ಪಾವಗಡ
ತಾಲ್ಲೂಕಿನಲ್ಲಿ ರಾಜರೊಷವಾಗಿ ಇಸ್ವೀಟ್ ಮತ್ತು ಮಟ್ಕಾ, ಜೂಜಾಟ ನಡೆಯುತ್ತಿದರೂ ಪೋಲೀಸರು ಕಂಡೂಕಾಣದಂತೆ ಕುಳಿತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಎಲ್ಲೆಲ್ಲಿ ಮಟ್ಕಾ, ಜೂಜಾಟ ನಡೆಯುತ್ತವೆ ಎಂದು ಸಾರ್ವಜನಿಕರೇ ಮಾತನಾಡಿಕೊಳ್ಳುತ್ತಾರೆ, ಇನ್ನು ಪೊಲೀಸರಿಗೆ ತಿಳಿಯುವುದಿಲ್ಲವೆ ಎಂದು ವ್ಯಂಗ್ಯವಾಡುತ್ತಿದ್ದಾರೆ.
ಮಟ್ಕಾ, ಇಸ್ವೀಟ್, ಅಕ್ರಮ ಮದ್ಯ ಮಾರಾಟ ತಾಲ್ಲೂಕಿನಲ್ಲಿ ಎಗ್ಗಿಲ್ಲದೆ ನಡೆಯುತ್ತಿದ್ದು, ಕೂಲಿ ಕಾರ್ಮಿಕರು ಹಾಗೂ ಬಡಬಗ್ಗರು ದಿನವೆಲ್ಲ ದುಡಿದ ಹಣ ಸಂಜೆ ಜೂಜಾಟ ಕೇಂದ್ರಗಳಲ್ಲಿ ಸುರಿದು ಬರೇ ಕೈಯಲ್ಲಿ ಮನೆ ಸೇರುತ್ತಿದ್ದಾರೆ. ಹೆಂಡತಿ ಮಕ್ಕಳು ಉಪವಾಸ ಮಾಡುವ ಪರಿಸ್ಥಿತಿ ನಿರ್ಮಾಣವಾಗಿ ಕುಟುಂಬಗಳಲ್ಲಿ ನೆಮ್ಮದಿ ಹಾಳಾಗಿದೆ.
ತಾಲೂಕಿನಾದ್ಯಂತ ಆರಸಿಕೆರೆ, ವೈ.ಎನ್.ಹೊಸಕೋಟೆಯ ಹಾಗೂ ತಿರುಮಣಿ ಪೋಲೀಸ್ ಠಾಣೆ ವ್ಯಾಪ್ತಿಯ ಮಟ್ಕಾ ಮತ್ತು ಇಸ್ವೀಟ್ ದಂದೆಯ ಫೋಟೋ, ವಿಡಿಯೋ ವಾಟ್ಸಾಫ್ ಮತ್ತು ಯೂಟೂಬ್ ಮತ್ತಿತರ ಸೋಷೀಲ್ ಮೀಡಿಯದಲ್ಲಿ ಹರಿದಾಡುತ್ತಿದ್ದರೂ ಪೊಲೀಸರೂ ಕ್ರಮ ಕೈಗೊಳ್ಳುತ್ತಿಲ್ಲ. ಅದನ್ನು ಪ್ರಚಾರ ಮಾಡಿದವರ ಮೇಲೆ ಜೂಜುಕೋರರು ಹೆದರಿಸುತ್ತಿರುವ ಪ್ರಕರಣಗಳು ನಡೆದಿವೆ.
ಮಧ್ಯ ವರ್ಗದ ಜನರು, ಕೂಲಿಕಾರ್ಮಿಕರು, ಶ್ರಮಜೀವಿಗಳು ರಕ್ತ ಹೀರುತ್ತಿರುವ ಈಮತಹ ದಂಧೆಗಳಿಗೆ ಕಡಿವಾಣ ಹಾಕಲು ಏಕೆ ಪೊಲೀಸರು ಮುಂದಾಗುತ್ತಿಲ್ಲ ಎಂದು ಸಾರ್ವಜನಿಕರು ಅನುಮಾನ ವ್ಯಕ್ತಪಡುವಂತಾಗಿದೆ ಎಂದು ಸ್ತ್ರೀಶಕ್ತಿ ಸಂಘದ ಸದಸ್ಯರು ಆಕ್ರೋಶ ವ್ಯಕ್ತಪಡುತ್ತಿದ್ದಾರೆ.
ಮಟ್ಕಾ ಮತ್ತು ಇಸ್ವೀಟ್ ಜೂಜಾಟ ಕೇಂದ್ರ ಎಲ್ಲೆಲ್ಲಿ ನಡೆಯುತ್ತಿವೆ?
