
ಶಿವಮೊಗ್ಗದಲ್ಲಿ ಮರಳು ಗಣಿಗಾರಿಕೆ ನಿಯಮ ಉಲ್ಲಂಘನೆ: 28 ಗುತ್ತಿಗೆದಾರರಿಗೆ 68 ಕೋಟಿ ರೂ. ದಂಡದ ನೋಟಿಸ್
- ಸಂತೋಷ್ ಎಲಿಗಾರ್
ಶಿವಮೊಗ್ಗ: ರಾಜ್ಯದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಅಕ್ರಮ ಮರಳು ಗಣಿಗಾರಿಕೆ ಅಡ್ಡೆಗಳ ಮೇಲೆ ಕಳೆದ ಮೇ 30ರಂದು ಲೋಕಾಯುಕ್ತರು ದಾಳಿ ಮಾಡಿ ವ್ಯವಸ್ಥಿತ ಕಾರ್ಯಾಚರಣೆ ನಡೆಸಿ ಎಂಎAಆರ್ಡಿ (ಮೈನ್ಸ್ ಅಂಡ್ ಮಿನರಲ್ಸ್), ರಾಷ್ಟಿçÃಯ ಹಸಿರು ನ್ಯಾಯಪೀಠ (ಎನ್ಜಿಟಿ) ದ ಆದೇಶದ ಅನ್ವಯ ರೂಪುಗೊಂಡ ಪರಿಸರ ಸಂರಕ್ಷಣಾ ಕಾಯ್ದೆ, ಕರ್ನಾಟಕ ಮೈನ್ಸ್ ಅಂಡ್ ಮಿನರಲ್ಸ್ ರೂಲ್ಸ್, ಜೆಸಿಬಿ, ಹಿಟ್ಯಾಚಿ, ಲಾರಿಗಳ ಓಡಾಟದಿಂದ ರಸ್ತೆಗಳು ಹಾಳಾಗಿರುವುದಕ್ಕೆ ಸಾರ್ವಜನಿಕ ಆಸ್ತಿಪಾಸ್ತಿ ರಕ್ಷಣೆಗೆ ಸಂಬAಧಿಸಿದ ಪಿಡಿಪಿಪಿ ಕಾಯ್ದೆ, ವನ್ಯಜೀವಿ ಸಂರಕ್ಷಣೆ ಹಾಗೂ ನದಿ ನೀರು ರಕ್ಷಣೆ ಕುರಿತಾದ ಕಾಯ್ದೆಗಳ ಅನ್ವಯ ಪ್ರಕರಣ ದಾಖಲಿಸಿ ಮರಳುಗಳ್ಳರ ವಿರುದ್ಧ ಕಾನೂನಿನ ಕುಣಿಕೆ ಬಿಗಿ ಮಾಡಿದ್ದರು.
ಜಿಲ್ಲೆಯ 5 ತಾಲೂಕುಗಳಾದ ಶಿವಮೊಗ್ಗ, ಭದ್ರಾವತಿ, ತೀರ್ಥಹಳ್ಳಿ, ಹೊಸನಗರ ಹಾಗೂ ಸಾಗರ ವ್ಯಾಪ್ತಿಯ 25ಕ್ಕೂ ಹೆಚ್ಚು ಅಕ್ರಮ ಮರಳು ಅಡ್ಡಗಳ ಮೇಲೆ ಶಿವಮೊಗ್ಗ ಲೋಕಾಯುಕ್ತ ಡಿವೈಎಸ್ಪಿ ಚಂದ್ರಶೇಖರ್ ನೇತೃತ್ವದಲ್ಲಿ 12ಕ್ಕೂ ಹೆಚ್ಚು ಲೋಕಾಯುಕ್ತ ಅಧಿಕಾರಿಗಳ ತಂಡ ದಾಳಿ ನಡೆಸಿ ಅಕ್ರಮ ಮರಳು ಗಣಿಗಾರಿಕೆ ಪತ್ತೆ ಹಚ್ಚಿ ಪ್ರಕರಣ ದಾಖಲಿಸಿದೆ.
ಲೋಕಾಯುಕ್ತ ನಡೆಸಿದ ಈ ದಾಳಿಗೆ ಮಲೆನಾಡಿನ ಮರಳು ಮಾಫಿಯಾ ತಲ್ಲಣಗೊಂಡಿತ್ತು. ತುಷಾರ (ತುಂಗಭದ್ರಾ, ಶರಾವತಿ ನದಿಗಳ ರಕ್ಷಣೆ) ಹೆಸರಲ್ಲಿ ನಡೆಸಿದ ಈ ರಹಸ್ಯ ಕಾರ್ಯಾಚರಣೆಯ ಪ್ರತಿ ಹಂತವನ್ನು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ ಖುದ್ದಾಗಿ ನಿರ್ವಹಣೆ ಮಾಡಿದ್ದಾರೆನ್ನಲಾಗಿತ್ತು.
