ಮಾವತ್ತೂರು ಕೆರೆಗೆ ತಾಜ್ಯವಿಲೆವಾರಿ ಘಟಕ

ಕೊರಟಗೆರೆ:

       ಶಾಸಕ ಡಾ.ಜಿ.ಪರಮೇಶ್ವರ ಮಾವತ್ತೂರುಕೆರೆಗೆ ಭೇಟಿನೀಡಿ ಪರಿಶೀಲಿಸಿದರು

ತಾಲ್ಲೂಕಿನ ಮಾವತ್ತೂರುಕೆರೆಗೆ ಕಸ ತಾಜ್ಯದ ನೀರು ಬಾರದಂತೆತಡೆಯಲುಎರಡು ಜಿಲ್ಲೆಗಳ ಜಿಲ್ಲಾಧಿಕಾರಿಗಳ ಬಳಿ ಚರ್ಚಿಸಲಾಗಿದ್ದು ದೊಡ್ಡಬಳ್ಳಾಪುರ ಶಾಸಕರಿಗೂ ಈ ಬಗ್ಗೆ ಕ್ರಮ ವಹಿಸುವಂತೆ ತಿಳಿಸಲಾಗಿದೆ ಎಂದು ಶಾಸಕ ಡಾ.ಜಿ.ಪರಮೇಶ್ವರ ತಿಳಿಸಿದರು.

ಅವರುತಾಲ್ಲೂಕಿನ ಕೋಳಾಲ ಹೋಬಳಿಯ ಮಾವತ್ತೂರುಕೆರೆಗೆ ಭೇಟಿನೀಡಿಪತ್ರಕರ್ತರೊಂದಿಗೆ ಮಾತನಾಡಿಮಾವತ್ತೂರುಕೆರೆಗೆ ದೋಡ್ಡಬಳ್ಳಾಪರ ಗಡಿಗ್ರಾಮದ ಬೆಂಗಳೂರು ನಗರದಿಂದ ಬರುವಕಸದ ವಿಲೆವಾರಿಘಟಕದÀತಾಜ್ಯದ ನೀರು ಬರುತ್ತಿರುವ ಬಗ್ಗೆ ವಿಷಯ ತಿಳಿದು ಸಂಭಂದ ಪಟ್ಟಅಧಿಕಾರಿಗಳಿಂದ ಪೂರ್ಣವರದಿಯನ್ನು ತರೆಸಿಕೊಳ್ಳಲಾಗಿದೆ.

ಈ ಸಂಬಂಧಬೆಂಗಳೂರು ಗ್ರಾಮಾಂತರಜಿಲ್ಲೆಯ ಜಿಲ್ಲಾಧಿಕಾರಿಗಳು ಮತ್ತುತುಮಕೂರು ಜಿಲ್ಲಾಧಿಕಾರಿಗಳ ಬಳಿ ಚರ್ಚಿಲಾಗಿದ್ದು, ಮೊದಲು ಕಸವಿಲೆವಾರಿಘಟಕದಿಂದತಾಜ್ಯದ ನೀರನ್ನುತಡೆಯಲುಅಗತ್ಯಕ್ರಮ ಕೈಗೊಳ್ಳುವುದಾಗಿ ಇಬ್ಬರು ಜಿಲ್ಲಾಧಿಕಾರಿಗಳು ಭರವಸೆ ನೀಡಿದ್ದಾರೆ, ಮುಂಬರುವ ದಿನಗಳಲ್ಲಿ ಕಸ ವಿಲೇವಾರಿಘಟಕವನ್ನು ಸ್ಥಳಾಂತರಿಸುವ ಬಗ್ಗೆ ಸರ್ಕಾರಕ್ಕೆಒತ್ತಡ ಹಾಕಲಾಗುವುದು, ಈ ಬಗ್ಗೆ ಪಕ್ಕದ ಶಾಸಕರಾದ ವೆಂಕಟರವಣಪ್ಪ ನವರ ಬಳಿಯು ಚರ್ಚಿಸಲಾಗಿದ್ದುಅರುಕೂಡ ಕಸವಿಲೆವಾರಿಘಟಕನ್ನು ಸ್ಥಳಾಂತರಲು ಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ, ಸದ್ಯಕ್ಕೆತಾಜ್ಯದ ನೀರುತಂತ್ರಜ್ಞಾನ ಬಳಿಸಿ ಕೆರೆಗೆ ಬರುವುದನ್ನುತಡೆಯುಲುಎಲ್ಲಾರೀತಿಯಕ್ರಮಕೈಗೊಳ್ಳಲಾಗುವುದು ಈ ಬಗ್ಗೆ ರೈತರುಆತಂಕ ಪಡಬೇಕಿಲ್ಲಎಂದರು.

ದೊಡ್ಡಬಳ್ಳಾಪುರ ಗಡಿಗ್ರಾಮದಕಸತಾಜ್ಯವಿಲೆವಾರಿಘಟಕ ಸ್ಥಳಾಂತರಕ್ಕೆ ಮೊದಲು ಸರ್ಕಾರದಆಂತದಲ್ಲಿ ಪ್ರಯತ್ನಿಸಲಾಗುವುದುಒಂದು ವೇಳೆ ಸರ್ಕಾರ ಸ್ಪಂದಿಸದಿದ್ದಲ್ಲಿಇದರ ವಿರುದ್ದ ಸ್ಥಳೀಯರೈತರು ಹೋರಾಟಗಾರರು ಸ್ವಾಮೀಜಿಗಳ ಜೋತೆಗೂಡಿ ಹೋರಾಟ ಮಾಡಲಾಗುವುದು,ಕ್ಷೇತ್ರದರೈತರಜನರ ಹಿತಕ್ಕೆ ಸದಾ ಬದ್ದವಿದ್ದುಇದಕ್ಕಾಗಿಎಂತಹ ಹೋರಾಟಕ್ಕೂ ಸಿದ್ದವಿರುವುದಾಗಿ ತಿಳಿಸಿದರು.ಈ ಸಂದರ್ಭದಲ್ಲಿ ಪಕ್ಷ ಮುಖಂಡರುಗ್ರಾಮಸ್ಥರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link