ಶ್ರೀ ಬಸವೇಶ್ವರ ದೇವಾಲಯ ಜೀರ್ಣೋದ್ಧಾರ 

ತುಮಕೂರು:

ನ. 27, 28, 29 ರಂದು ಧಾರ್ಮಿಕ ಕಾರ್ಯಕ್ರಮಗಳು  

ನಗರದ ಅರಳೆಪೇಟೆ ಶ್ರೀ ಬಸವೇಶ್ವರಸ್ವಾಮಿ ದೇವಾಲಯದ ಜೀರ್ಣೋದ್ಧಾರ ಹಾಗೂ ಪುನರ್ ಪ್ರತಿಷ್ಠಾಪನೆ ಮತ್ತು ಕುಂಭಾಭಿಷೇಕ ಕಾರ್ಯಕ್ರಮವು ನವೆಂಬರ್ 27, 28 ಮತ್ತು 29 ರಂದು ದೇವಾಲಯದ ಆವರಣದಲ್ಲಿ ನಡೆಯಲಿದೆ ಎಂದು ತುಮಕೂರು ನಗರ ವೀರಶೈವ ಸಮಾಜ ಸೇವಾ ಸಮಿತಿಯ ಅಧ್ಯಕ್ಷ ಟಿ.ಬಿ.ಶೇಖರ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 400 ವರ್ಷಗಳ ಇತಿಹಾಸವಿರುವ ಈ ದೇವಾಲಯ ಶಿಥಿಲವಾಗಿತ್ತು. ತುಮಕೂರಿನ ಬಹಳ ಪುರಾತನ ದೇವಾಲಯ ಇದಾಗಿದ್ದು, ಇದನ್ನು ಜೀರ್ಣೋದ್ಧಾರ ಮಾಡಬೇಕೆಂಬುದು ಸಿದ್ದಗಂಗಾ ಮಠದ ಡಾ.ಶ್ರೀ ಶಿವಕುಮಾರಸ್ವಾಮೀಜಿ ಅವರ ಇಂಗಿತವಾಗಿತ್ತು. ಕಳೆದ ಎರಡು ವರ್ಷಗಳ ಹಿಂದೆ ವೀರಶೈವ ಸಮಾಜದ ವತಿಯಿಂದ ದಾನಿಗಳ ಸಹಕಾರ ಪಡೆದು, ಜೀರ್ಣೋದ್ಧಾರ ಮಾಡಲಾಗಿದೆ ಎಂದರು.

ಅರಳೆಪೇಟೆ ಶ್ರೀ ಬಸವೇಶ್ವರ ದೇವಾಲಯವನ್ನು ಸುಮಾರು 1.70 ಕೋಟಿ ರೂ.ಗಳ ವೆಚ್ಚದಲ್ಲಿ ಜೀರ್ಣೋದ್ಧಾರಗೊಳಿಸಲಾಗಿದೆ. ಇದಕ್ಕೆ ಎಲ್ಲಾ ಸಮುದಾಯದ ಜನರು, 10 ಸಾವಿರದಿಂದ 10 ಲಕ್ಷ ರೂ.ಗಳÀವರೆಗೆ ದೇಣಿಗೆ ನೀಡಿದ್ದಾರೆ. ಸುಮಾರು 30ಘಿ80 ಅಡಿ ನಿವೇಶನದಲ್ಲಿದ್ದ ದೇವಾಲಯ ಚಿಕ್ಕದಾಗುವ ಕಾರಣ, ಪಕ್ಕದಲ್ಲಿಯೇ ಇದ್ದ ಕಾಮಗಾನಹಳ್ಳಿ ನಂಜಪ್ಪ ಟ್ರಸ್ಟ್‍ನವರ ಮನವೊಲಿಸಿ, ಅವರ 30ಘಿ80 ನಿವೇಶನವನ್ನು ಪಡೆದು, 60ಘಿ80 ರಲ್ಲಿ ಐದು ವಿವಿಧ ದೇವರುಗಳ ದೇವಾಲಯ ಇಲ್ಲಿವೆ. ಶ್ರೀಬಸವೇಶ್ವರಸ್ವಾಮಿ, ಶ್ರೀಶೈಲ ಮಲ್ಲಿಕಾರ್ಜುನಸ್ವಾಮಿ, ಶ್ರೀಭಮರಾಂಬ ದೇವಿ, ಜಗದ್ಗುರು ಶ್ರೀರೇಣುಕಾಚಾರ್ಯರ ಐದು ಗರ್ಭಗುಡಿಗಳು ಮತ್ತು ಮಹಾ ದೇವಾಲಯ ಕುಮರೇಶ್ ಅವರ ವಾಸ್ತುಶಿಲ್ಪದ ಪ್ರಕಾರ, ಶಕ್ತಿವೇಲು ಅವರು ಕಟ್ಟಡ ನಿರ್ಮಾಣ ಮಾಡಿದ್ದಾರೆ. ಕಲ್ಲೇಶ್ವರಸ್ವಾಮಿ ಅವರ ನೇತೃತ್ವದಲ್ಲಿ ಸಕಲ ವಿಧಿವಿಧಾನಗಳ ಮೂಲಕ ಪೂಜಾ ಕೈಂಕರ್ಯಗಳು ನಡೆಯಲಿವೆ. ಮೂರು ದಿನಗಳ ಕಾಲ ಬರುವ ಭಕ್ತರಿಗೆ ಅನ್ನದಾನ ವ್ಯವಸ್ಥೆ ಮಾಡಲಾಗಿದೆ ಎಂದು ಟಿ.ಬಿ.ಶೇಖರ್ ವಿವರಿಸಿದರು.

