ತಿಪಟೂರು : ದಂಡದಿಂದ ಪಾರಾಗಲು ಹೋಗಿ ಇಬ್ಬರ ಬಲಿ ಪಡೆದ ಬೊಲೆರೊ!!

 ತಿಪಟೂರು :

     ಸೂಕ್ತ ದಾಖಲೆಗಳಿಲ್ಲದ ವಾಹನಗಳ ಸವಾರರ ಮೇಲೆ ಪೋಲೀಸರು ಹಾಕುತ್ತಿರುವ ದಂಡದಿಂದ ತಪ್ಪಿಸಿಕೊಳ್ಳಲು ಹೋಗಿ ಇಬ್ಬರ ಪ್ರಾಣವನ್ನು ದಂಡವಾಗಿ ತೆತ್ತ ಘಟನೆ ತಾಲ್ಲೂಕಿನ ಹೊನ್ನವಳ್ಳಿ ಹೋಬಳಿಯ ಬಳವನೇರಲು ಗೇಟ್‍ನಲ್ಲಿ ಸಂಭವಿಸಿದೆ.

     ತಾಲ್ಲೂಕಿನ ಹೊನ್ನವಳ್ಳಿ ಪೊಲೀಸ್ ಠಾಣೆಯ ಸಿಬ್ಬಂದಿ ವಾಹನಗಳ ದಾಖಲೆಗಳನ್ನು ಪರಿಶೀಲಿಸುತ್ತಿದ್ದರು. ಈ ಸಂದರ್ಭದಲ್ಲಿ ಹೊನ್ನವಳ್ಳಿ ಕಡೆಯಿಂದ ಮತಿಘಟ್ಟದ ಕಡೆಗೆ ಹೋಗುತ್ತಿದ್ದ ಮಹೀಂದ್ರ ಬೊಲೆರೊ ವಾಹನವು ಬಳವನೇರಲಿನಿಂದ ತಿಪಟೂರಿನ ಹಾಲಿನ ಡೈರಿ ಕಾರ್ಯಕ್ರಮಕ್ಕೆ ತೆರಳಲುತ್ತಿದ್ದ ಬಳುವನೇರಲು ಗ್ರಾಮದ ಹಾಲಿನ ಡೈರಿಯ ಮಾಜಿ ಕಾರ್ಯದರ್ಶಿ ನಾಗರಾಜು(65) ಹಾಗೂ ಬಿ.ಮುದ್ದೇನಹಳ್ಳಿ ಡೈರಿಯ ಕಾರ್ಯದರ್ಶಿ ಚಿದಾನಂದ (55) ಪ್ರಯಾಣಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ರಭಸವಾಗಿ ಗುದ್ದಿದ ಪರಿಣಾಮ ದ್ವಿಚಕ್ರವಾಹನದ ಸವಾರರು ಸ್ಥಳದಲ್ಲೆ ಮೃತಪಟ್ಟಿದ್ದಾರೆ.

     4 ರಸ್ತೆಗಳು ಕೂಡುವ ಈ ರಸ್ತೆಯಲ್ಲಿ ಯಾವುದೇ ರೀತಿಯ ಸೂಚನಾ ಫಲಕಗಳಾಗಲಿ, ವೇಗವನ್ನು ನಿಯಂತ್ರಿಸುವ ಹಮ್ಸ್‍ಗಳಾಗಲಿ ಇಲ್ಲದಿರುವುದೆ ಅಪಘಾತಗಳಿಗೆ ಕಾರಣ ಹಾಗೂ ಈ ಪ್ರದೇಶದಲ್ಲಿ ದಿನನಿತ್ಯ ಅಪಘಾತಗಳು ಸಂಭವಿಸುತ್ತಲೆ ಇರುತ್ತವೆ ಎಂದು ಅಕ್ಕಪಕ್ಕದ ಗ್ರಾಮಸ್ಥರು ಶವಗಳನ್ನು ತೆಗೆಯಲು ಬಿಡದೆ ಪ್ರತಿಭಟನೆ ಮಾಡಲು ಪ್ರಾರಂಭಿಸಿದರು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಗ್ರಾಮಾಂತರ ಠಾಣೆ ಸರ್ಕಲ್ ಇನ್ಸ್‍ಪೆಕ್ಟರ್ ಜಯಲಕ್ಷ್ಮಿ ಪರಿಸ್ಥಿತಿಯನ್ನು ತಿಳಿಯಾಗಿಸಲು ಪ್ರಯತ್ನಿಸಿದರು.

     ಆರಕ್ಷಕರು ವಾಹನಗಳ ದಾಖಲೆಗಳನ್ನು ಪರೀಕ್ಷಿಸುತ್ತಿರುತ್ತಾರೆ. ವಾಹನದಿಂದ ಬಂದ ಅವರು ಪೋಲೀಸರನ್ನು ಕಂಡು ದಂಡ ವಿಧಿಸುತ್ತಾರೆ ಎಂದು ಭಾವಿಸಿ. ದಂಡದಿಂದ ತಪ್ಪಿಕೊಳ್ಳಲು ಹೋಗಿ ಅಪಘಾತ ಮಾಡಿ ಇಬ್ಬರ ಪ್ರಾಣಕ್ಕೆ ಸಂಚಕಾರ ತಂದಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link