ಇ-ಖಾತಾ ಅಭಿಯಾನ ಚುರುಕುಗೊಳಿಸಿ : ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಸೂಚನೆ

ಪ್ರಜಾಪ್ರಗತಿ. ಕಾಂ
ಮೈಸೂರು: ಸಾರ್ವಜನಿಕರು ತಮ್ಮ ಆಸ್ತಿಗೆ ಈ ಖಾತೆ ಮಾಡಿಸಿಕೊಳ್ಳಲು ನಗರ ಪಾಲಿಕೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳು ಪ್ರೋತ್ಸಾಹಿಸಿ, ಈ ಖಾತೆ ಅಭಿಯಾನವನ್ನು ಚುರುಕುಗೊಳಿಸಿ ಎಂದು ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ: ಯತೀಂದ್ರ ಸಿದ್ದರಾಮಯ್ಯ ಅವರು ತಿಳಿಸಿದರು.

ಅವರು ಶುಕ್ರವಾರ ಮೈಸೂರು ಮಹಾನಗರ ಪಾಲಿಕೆಯ ಕಚೇರಿ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದರು. ಮೈಸೂರು ಮಹಾನಗರ ಪಾಲಿಕೆಯಲ್ಲಿರುವ ಆಸ್ತಿಗಳು ಮ್ಯಾಪಿಂಗ್ ಆಗಬೇಕು, ಆಗ ಆಸ್ತಿ ತೆರಿಗೆಯನ್ನು ನಿಖರವಾಗಿ ಪಡೆದುಕೊಳ್ಳಬಹುದು ಎಂದರು.

ನಿಗದಿತವಾಗಿ ಬಾಡಿಗೆ ಪರಿಷ್ಕರಣೆ ಮಾಡಿ:
ಪಾಲಿಕೆ ವ್ಯಾಪ್ತಿಯ ಮಾರುಕಟ್ಟೆ ಹಾಗೂ ವಾಣಿಜ್ಯ ಮಳಿಗೆಗಳ ಬಾಡಿಗೆ ಪರಿಷ್ಕರಣೆ ನಿಗದಿತವಾಗಿ ನಡೆಯಬೇಕು. ಇದರಿಂದ ಪಾಲಿಕೆಯ ಆದಾಯ ಹೆಚ್ಚಾಗುತ್ತದೆ ಎಂದರು.

ನೋಟೀಸ್ ಜಾರಿ ಮಾಡಿ: 2011 ರಿಂದ ವಾಣಿಜ್ಯ ಮಳಿಗೆಗಳು ಆಸ್ತಿ ತೆರಿಗೆ ಪಾವತಿ ಮಾಡದೇ ಇರುವುದು ಕಂಡುಬAದಿದ್ದು, 2 ವರ್ಷಗಳ ಕಾಲ ತೆರಿಗೆ ಪಾವತಿಸದೇ ಇರುವ ವಾಣಿಜ್ಯ ಮಳಿಗೆಗಳಿಗೆ ನೋಟೀಸ್ ಜಾರಿ ಮಾಡಿ ನಿಯಮಾನುಸಾರ ಕ್ರಮ ಕೈಗೊಳ್ಳಬೇಕು ಎಂದರು.

ಮಾರುಕಟ್ಟೆಗೆ ಸ್ಥಳ ಗುರುತಿಸಿ:
ಪಾದಚಾರಿ ಸ್ಥಳಗಳಲ್ಲಿರುವ ಅಂಗಡಿಗಳನ್ನು ತೆರವುಗೊಳಿಸಲಾಗುತ್ತಿದೆ. ಪಾದಚಾರಿ ಸ್ಥಳಗಳಲ್ಲಿ ತರಕಾರಿ, ಹಣ್ಣು ಹಾಗೂ ಸಣ್ಣಪುಟ್ಟ ವಹಿವಾಟು ನಡೆಸುತ್ತಿರುವವರಿಗೆ ಸ್ಥಳಾವಕಾಶ ಮಾಡಿಕೊಡಬೇಕಿರುತ್ತದೆ. ಪಾಲಿಕೆ ವ್ಯಾಪ್ತಿಯಲ್ಲಿರುವ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಶಾಸಕರೊಂದಿಗೆ ಚರ್ಚಿಸಿ ವಲಯವಾರು ಸ್ಥಳ ಗುರುತಿಸಿ ವಾಣಿಜ್ಯ ಮಳಿಗೆ, ಫುಡ್ ಸ್ಟಿçÃಟ್, ಮಾರುಕಟ್ಟೆ ನಿರ್ಮಾಣ ಮಾಡಲು ಯೋಜನೆ ರೂಪಿಸಿಕೊಳ್ಳಿ ಎಂದರು.

ಮಹಾತ್ಮಗಾAಧಿ ನಗರ ವಿಕಾಸ ಯೋಜನೆ, ಮುಖ್ಯಮಂತ್ರಿಯವರ ಮೂಲಭೂತ ಅಭಿವೃದ್ಧಿ ಯೋಜನೆ, ಅಮೃತ್-2 ಯೋಜನೆ, ಎನ್.ಜಿ.ಟಿ ಕಾಮಗಾರಿ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.