ವೀರಶೈವ-ಲಿಂಗಾಯಿತ ಮಹಾಸಭಾ ಜಿಲ್ಲಾಧ್ಯಕ್ಷ ಮೋಹನ್‍ಪಟೇಲ್ ಮಾತನಾಡಿ, ನವೆಂಬರ್ 27 ರಂದು ಶ್ರೀಮಹಾ ಗಣಪತಿ, ಜಗದ್ಗುರು ಶ್ರೀರೇಣುಕಾಚಾರ್ಯರ ಮತ್ತು ನವಗ್ರಹಗಳ ಪ್ರತಿಷ್ಠಾನ ನಡೆಯಲಿದೆ. ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಶ್ರೀಮದ್ ಉಜ್ಜಯಿನಿ ಸದ್ಧರ್ಮ ಸಿಂಹಾಸನಾಧೀಶ್ವರ ಶ್ರೀಶ್ರೀಶ್ರೀ 1008 ಜಗದ್ಗುರು ಸಿದ್ದಲಿಂಗ ರಾಜದೇಶಿ ಕೇಂದ್ರ ಶಿವಾಚಾರ್ಯ ಮಹಾಭಗತ್ಪಾದರು ವಹಿಸುವರು. ನಂದಿ ವಿಗ್ರಹದ ಅನಾವರಣವನ್ನು ಸಿದ್ದರಬೆಟ್ಟದ ಶ್ರೀವೀರಭದ್ರ ಶಿವಾಚಾರ್ಯಸ್ವಾಮೀಜಿ ಮಾಡುವರು. ಕಾರ್ಯಕ್ರಮವನ್ನು ಮುಜರಾಯಿ ಸಚಿವೆ ಶಶಿಕಲಾಜೊಲ್ಲೆ ಉದ್ಘಾಟಿಸುವರು. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಬಿ.ಸಿ.ನಾಗೇಶ್, ಈಶ್ವರ ಖಂಡ್ರೆ ಅವರುಗಳು ದಾನಿಗಳಿಗೆ ಗೌರವ ಸಮರ್ಪಣೆ ಮಾಡಲಿದ್ದಾರೆ. ಸಂಜೆ ವಿವಿಧ ಹರಗುರು ಚರಮೂರ್ತಿಗಳ ಸಮ್ಮುಖದಲ್ಲಿ ಧರ್ಮಸಭೆ ನಡೆಯಲಿದೆ.

ನವೆಂಬರ್ 28ರ ಭಾನುವಾರ ಬೆಳಗ್ಗೆ ಶ್ರೀಶೈಲ ಮಲ್ಲಿಕಾರ್ಜುನಸ್ವಾಮಿ ಹಾಗೂ ಶ್ರೀಭಮರಾಂಬ ಅಮ್ಮನವರ ಪ್ರತಿಷ್ಠಾಪನೆ ಶ್ರೀರೇಣುಕ ಶಿವಾಚಾರ್ಯಸ್ವಾಮಿಗಳು, ಶ್ರೀಕರಿವೃಷಭ ದೇಶಿಕೇಂದ್ರ ಶಿವಯೋಗಿಶ್ವರ ಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ವಸತಿ ಮತ್ತು ಮೂಲ ಸೌಕರ್ಯ ಇಲಾಖೆಯ ಸಚಿವ ವಿ.ಸೋಮಣ್ಣ ಉದ್ಘಾಟಿಸುವರು. ಸಂಸದ ಜಿ.ಎಸ್.ಬಸವರಾಜು ಅವರು ದಾನಿಗಳಿಗೆ ಗೌರವ ಸಮರ್ಪಿಸುವರು. ಸಂಜೆ ಧರ್ಮ ಸಭೆ ನಡೆಯಲಿದೆ.


ನವೆಂಬರ್ 29 ರಂದು ಶ್ರೀಬಸವೇಶ್ವರ ಸ್ವಾಮಿ ಅವರ ಪ್ರತಿಷ್ಠಾಪನೆ ನಡೆಯಲಿದ್ದು, ಸುತ್ತೂರಿನ ಶ್ರೀಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ, ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗಸ್ವಾಮೀಜಿ ಅವರುಗಳ ದಿವ್ಯಸಾನ್ನಿಧ್ಯದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ದೇವಾಲಯವನ್ನು ಲೋಕಾರ್ಪಣೆ ಗೊಳಿಸುವರು. ಬೃಹತ್ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ ಅವರುಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು ಎಂದು ವಿವರ ನೀಡಿದರು.

ಸುದ್ದಿಗೋಷ್ಠಿಯಲ್ಲಿ ತುಮಕೂರು ನಗರ ವೀರಶೈವ ಸಮಾಜ, ವೀರಶೈವ ಸಹಕಾರ ಬ್ಯಾಂಕ್‍ನ ಮುಖಂಡರಾದ ಜೆ.ಎನ್.ರುದ್ರೇಶ್, ಶಿವಲಿಂಗಮ್ಮ, ರವಿಶಂಕರ್, ಅತ್ತಿ ರೇಣುಕಾನಂದ, ಕೆ.ಜಿ.ಶಿವಕುಮಾರ್, ಉಮೇಶ್, ಸುಮಾ ಪ್ರಸನ್ನಕುಮಾರ್, ಎ.ಸಿ.ಉಮೇಶ್ ಚಂದ್ರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

 

Recent Articles

spot_img

Related Stories

Share via
Copy link