ಸಂಗೀತಕ್ಕೆ ಮಳೆಯನ್ನೆ ಸುರಿಸುವ ಶಕ್ತಿ ಇದೆ

ಹರಪನಹಳ್ಳಿ:

ಟಿವಿಗಳಲ್ಲಿ ಮೂಡಿ ಬರುವ ಸಂಗೀತ ಕಾರ್ಯಕ್ರಮಗಳಲ್ಲಿ ಉತ್ತರ ಕರ್ನಾಟಕದ ಪ್ರತಿಭೆಗಳೇ ಹೆಚ್ಚು : ಚನ್ನಬಸವ ಶಿವಯೋಗಿ ಶ್ರೀ.           ಟಿವಿಗಳಲ್ಲಿ ಮೂಡಿ ಬರುವ ಸಂಗೀತ ಕಾರ್ಯಕ್ರಮಗಳಲ್ಲಿ ಉತ್ತರ ಕರ್ನಾಟಕದ ಪ್ರತಿಭೆಗಳೇ ಹೆಚ್ಚಾಗಿದ್ದು, ಅವರಲ್ಲಿ ಡಾ.ಪಂಡಿತಪುಟ್ಟರಾಜ ಗವಾಯಿಗಳು ಹಾಗೂ ಗಾನಯೋಗಿ ಪಂಚಾಕ್ಷರಿ ಗವಾಯಿಗಳ ಶಿಷ್ಯಂದಿರ ಸಂಖ್ಯೆ ಬಹುಪಾಲು ಎಂದು ನೀಲಗುಂದ ಗ್ರಾಮದ ಗುಡ್ಡದ ಸಂಸ್ಥಾನ ಪೀಠದ ಚನ್ನಬಸವ ಶಿವಯೋಗಿ ಶ್ರೀಗಳು ಅಭಿಪ್ರಾಯ ಪಟ್ಟರು.

ಪಟ್ಟಣದ ಅಂಬ್ಲಿ ದೊಡ್ಡ ಭರ್ಮಪ್ಪ ಪ್ರಥಮ ದರ್ಜೆ ಮಹಾ ವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಸ್ವರ ವೈಭವ ಸಾಂಸ್ಕೃತಿಕ ಎಜುಕೇಷನಲ್ ಚಾರಿಟಬಲ್ ಟ್ರಸ್ಟ್‍ನಿಂದ ಆಯೋಜಿಸಲಾಗಿದ್ದ ವಾಯ್ಸ್ ಆಫ್ ಹರಪನಹಳ್ಳಿ ಜಿಲ್ಲಾ ಮಟ್ಟದ ಗಾಯನ ಸ್ಪರ್ಧೆಯ ಸೆಮಿಫೈನಲ್ ಮತ್ತು ಫೈನಲ್ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀಗಳು ಈ ಪ್ರಪಂಚದಲ್ಲಿ ಸಂಗೀತಕ್ಕೆ ಮಾರು ಹೋಗದವರೇ ಇಲ್ಲ. ಸಂಗೀತಕ್ಕೆ ರೋಗವನ್ನು ಗುಣಪಡಿಸುವ ಶಕ್ತಿ ಇದ್ದು ಮೇಘ ಮಲ್ಲಾರ ಸಂಗೀತ ಹಾಡಿದರೆ ಮಳೆಯೇ ಬರುತ್ತದೆ ಅಂತಹ ಶಕ್ತಿ ಈ ಸಂಗೀತಕ್ಕೆ ಇದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೆಪಿಸಿಸಿ ಮಾಧ್ಯಮ ವಿಶ್ಲೇಷಕಿ ಎಂ.ಪಿ.ವೀಣಾ ಮಹಾಂತೇಶ್ ಚರಂತಿಮಠ ಮಾತನಾಡಿ ಮಕ್ಕಳಿಗೆ ಸಂಗೀತ ಕಲಿಕೆಗೆ ತಂದೆ, ತಾಯಿ, ಪೋಷಕರು ಹಾಗೂ ಶಿಕ್ಷಕರು ಒತ್ತಡ ಏರಬಾರದು ಯಾವುದೇ ಕಲೆ ಬಲವಂತದಿಂದ ಬರುವಂತಹದ್ದಲ್ಲ. ಅದು ಆಸಕ್ತಿ ಇದ್ದವರಿಗೆ ಮಾತ್ರ ಒಲಿಯುತ್ತದೆ. ನಮ್ಮ ತಂದೆ ದಿ.ಎಂ.ಪಿ.ಪ್ರಕಾಶ್ ಹಾಗೂ ನನ್ನ ಅಣ್ಣ ದಿ.ಎಂ.ಪಿ.ರವೀಂದ್ರ ಅವರು ಕಲೆ, ಸಾಹಿತ್ಯ, ಸಂಸ್ಸøತಿಗೆ ಅಪಾರ ಕೊಡುಗೆ ನೀಡಿದ್ದು ನಮ್ಮತಂದೆ ಸಂಗೀತ ಕಲಿಕೆಗೆ ಮನೆಯಲ್ಲಿ ಒಬ್ಬ ಗವಾಯಿಗಳನ್ನು ನೇಮಿಸಿದ್ದರು ನನಗೆ ಸಂಗೀತ ಕಲಿಯಲು ಆಗಲಿಲ್ಲ, ಲತಕ್ಕ ಹಾಗೂ ಸುಮಕ್ಕ ರಂಗಗೀತೆಗಳನ್ನು ಹಾಡುತ್ತಿದ್ದರು. ಅಣ್ಣ ರವೀಂದ್ರ ಅವರು ಯಲ್ಲೋ ಜೋಗಪ್ಪ ನಿನ್ನರಮನೆ ಗೀತೆಯನ್ನು ಅದ್ಬುತವಾಗಿ ಹಾಡುತ್ತಿದ್ದರು ಎಂದರು.

