ಹಾವೇರಿ :
ರೈತರು ಔಷಧ ಸಿಂಪರಣೆ ಹಾಗೂ ರಸ ಗೊಬ್ಬರ ಬಳಸುವ ಪದ್ಧತಿಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಲು ಸಾಧ್ಯವಾಗಲಿ ಎಂದು ಕೃಷಿ ಉಪನಿರ್ದೇಶಕರಾದ ಶ್ರೀಮತಿ ಸ್ಪೂರ್ತಿ ಜಿ.ಎಸ್ ಹೇಳಿದರು.
ಜಿಲ್ಲೆಯ ಬ್ಯಾಡಗಿ ತಾಲ್ಲೂಕಿನ ಮೂಟೆಬೆನ್ನೂರ ಗ್ರಾಮದಲ್ಲಿ ಕೃಷಿ ಇಲಾಖೆ ಮತ್ತು ಬಾಯರ್ ಬೋಲಗಾರ್ಡ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಗ್ರಾಮದ ಕರಬಸಪ್ಪ ಎಲಿ ಅವರ ಜಮೀನಿನಲ್ಲಿ ಜರುಗಿದ ರೈತರಿಗೆ ತರಬೇತಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅವರು ಮಾತನಾಡಿದರು.
ರೈತರಿಗೆ ಬೆಳೆಗಳನ್ನು ಹೇಗೆ ವೈಜ್ಞಾನಿಕವಾಗಿ ಬೆಳೆಯಬೇಕು. ಆರ್ಥಿಕವಾಗಿ ಬಲಿಷ್ಠವಾಗಲು ತರಬೇತಿಗಳು ಅಗತ್ಯವಾಗಿವೆ.ಅವುಗಳನ್ನು ಸದುಪಯೋಗ ಪಡಿಸಿಕೊಳ್ಳಲು ರೈತರು ಮುಂದಾಗಿರಿ ಎಂದರು.
ಬ್ಯಾಡಗಿ ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕರಾದ ವೀರಭದ್ರಪ್ಪ ಸರ್ ಮಾತನಾಡಿ ರೈತರಿಗೆ ತಮ್ಮ ಇಲಾಖೆ ಯಲ್ಲಿ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
ಬಾಯರ್ ಬೋಲಗಾರ್ಡ ಸಂಸ್ಥೆಯ ಅಧಿಕಾರಿಗಳಾದ ಶಂಬಣ್ಣ ಹಾದಿಮನಿ ಮಾತನಾಡಿ ರೈತರಿಗೆ ಹತ್ತಿ ಬೆಳೆಯಲ್ಲಿ ಬರುವ ಗುಲಾಬಿ ಕಾಯಿ ಕೊರಕ ಮತ್ತು ರಸ ಹಿರುವ ಕಿಟದ ಬಗ್ಗೆ ಮಾಹಿತಿ ನೀಡಿದರು.
ಸಹಾಯಕ ಕೃಷಿ ಅಧಿಕಾರಿಗಳಾದ ಸುರೇಶ ನಾಯ್ಕ ಮಾತನಾಡಿ ರೈತರಿಗೆ ಸುರಕ್ಷಿತ ಕೀಟನಾಶಕ ಬಳಕೆ ಮಾಹಿತಿ ನೀಡಿದರು.
ಹಾವೇರಿ ಜಿಲ್ಲೆಯ ಬೋಲಗಾರ್ಡ ಸಂಸ್ಥೆಯ ಪ್ರತಿನಿಧಿಗಳಾದ ನಿಂಗಪ್ಪ ಜಾಡರ ಮಾತನಾಡಿ ರೈತರು ಪದೇ ಪದೇ ಒಂದೇ ಹೊಲದಲ್ಲಿ ಒಂದೇ ಬೆಳೆ ಬೆಳೆಯುದರಿಂದ ಆಗುವ ತೊಂದರೆ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.
ಈ ಕಾರ್ಯಕ್ರಮಕ್ಕೆ ಜಿಪಂ ಮಾಜಿ ಸದಸ್ಯ ಸುಭಾಷ್ ಕುಳೆನೂರ. ಶಿವಪ್ಪ. ಕರಬಸಪ್ಪ ಎಲಿ. ಮಾಲತೇಶ ಪೇದ್ದರ.ಶಿವಪ್ಪ ಮತ್ತೂರ. ಬಳ್ಳಾರಿ. ಮಾರುತಿ ಕುರಿಯವರ. ಫಕ್ಕಿರಪ್ಪ ಗೋರವರ. ಜಗದೀಶ ಬಂಡಾರಿ ಸೇರಿದಂತೆ ಅನೇಕರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