ಹೊಸದುರ್ಗ:
ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ಪ್ರಯತ್ನದಿಂದ ಮತಾಂತರಗೊಂಡವರು ಹಿಂದೂ ಧರ್ಮದಿಂದ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದ 8 ಮಂದಿ ಹಿಂದೂ ಧರ್ಮಕ್ಕೆ ಮತ್ತೆ ವಾಪಸ್ ಆಗಿರುವ ಘಟನೆ ಹೊಸದುರ್ಗ ತಾಲ್ಲೂಕಿನ ಬಲ್ಲಾಳ ಸಮುದ್ರದ ಮಾರುತಿನಗರದಲ್ಲಿ ನಡೆದಿದೆ.
ಹೌದು ಇತ್ತೀಚೆಗೆ ಹೊಸದುರ್ಗ ಶಾಸಕ ಗೂಳಿಹಟ್ಟಿ ಡಿ.ಶೇಖರ್ ತಾಲ್ಲೂಕಿನಾಧ್ಯಂತ ಎಗ್ಗಿಲ್ಲದೇ ರಾಜಾರೋಷವಾಗಿ ಮತಾಂತರ ನಡೆಯುತ್ತಿರುವ ಕುರಿತು ಇತ್ತೀಚೆಗೆ ವಿಧಾನಸಭೆ ಕಲಾಪದಲ್ಲಿ ಚರ್ಚಿಸಿ ಸದ್ದು ಮಾಡಿದ್ದರು. ಈ ಹಿನ್ನೆಲೆಯಲ್ಲಿ ಕಳೆದ ಒಂದು ತಿಂಗಳಿಂದಲೂ ರಾಜ್ಯಾದ್ಯಂತ ಈ ಮತಾಂತರ ಕುರಿತಾಗಿ ಎಲ್ಲೆಡೆ ಶಾಸಕರಿಗೆ ಬೆಂಬಲ ವ್ಯಕ್ತ ಪಡಿಸುತ್ತಿದ್ದರು.
ಆದರೆ ಭಾನುವಾರ ಶಾಸಕ ಗೂಳಿಹಟ್ಟಿ ಡಿ.ಶೇಖರ್ ಅವರೇ ಖುದ್ದು ತಾಲ್ಲೂಕಿನ ಬಲ್ಲಾಳ ಸಮುದ್ರದ 4 ಕುಟುಂಬದ 8 ಸದಸ್ಯರನ್ನು ಇಲ್ಲಿನ ಹಾಲುರಾಮೇಶ್ವರ ದೇಗುಲದಲ್ಲಿ ಮತಾಂತರಗೊಂಡಿದ್ದ ಹಿಂದೂ ಧರ್ಮದವರನ್ನು ಮನವೊಲಿಸಿ ಮತ್ತೆ ಸ್ವಧರ್ಮ ಸೇರ್ಪಡೆ ಮಾಡುವಲ್ಲಿ ಶಾಸಕರು ಯಶಸ್ವಿಯಾಗಿದ್ದಾರೆ. ಶಾಸಕರ ಈ ಕೆಲಸದಿಂದ ಹೊಸದುರ್ಗ ತಾಲ್ಲೂಕಿನ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಶಾಸಕ ಗೂಳಿಹಟ್ಟಿ ಡಿ.ಶೇಖರ್ ಪ್ರಜಾಪ್ರಗತಿಯೊಂದಿಗೆ ಮಾತನಾಡಿದ ಅವರು, ಮತಾಂತರಗೊಂಡ ಪ್ರದೀಪ್, ನಾರಾಯಣಪ್ಪ, ಅಣ್ಣಪ್ಪ, ಗೌರಮ್ಮ 4 ಕುಟುಂಬದ 8 ಸದಸ್ಯರು ನಾಲ್ಕೈದು ವರ್ಷಗಳ ಹಿಂದೆ ಕೇರಳಕ್ಕೆ ಹೋಗಿ ಹಿಂದೂ ಧರ್ಮದಿಂದ ಕ್ರೈಸ್ತ ಧರ್ಮಕ್ಕೆ ಮತಾಂತರ ಗೊಂಡಿದ್ದರು. ಗರ್ವವಾಪಸಿ ಕಾರ್ಯಕ್ರಮದಡಿ ವಿಶೇಷವಾಗಿ ದೇವಿಗೆ ಪೂಜೆ ಮಾಡಿಸುವ ಮೂಲಕ ಅವರನ್ನು ವಾಪಸ್ ಕರೆದುಕೊಂಡು ಬಂದಿದ್ದೇನೆ. ಇದು ಪ್ರಾರಂಭಿಕ ಹಂತವಾಗಿದ್ದು, ಮುಂದಿನ ದಿನಗಳಲ್ಲಿ ಮತಾಂತರ ಆಗಿರುವರನ್ನು ವಾಪಸ್ ಕರೆತರುವ ಕೆಲಸ ಮಾಡುತ್ತೇನೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
