ಲೆಕೆರೆ ಗ್ರಾಮ ಪಂಚಾಯ್ತಿ ನೂತನ ಅಧ್ಯಕ್ಷರಾಗಿ ಸರಳಾ ರಾಜಶೇಖರಯ್ಯ ಆಯ್ಕೆಗೊಂಡರು.ಈ ಹಿಂದೆ ಅಧ್ಯಕ್ಷೆಯಾಗಿದ್ದ ಸುಮ ಎಂಬುವರ ವಿರುದ್ದ ಅವಿಶ್ವಾಸ ನಿರ್ಣಯ ಕೈಗೊಂಡು ಅಧ್ಯಕ್ಷ ಹುದ್ದೆಯಿಂದ ಪದಚ್ಯುತಿ ಗೊಳಿಸಲಾಗಿತ್ತು. ಒಟ್ಟು 16 ಸದಸ್ಯ ಬಲ ಹೊಂದಿರುವ ಗ್ರಾಮ ಪಂಚಾಯ್ತಿ ಅಧ್ಯಕ್ಷ ಸ್ಥಾನಕ್ಕೆ ಶನಿವಾರದಂದು ಚುನಾವಣೆ ನಡೆಯಿತು.

        ಅಧ್ಯಕ್ಷ ಸ್ಥಾನಕ್ಕೆ ಸದಸ್ಯರಾದ ಸರಳಾ, ಶೋಭಾ, ಪುಟ್ಟಗಿರಿಜಮ್ಮ ಮೂವರು ನಾಮಪತ್ರ ಸಲ್ಲಿಸಿದ್ದರು. ಶೋಭಾ ನಾಮ ಪತ್ರ ವಾಪಸ್ ಪಡೆದರು. ಸರಳ ಹಾಗೂ ಪುಟ್ಟಗಿರಿಜಮ್ಮ ಇಬ್ಬರು ಕಣದಲ್ಲಿದ್ದರು. ಸದಸ್ಯರ ಮತದಾನದಲ್ಲಿ ಸರಳಾ 11 ಮತಗಳನ್ನು ಪಡೆಯುವ ಮೂಲಕ ಅಧ್ಯಕ್ಷರಾಗಿ ಆಯ್ಕೆಯಾದರು. ಪ್ರತಿಸ್ಪರ್ಧಿ ಪುಟ್ಟತಾಯಮ್ಮ 5 ಮತಗಳನ್ನು ಪಡೆಯಲು ಸಾಧ್ಯವಾಯಿತು.

          ಚುನಾವಣಾಧಿಕಾರಿಯಾಗಿ ತಹಸೀಲ್ದಾರ್ ನಾಗರಾಜು ಕರ್ತವ್ಯ ನಿರ್ವಹಿಸಿದರು. ನೂತನ ಅಧ್ಯಕ್ಷರ ಅಭಿಮಾನಿಗಳು ಹಾಗು ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

         ನೂತನ ಅಧ್ಯಕ್ಷರನ್ನು ಉಪಾಧ್ಯಕ್ಷೆ ಕೆಂಪದೇವಮ್ಮ, ಸದಸ್ಯರಾದ ಸಿದ್ದರಾಮಯ್ಯ, ಬಾಬುಸಾಬ್, ಲೋಕೇಶ್, ಹಾಲೇಶ್, ಯಶೋಧಮ್ಮ, ಪ್ರೇಮ, ರಂಗಸ್ವಾಮಿ, ಯಶೋಧ, ಶೋಭಾ ಮುಖಂಡರಾದ ವೆಂಕಟೇಶ್, ದಯಾನಂದ್, ನಿರಂಜನ್ ಸೇರಿದಂತೆ ಇತರರು ಅಭಿನಂದಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

Recent Articles

spot_img

Related Stories

Share via
Copy link