ತುಮಕೂರು:
ತುಮಕೂರಿನಲ್ಲಿ ಸಂಸದ ಜಿ.ಎಸ್.ಬಸವರಾಜ್ ಹೇಳಿಕೆ.
ಮತದಾನದ ಬಳಿಕ ಬಿಜೆಪಿ ಸಂಸದ ಜಿ.ಎಸ್.ಬಸವರಾಜ ಹೇಳಿಕೆ.ನಾನು ಬಿಜೆಪಿ ಅಭ್ಯರ್ಥಿಗೆ ಮತಹಾಕಿದ್ದೇನೆ.ಆರೋಗ್ಯದಲ್ಲಿನ ಏರುಪೇರಿನಿಂದ ಕ್ಷೇತ್ರದಲ್ಲಿ ಓಡಾಡಲು ಆಗಿಲ್ಲ.ಹಾಗಾಗಿ ಟ್ರೆಂಡ್ ಹೇಳಲು ಸಾಧ್ಯ ಇಲ್ಲ.ಬಿಜೆಪಿ ಅಭ್ಯರ್ಥಿ ಗೆಲ್ಲುತ್ತಾರೆ ಎಂಬ ವಿಶ್ವಾಸ ಇದೆ.
ಸಂಸದ ಬಸವರಾಜು
ಕಾಂಗ್ರೆಸ್ ಅಭ್ಯರ್ಥಿ ಪರ ಕೆಲಸ ಮಾಡುತ್ತಾರೆ ಎಂಬ ಆರೋಪ ವಿಚಾರ.ನಮ್ಮ ಪಕ್ಷದಲ್ಲೇ ನನಗೆ ತುಂಬಾ ಜನ ವಿರೋಧಿಗಳು ಇದ್ದಾರೆ ಅವರು ಇಲ್ಲದ ಆರೋಪ ಮಾಡುತ್ತಾರೆ.ನಮ್ಮ ಆತ್ಮ ಗೌರವ ರಕ್ಷಣೆಗೆ ನಾವು ಏನುಬೇಕಾದರೂ ಮಾಡುತ್ತೇವೆ.ದಾರಿಹೋಕರ ಆರೋಪಕ್ಕೆ ನಾನು ಉತ್ತರ ಕೊಡಲ್ಲ.ಕಾಂಗ್ರೆಸ್ ಮಾಜಿ ಶಾಸಕ ಕೆ.ಎನ್. ರಾಜಣ್ಣರ ಋಣ ಬೇರೆ ಬೇರೆ ವಿಚಾರದಲ್ಲಿ ತೀರಿಸಿದ್ದೇನೆ.ಪಕ್ಷದ ವಿಚಾರ ಬಂದಾಗ ಪಕ್ಷದ ಚಿಹ್ನೆಗೆ ಮತಹಾಕಬೇಕು.ಪಕ್ಷದ ವಿರುದ್ಧ ಕೆಲಸ ಮಾಡಿದ್ದರೆ ಅದು ಅಸಭ್ಯತನವಾಗುತ್ತದೆ.ಆತ ಮನುಷ್ಯನೇ ಅಲ್ಲ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