ಗುಬ್ಬಿ:
ಕಳೆದ 30 ವರ್ಷದಿಂದ ಗುಡಿಸಲಲ್ಲಿ ಬದುಕು ಕಂಡ ಅಲೆಮಾರಿ ಜನಾಂಗಕ್ಕೆ ಮಾನವೀಯ ಸಹಕಾರ ಜೊತೆಗೆ ಮಾನಸಿಕ ಸ್ಥೈರ್ಯ ತುಂಬುವ ಕೆಲಸ ಆಗಬೇಕಿದೆ ಎಂದು ಜೆಡಿಎಸ್ ಮುಖಂಡ ಬಿ.ಎಸ್.ನಾಗರಾಜು ತಿಳಿಸಿದರು.
ಪಟ್ಟಣದ ಪೆÇಲೀಸ್ ಠಾಣೆ ಹಿಂಬದಿಯ ಹಂದಿ ಜೋಗರ ಕಾಲೋನಿಗೆ ಭೇಟಿ ನೀಡಿ ಸಂತ್ರಸ್ತ ಕುಟುಂಬಗಳಿಗೆ ಆಹಾರಕಿಟ್ ವಿತರಣೆ ಮಾಡಿ ಮಾತನಾಡಿದ ಅವರು, ಸಾಮಾಜಿಕವಾಗಿ ಅಲ್ಲದೆ ಎಲ್ಲಾ ರಂಗದಲ್ಲೂ ಹಿಂದುಳಿದ ಈ ಜನಾಂಗ ಭಿಕ್ಷಾಟನೆಯನ್ನೆ ಕಸಬು ಮಾಡಿಕೊಂಡಿದ್ದರು. ಇವರ ಬದುಕು ನಿಕೃಷ್ಟ ಎನಿಸುವ ಮುನ್ನ ಅವರ ಬದುಕಿಗೆ ಅವಶ್ಯ ಸವಲತ್ತು ಒದಗಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ಹಂದಿ ಸಾಕಾಣಿಕೆಯನ್ನೆ ಜೀವನವಾಗಿಸಿಕೊಂಡು, ನಂತರದಲ್ಲಿ ಬದುಕಿಗೆ ನಾನಾ ಮಾರ್ಗ ಹುಡುಕಿಕೊಂಡು ಸ್ವಾಭಿಮಾನದತ್ತ ಹೊರಟಿದ್ದಾರೆ. ಅವರ ಈ ಹೋರಾಟಕ್ಕೆ ಸಾಥ್ ನೀಡಿ ಬದುಕು ಕಟ್ಟಿಕೊಳ್ಳಲು ಅನ್ಯ ಮಾರ್ಗ ತಿಳಿಸಬೇಕಿದೆ ಎಂದ ಅವರು ಸರ್ಕಾರದಿಂದ ದೊರೆಯುವ ಸೌಲಭ್ಯದ ಜೊತೆ ಶೈಕ್ಷಣಿಕ ಮತ್ತು ಸಾಮಾಜಿಕ ಕಾಳಜಿ ವಹಿಸಲು ವಿವಿಧ ಸಂಘಟನೆಗಳ ಸಹಕಾರ ಅಗತ್ಯವಿದೆ ಎಂದರು.
ಈಚೆಗೆ ಸುರಿದ ಭಾರಿ ಮಳೆಗೆ ಇವರ ಬದುಕು ದುಸ್ಥರವಾಗಿದೆ. ಸುಮಾರು 40 ಕುಟುಂಬ ಬೀದಿಗೆ ಬಂದಿದೆ. ಮಾರುಕಟ್ಟೆಯ ದಡದಲ್ಲಿನ ಇವರ ಗುಡಿಸಲುಗಳು ಸಂಪೂರ್ಣ ಮುಳುಗಡೆಯಾಗಿದೆ. ಮನೆಯಲ್ಲಿನ ಎಲ್ಲಾ ವಸ್ತುಗಳು, ಆಹಾರ ಪದಾರ್ಥಗಳು ನೀರು ಪಾಲಾಗಿವೆ. ಇವರ ವಾಸ್ತವಸ್ಥಿತಿ ತುಂಬಾ ಕರುಣಾಜನಕವಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಜನರನ್ನು ಮುಖ್ಯವಾಹಿನಿಗೆ ತರಲು ಬದ್ಧನಾಗಿರುತ್ತೇನೆ. ಜೊತೆಗೆ ಇಲ್ಲಿನ ಮಕ್ಕಳ ಶೈಕ್ಷಣಕ ಪ್ರಗತಿಗೆ ಸಹಾಯ ಮಾಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಪಪಂ ಮಾಜಿ ಅಧ್ಯಕ್ಷ ಜಿ.ಡಿ.ಸುರೇಶ್ಗೌಡ, ಮುಖಂಡರಾದ ಗಂಗಣ್ಣ, ಯೋಗೀಶ್, ಸುರೇಶ್, ಮನೋರಂಜನ್, ಮದನ್, ಲವ, ಗೋಪಾಲಗೌಡ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