ಹೇಮಾವತಿ ನಾಲಾ ಇಂಜಿನಿಯರ್ ಕುಟುಂಬ ಆತ್ಮಹತ್ಯೆ

ಗುಬ್ಬಿ:

ಒಂದೇ ಮನೆಯ ಮೂವರು ಸಾವುಹೇಮಾವತಿ ನಾಲೆ ಇಂಜಿನಿಯರ್ ಕುಟುಂಬ ಆತ್ಮಹತ್ಯೆ

      ಹೇಮಾವತಿ ನಾಲಾ ವಲಯ ಸಹಾಯಕ ಇಂಜಿನಿಯರ್ ಸೇರಿ ಒಂದೇ ಕುಟುಂಬದ ಮೂವರು ಗುಬ್ಬಿ ತಾಲ್ಲೂಕಿನ ಸಾಗರನಹಳ್ಳಿ ಗೇಟ್ ಬಳಿ ಹಾದುಹೋಗಿರುವ ಹೇಮಾವತಿ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುರುವಾರ ರಾತ್ರಿ ನಡೆದಿದೆ.

ಹೇಮಾವತಿ ನಾಲಾ ವಲಯ ಕಚೇರಿ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ರಮೇಶ್(55), ಪತ್ನಿ ಮಮತಾ (45) ಮತ್ತು ಮಗಳು ಶುಭಾ(25) ಮೃತ ದುರ್ದೈವಿಗಳು. ರಮೇಶ್ ಕೆ.ಬಿ.ಕ್ರಾಸ್‍ನಲ್ಲಿರುವ ಹೇಮಾವತಿ ಕಚೇರಿಯಲ್ಲಿ ಎಇಇ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಪತ್ನಿ ಮಮತಾ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕಿ. ಕೆ.ಆರ್.ನಗರ ಮೂಲದ ರಮೇಶ್, ಪತ್ನಿ ಜೊತೆ ತುಮಕೂರು ನಗರದ ಮರಳೂರಿನಲ್ಲಿ ನೆಲೆಸಿದ್ದರು.

ಮರ್ಯಾದೆ ಕಾರಣವಾಯಿತೆ…? :

ಗುರುವಾರ ರಾತ್ರಿ ಮಾರುತಿ ಒಮ್ನಿ ಕಾರಿನಲ್ಲಿ ನಾಳೆಯ ಬಳಿ ಬಂದ ಮೂವರೂ ಹೇಮಾವತಿ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾರನ್ನು ರಾ.ಹೆದ್ದಾರಿ 206 ರಸ್ತೆಯಲ್ಲಿಯೆ ನಿಲ್ಲಿಸಿ ಡೆತ್ ನೋಟ್ ಇಟ್ಟು ನಾಲೆಗೆ ಹಾರಿದ್ದಾರೆ. ಆತ್ಮಹತ್ಯೆಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ. ರಮೇಶ್ ಅವರ ಪುತ್ರಿಗೆ ಒಂದು ತಿಂಗಳ ಹಿಂದೆಯಷ್ಟೆ ಮದುವೆಯಾಗಿತ್ತು. ಮದುವೆಯಾದ ಬಳಿಕ ಮಗಳು ತವರು ಸೇರಿದ್ದ ಹಿನ್ನಲೆಯಲ್ಲಿ ಮರ್ಯಾದೆಗೆ ಅಂಜಿ ಈ ದುರ್ಘಟನೆ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.

ಗುರುವಾರ ರಾತ್ರಿ 2 ಗಂಟೆ ವೇಳೆಗೆ ತಾಯಿ ಮತ್ತು ಮಗಳ ಮೃತದೇಹವನ್ನು ಸೋಮಲಾಪುರ ಸಮೀಪದ ನಾಲೆಯಲ್ಲಿ ಪತ್ತೆ ಹಚ್ಚಲಾಯಿತು. ಬೆಳಗ್ಗೆ ಎಇಇ ರಮೇಶ್ ಶವ ಸಿಕ್ಕಿದೆ. ಚೇಳೂರು ಠಾಣೆ ಪೆÇಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link