ವಿಶೇಷವೆಂದರೆ ಲೋಕಾಯುಕ್ತ ಪೊಲೀಸರ ತಂಡ ಬೆಳಿಗ್ಗೆ ಅಕ್ರಮ ಮರಳು ಕ್ವಾರಿಗಳ ಮೇಲೆ ದಾಳಿ ಮಾಡುವವರೆಗೂ ಕಾರ್ಯಾಚರಣೆಯ ವಿಚಾರ ಶಿವಮೊಗ್ಗ ಜಿಲ್ಲಾಡಳಿತಕ್ಕೂ ಗೊತ್ತಿರಲಿಲ್ಲ. ಜಿಲ್ಲೆಯ ಪೊಲೀಸರಿಗೂ ಮಾಹಿತಿ ಕೊಟ್ಟಿರಲಿಲ್ಲ. ಅಷ್ಟೊಂದು ಗೋಪ್ಯತೆ ಕಾಯ್ದುಕೊಳ್ಳಲಾಗಿತ್ತು ಎಂಬ ಮಾತು ಕೇಳಿಬಂದಿತ್ತು.
ಅAದು ಸುಮಾರು 25 ಕಡೆ ದಾಳಿ ನಡೆದು ಪ್ರಕರಣ ದಾಖಲಿಸಲಾಗಿಸಿತ್ತಲ್ಲದೆ, ಇದರ ತನಿಖೆ ಕೂಡ ಪ್ರಗತಿಯಲ್ಲಿದೆ. ಈ ನಡುವೆ ಜಿಲ್ಲೆಯಲ್ಲಿ ಮರಳು ಗಣಿಗಾರಿಕೆ ನಿಯಮಗಳನ್ನು ಉಲ್ಲಂಘಿಸಿರುವ 28 ಗುತ್ತಿಗೆದಾರರಿಗೆ ಒಟ್ಟು 68 ಕೋಟಿಗೂ ಅಧಿಕ ಮೊತ್ತದ ದಂಡ ವಿಧಿಸುವ ನೋಟಿಸ್ ಜಾರಿ ಮಾಡಲಾಗಿದೆ.
ಜಿಲ್ಲೆಯಲ್ಲಿ ನಡೆದಿರುವ ಅಕ್ರಮ ಮರಳು ಗಣಿಗಾರಿಕೆ ಹಾಗೂ ಬಾಕಿ ಇರುವ ದಂಡದ ಮೊತ್ತದ ಕುರಿತು ಮಾಹಿತಿ ‘ಪ್ರಜಾಪ್ರಗತಿ’ಗೆ ದೊರೆತಿದ್ದು, ಬಾಕಿ ಇರುವ ದಂಡದ ಪ್ರಕರಣಗಳನ್ನು ಜಿಲ್ಲಾ ಮರಳು ಸಮಿತಿ (ಡಿಎಸ್ಸಿ) ಮುಂದೆ ಮಂಡಿಸಿ, ಅನ್ವಯವಾಗುವ ನಿಯಮಗಳ ಪ್ರಕಾರ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ.
ಜಿಲ್ಲೆಯಲ್ಲಿಯೇ ಅತ್ಯುತ್ತಮ ಗುಣಮಟ್ಟದ ಮರಳು ದೊರೆಯುವ ಕ್ವಾರಿ ಎಂದೇ ಹೆಸರಾಗಿರುವ ತೀರ್ಥಹಳ್ಳಿ ತಾಲೂಕಿನ ದಬ್ಬಣಗದ್ದೆ ಗ್ರಾಮದಲ್ಲಿ ನಡೆದಿರುವ ಅಕ್ರಮ ಮರಳು ಗಣಿಗಾರಿಕೆ ಪ್ರಕರಣದಲ್ಲಿ 2,116 ಮೆಟ್ರಿಕ್ ಟನ್ ಮರಳನ್ನು ಅಕ್ರಮವಾಗಿ ಹೊರತೆಗೆಯಲಾಗಿದೆ. ಈ ಪ್ರಕರಣಕ್ಕೆ ಸಂಬAಧಿಸಿದAತೆ ಗುತ್ತಿಗೆದಾರನಿಗೆ 1.08 ಕೋಟಿ ದಂಡದ ನೋಟಿಸ್ ಜಾರಿ ಮಾಡಲಾಗಿದೆ.
ಜಿಲ್ಲೆಯಲ್ಲಿ 2016ರ ತಿದ್ದುಪಡಿ ನಿಯಮಗಳಡಿ ಒಟ್ಟು 38 ಮರಳು ಗಣಿಗಾರಿಕೆ ಗುತ್ತಿಗೆಗಳನ್ನು ಮಂಜೂರು ಮಾಡಲಾಗಿತ್ತು. ಈ ಪೈಕಿ 34 ಗುತ್ತಿಗೆಗಳ ಅವಧಿ ಮುಕ್ತಾಯಗೊಂಡಿದ್ದು, ಪ್ರಸ್ತುತ ಕರ್ನಾಟಕ ಉಪ ಖನಿಜ ರಿಯಾಯಿತಿ ನಿಯಮಗಳು, 1994ರ ಅಡಿಯಲ್ಲಿ ಮೂರು ಮರಳು ಗುತ್ತಿಗೆಗಳು ಹಾಗೂ ಒಂದು ರಿಯಾಯಿತಿ ಮಾತ್ರ ಜಾರಿಯಲ್ಲಿವೆ.