ಕನ್ನಡ ಉಪನ್ಯಾಸಕ ಹೆಚ್.ಮಲ್ಲಿಕಾರ್ಜುನ ಮಾತನಾಡಿ ಗುಡಿಸಲ್ಲಿಯೇ ಪ್ರತಿಭೆಗಳು ಅರಳುವುದು ಅಂತಹ ಪ್ರತಿಭೆಯನ್ನು ಗುರುತಿಸಿ  ವಾಯ್ಸ್ ಆಫ್ ಹರಪನಹಳ್ಳಿ ಇದೊಂದು ಉತ್ತಮ ವೇದಿಕೆ ಯಾಗಿದ್ದು, ಇಂತಹ ವೇದಿಕೆಯಲ್ಲಿ ಗೆಲ್ಲುವುದಕ್ಕಿಂತ ಭಾಗವಹಿಸುವಿಕೆ ಮುಖ್ಯ

ಆಯೂಷ್ ನೇತ್ರಧಾಮ ಕ್ಲಿನಿಕ್‍ನ ಡಾ.ಸಂಗೀತ ಮಾತನಾಡಿ ಇಂತಹ ಕಾರ್ಯಕ್ರಮಗಳು ಪಟ್ಟಣದಲ್ಲಿ ಜರುಗುತ್ತಿರುವುದು ಹೆಮ್ಮೆಯ ಸಂಗತಿ, ಸ್ಪರ್ಧಿಗಳು ಗೆಲ್ಲುವುದು ಮುಖ್ಯವಲ್ಲ ಇಂತಹ ಸ್ಥರ್ದೆಗಳಲ್ಲಿ ಭಾಗವಹಿಸುವುದೇ ಮುಖ್ಯಎಂದರು.
ತಾಲೂಕು ಕರವೇ ಅಧ್ಯಕ್ಷ ಬಸವರಾಜ್ ಹುಲಿಯಪ್ಪನವರ್ ಮಾತನಾಡಿ ಸ್ಪರ್ಧೆಯಲ್ಲಿ ಗೆದ್ದವರು ಹಿಗ್ಗದೆ ಸೋತವರು ಕುಗ್ಗದೆ ಮುಂದೆ ಸಾಗಬೇಕು. ಇತಿಹಾಸದಲ್ಲಿ ಸೋತವರೆ ಸಾಧನೆ ಮಾಡಿದವರಲ್ಲಿ ಹೆಚ್ಚು. ಸತತ ಪರಿಶ್ರಮ ಸಾಧನೆ ಸಾಧ್ಯ ಎಂದರು.

ಕನ್ನಡದ ಜನಪ್ರಿಯ ಮನೋರಂಜನಾ ವಾಹಿನಿ ಜೀ ಕನ್ನಡದ ಸರಿಗಮಪ ಖ್ಯಾತಿಯ ನವ್ಯ ಆರ್.ಭಟ್, ಹಗರಿಬೊಮ್ಮನಳ್ಳಿಯ ಸಂಗೀತ ನಿರ್ದೇಶಕ ಪ್ರದೀಪ್ ಅಕ್ಕಸಾಲಿ, ಸ್ವರ ವೈಭವ ಸಂಗೀತ ಪಾಠ ಶಾಲೆಯ ಸಂಸ್ಥಾಪಕ ಬಸವರಾಜ್ ಭಂಡಾರಿ ತೀರ್ಪುಗಾರರಾಗಿದ್ದರು. ಪುರಸಭೆ ಮಾಜಿ ಅಧ್ಯಕ್ಷೆ ಕವಿತಾ ವಾಗೀಶ್, ಪ್ರಾಂಶುಪಾಲರಾದ ಡಾ.ಹೆಚ್.ಮಲ್ಲಿಕಾರ್ಜುನ್, ಕೋರಿಶೆಟ್ಟಿ ತಿರುಮಲ, ಪ್ರಕಾಶ್, ಎರಡೆತ್ತಿನಹಳ್ಳಿ ಮಂಜುನಾಥ್ ಉಪಸ್ಥಿತರಿದ್ದರು.

2021-22ನೇ ಸಾಲಿನ ವಾಯ್ಸ್ ಆಫ್ ಹರಪನಹಳ್ಳಿ ಜಿಲ್ಲಾ ಮಟ್ಟದ ಗಾಯನ ಸ್ಪರ್ಧೆಯಲ್ಲಿ ಹಡಗಲಿಯ ಕಿರಣ್ ಕುಮಾರ್ ಪ್ರಥಮ, ಕಾವ್ಯ ದ್ವಿತೀಯ ಹಾಗೂ ಕೂಡ್ಲಿಗಿಯ ಅನುಷಾ.ಡಿ ಅವರು ತೃತಿಯ ಸ್ಥಾನ ಪಡೆದು ವಿಜೇತರಾಗಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link