ಶಾಸಕ ತನ್ವೀರ್ ಸೇಠ್ ಅವರು ಮಾತನಾಡಿ ಪಾಲಿಕೆ ವ್ಯಾಪ್ತಿಯಲ್ಲಿರುವ ಮಾರುಕಟ್ಟೆ, ವಾಣಿಜ್ಯ ಸಂಕಿರಣಗಳಿAದ ಪಡೆಯುತ್ತಿರುವ ಬಾಡಿಗೆ, ಅವರಿಗೆ ನೀಡಲಾಗುತ್ತಿರುವ ಮೂಲಭೂತ ಸೌಕರ್ಯಗಳ ಬಗ್ಗೆ ಚರ್ಚಿಸಿದರು. ಈ ಹಿಂದೆ ಬಾಡಿಗೆಗೆ ಒಪ್ಪಂದ ಮಾಡುಕೊಂಡವರು ಹಾಗೂ ಇಂದು ಸದರಿ ಸ್ಥಳಗಳಲ್ಲಿ ವಾಹಿವಾಟು ನಡೆಸುತ್ತಿರುವವರು ಬೇರೆ ಇದನ್ನು ಸರಿಪಡಿಸಬೇಕು. ಹೊಸ ವಾಣಿಜ್ಯ ಮಳಿಗೆ ಹಾಗೂ ಮಾರುಕಟ್ಟೆಗಳನ್ನು ನಿರ್ಮಾಣ ಮಾಡಲು ಪಾಲಿಕೆಗಳು ಯೋಜನೆ ರೂಪಿಸುತ್ತಿಲ್ಲ ಎಂದರು.

ಈ ಹಿಂದೆ ದಾನದ ಮೇಲೆ ಪಡೆದು ಶಾಲಾ ಕಾಲೇಜು ನಡೆಯುತ್ತಿರುವ ಆಸ್ತಿಗಳ ಖಾತೆಯಾಗಿರುವುದಿಲ್ಲ. ಈ ಸಮಸ್ಯೆಯನ್ನು ಸರಿಪಡಿಸಬೇಕು ಎಂದು ಸಭೆಯ ಗಮನ ಸೆಳೆದಾಗ ಪಾಲಿಕೆ ಆಡಳಿತಾಧಿಕಾರಿ ನಿತೇಶ್ ಪಾಟೀಲ್ ಅವರು ದಾನ ಪಡೆದ ಭೂಮಿಯಲ್ಲಿ 12 ವರ್ಷಗಳ ಕಾಲ ನಿರಂತರವಾಗಿ ಸರ್ಕಾರಿ ಶಾಲೆ ನಡೆಯುತ್ತಿದ್ದಲ್ಲಿ ಸರ್ಕಾರಿ ಆಸ್ತಿ ಎಂದು ಪರಿಗಣಿಸಲಾಗುವುದು ಎಂದರು.

ಸಭೆಯಲ್ಲಿ ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಶಾಸಕರಾದ ಟಿ.ಎಸ್. ಶ್ರೀವತ್ಸ, ವಿಧಾನ ಪರಿಷತ್ ಸದಸ್ಯರಾದ ಡಾ. ಡಿ. ತಿಮ್ಮಯ್ಯ,ವಿವೇಕಾನಂದ.ಕೆ, ಆರ್ ರಘು, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಪುಷ್ಪವಲ್ಲಿ, ಜಿಲ್ಲಾಧಿಕಾರಿ ಜಿ. ಲಕ್ಷಿಂಕಾAತರೆಡ್ಡಿ, ಮೈಸೂರು ಮಹಾನಗರ ಪಾಲಿಕೆಯ ಆಯುಕ್ತೆ ಎಂ. ಕೆ. ಸವಿತಾ ಹಾಗೂ ಇತರರು ಇದ್ದರು.

 

ನಗರದಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ರಸ್ತೆಗಳಲ್ಲಿ ವಾಹನ ನಿಲುಗಡೆಯ ಸಮಸ್ಯೆ ಹೆಚ್ಚಾಗುತ್ತಿದೆ. ಪ್ರತಿ ಲೇಔಟ್ ಗಳಲ್ಲಿ ಮಲ್ಟಿ ಲೆವಲ್ ವಾಹನ ನಿಲುಗಡೆಯ ವ್ಯವಸ್ಥೆಯಾಗಬೇಕು.

ಜಿ.ಟಿ.ದೇವೇಗೌಡ, ಶಾಸಕ.

ನಗರದಲ್ಲಿ ಸಣ್ಣ ಮನೆಗಳಲ್ಲಿ ವಾಸವಾಗಿದ್ದು, ಅವರು ಲಕ್ಷಾಂತರ ರೂ ನೀರಿನ ಬಿಲ್ ಬಾಕಿ ಇರುತ್ತದೆ. ಇದನ್ನು ಅವರು ಪಾವತಿಸಲು ಸಾಧ್ಯವಿರುವುದಿಲ್ಲ. ಸದರಿ ಸಮಸ್ಯೆ ಪರಿಹಾರವಾಗಬೇಕಿದೆ.

ಕೆ. ಹರೀಶ್ ಗೌಡ, ಶಾಸಕ

 

Recent Articles

spot_img

Related Stories

Share via
Copy link