2023ರ ರಿಯಾಯಿತಿ ತಿದ್ದುಪಡಿ ನಿಯಮಗಳ ಅಡಿಯಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಒಟ್ಟು 31 ಮರಳು ಬ್ಲಾಕ್ಗಳನ್ನು ಗುರುತಿಸಲಾಗಿತ್ತು. ಈ ಪೈಕಿ ಎಂಟು ಬ್ಲಾಕ್ಗಳನ್ನು ಸರ್ಕಾರಿ ಕಾಮಗಾರಿಗಳಿಗಾಗಿ ಮೀಸಲಿಡಲಾಗಿತ್ತು. ಉಳಿದ 23 ಬ್ಲಾಕ್ಗಳನ್ನು ಟೆಂಡರ್-ಕಮ್-ಹರಾಜು ಪ್ರಕ್ರಿಯೆ ಮೂಲಕ ಹಂಚಿಕೆ ಅಥವಾ ವಿಲೇವಾರಿ ಮಾಡಲಾಗಿದೆ.
ಫೆಬ್ರವರಿ 24, 2025ರಂದು ಹೊರಡಿಸಲಾದ ಟೆಂಡರ್-ಕಮ್-ಹರಾಜು ಅಧಿಸೂಚನೆಯಂತೆ 20 ಮರಳು ಬ್ಲಾಕ್ಗಳ ಪ್ರಕ್ರಿಯೆ ಪೂರ್ಣಗೊಂಡಿದ್ದು, ಯಶಸ್ವಿ ಬಿಡ್ದಾರರಿಗೆ ಆಶಯ ಪತ್ರ (ಲೆಟರ್ ಆಫ್ ಇಂಟೆAಟ್) ನೀಡಲಾಗಿದೆ. ಮರಳು ಸಾಗಣೆ ಮತ್ತು ಸಂಬAಧಿತ ಯೋಜನೆಗಳಿಗೆ ಅನುಮೋದನೆ ಕೂಡ ನೀಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಸಂಬAಧಪಟ್ಟ ಇಲಾಖೆಗಳು ಮರಳು ಸಂಗ್ರಹಿಸಲು ಅಗತ್ಯವಿರುವ ಕ್ಯಾರಿ ಪ್ಲಾನ್ ಹಾಗೂ ಪರಿಸರ ಅನುಮತಿ ಪ್ರಮಾಣಪತ್ರವನ್ನು ಒದಗಿಸಬೇಕೆಂದು ತಿಳಿಸಲಾಗಿದೆ.
ಜಿಲ್ಲೆಯಲ್ಲಿ ಅಕ್ರಮ ಮರಳು ಮತ್ತು ಕಲ್ಲು ಗಣಿಗಾರಿಕೆ, ಮರಳು ದಾಸ್ತಾನು ಹಾಗೂ ಅಕ್ರಮ ಸಾಗಾಟಕ್ಕೆ ಕಡಿವಾಣ ಹಾಕಲು ಜಿಲ್ಲಾ ಮರಳು ಸಮಿತಿ, ಜಿಲ್ಲಾ ಕಾರ್ಯಪಡೆ ಮತ್ತು ತಾಲೂಕು ಮಟ್ಟದ ಸಮಿತಿಗಳನ್ನು ರಚಿಸಲಾಗಿದೆ.
ಕಂದಾಯ, ಅರಣ್ಯ, ಪೊಲೀಸ್ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಅಕ್ರಮ ಚಟುವಟಿಕೆಗಳ ವಿರುದ್ಧ ಕ್ರಮ ಕೈಗೊಂಡಿವೆ.
ಗೂಂಡಾ ಕಾಯ್ದೆ: ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ ಮರಳು ಗಣಿಗಾರಿಕೆ, ಸಂಗ್ರಹಣೆ ಮತ್ತು ಸಾಗಣೆಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದೆ. ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ನಿರ್ದೇಶನದ ಮೇರೆಗೆ ಪೊಲೀಸ್ ಮಹಾನಿರ್ದೇಶಕ ಹಾಗೂ ಮಹಾ ಪರಿಶೀಲಕ (ಡಿಜಿ ಮತ್ತು ಐಜಿಪಿ) ಎಂ.ಎ. ಸಲೀಂ ಅವರು ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಮಹತ್ವದ ಸುತ್ತೋಲೆ ಹೊರಡಿಸಿದ್ದಾರೆ.
ಅಕ್ರಮ ಮರಳು ಗಣಿಗಾರಿಕೆ ಮತ್ತು ಸಾಗಣೆ ಕೇವಲ ರಾಜ್ಯದ ನೈಸರ್ಗಿಕ ಸಂಪತ್ತಿನ ಲೂಟಿಯಷ್ಟೇ ಅಲ್ಲ, ಅದು ಕಾನೂನು ಸುವ್ಯವಸ್ಥೆ ಹಾಗೂ ಸಾರ್ವಜನಿಕ ಹಿತಾಸಕ್ತಿಗೆ ಗಂಭೀರ ಸವಾಲು ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.