ವೈ.ಎನ್.ಹೊಸಕೋಟೆ ಪೋಲೀಸ್ ಠಾಣಿ ವ್ಯಾಪ್ತಿಯ ಪೋನ್ನಸಮುದ್ರ ಗ್ರಾಮಸ್ಥರು ಆರೋಪಿಸಿದಂತೆ ಸಂಜೆ 5 ಗಂಟೆಯಿಂದ ಮಟ್ಕಾ ಬೀಟರ್‍ಗಳು ಬರೆಯುತ್ತಿದ್ದು, ಇತ್ತೀಚಿಗೆ ದುಡ್ಡಿನ ಆಸೆಗೆ ಮಹಿಳೆಯರು ಸೇರಿದಂತೆ ಕೂಲಿ ಕಾರ್ಮಿಕರು ಇದರಲ್ಲಿ ಭಾಗಿಯಾಗುತ್ತಿದ್ದು, ಇದರ ಜೋತೆಗೆ ಇಸ್ವೀಟ್ ಕೇಂದ್ರಗಳನ್ನು ಕೋಟಗುಡ್ಡ, ಬೂದಿಬೆಟ್ಟ, ಸೂಲನಾಯಕನಹಳ್ಳಿ, ಯರ್ರಮ್ಮನಹಳ್ಳಿಯ, ನೀಲಮ್ಮನಹಳ್ಳಿ ಸಮುದಾಯ ಭವನದಲ್ಲಿ, ಮಾರಮ್ಮನಹಳ್ಳಿ ಬೆಟ್ಟಗುಡ್ಡಗಳಲ್ಲಿ ಹಾಗೂ ಆಂಧ್ರದ ಗಡಿ ಭಾಗದಲ್ಲಿ ರಾಜರೋಷವಾಗಿ ಇಸ್ವೀಟ್ ನಡೆಯುತ್ತಿರುವ ಜೊತೆಗೆ ಭರ್ಜರಿ ಕೋಳಿ ಪಂದ್ಯಗಳೂ ನಡೆಯುತ್ತಿರುವುದು ಪೋಲೀಸ್ ಇಲಾಖೆಗೆ ಗೊತ್ತಿರುವ ವಿಚಾರ.
ಅರಸಿಕೆರೆ ಪೋಲೀಸ್ ಠಾಣಿ ವ್ಯಾಪ್ತಿಯ ಮಂಗಳವಾಡ, ಮದ್ದೆಯಲ್ಲಿ ಮಟ್ಕಾ ಮತ್ತು ಇಸ್ವೀಟ್ ಜೋತೆಗೆ ಕೋಳಿ ಪಂದ್ಯ ಭಯ ಭಿ ೀತಿ ಇಲ್ಲದೆ ನಡೆಯುತ್ತಿದ್ದು, ಪೋಲೀಸ್ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿರುವುದು ಸಾರ್ವಜನಿಕರ ಸಿಟ್ಟಿಗೆ ಕಾರಣವಾಗಿದೆ.
ಪಾವಗಡ ಪೋಲೀಸ್ ಠಾಣಿಯ ವ್ಯಾಪ್ತಿಯ ಕಿಲಾರ್ಲಹಳ್ಳಿ, ಸಿ.ಕೆ.ಪುರದ ಹತ್ತಿರ ಉದ್ದಂಡಪ್ಪನ ಪಾಳ್ಯಾದ ಮನೆಯಲ್ಲಿ, ಕನ್ನಮೇಡಿ ಆಂಧ್ರದ ಗಡಿಭಾಗದಲ್ಲಿ ಮತ್ತು ವೆಂಕಟಾಪುರ ಮತ್ತು ಗುಮ್ಮಘಟದ ಹತ್ತಿರ, ಜಾಜೂರಾಯನಹಳ್ಳಿ, ಹುಲಿಬೆಟ್ಟದ ಹತ್ತಿರ, ರೊಪ್ಪದ ಹತ್ತಿರ, ನಕ್ಕಲಗಟ್ಟೆ ಪ್ರಾಂತ್ಯದಲ್ಲಿ ಹಾಗೂ ಪಟ್ಟಣದ ಶಾಂತಿನಗರ, ಬೋವಿ ಕಾಲೋನಿ, ಬೆಟ್ಟದ ಪಕ್ಕದಲ್ಲಿ ಇರುವ ಎ.ಕೆ ಕಾಲೋನಿಯ ಮನೆಗಳಲ್ಲಿ ಇಸ್ವೀಟ್‍ನ ಭರ್ಜರಿ ಆಟ ನಡೆಯುತ್ತಿರುವುದಾಗಿ ಮಾಹಿತಿ ತಿಳಿದು ಬಂದಿದ್ದು, ಕನಮಪಲ್ಲಿ, ದಡಘಟ್ಟ ಮತ್ತು ವೆಂಕಟಾಪುರ ಮಧ್ಯೆ, ಕೀಲ್ರ್ಲಾಹಳ್ಳಿ ಕೆರೆ ಹತ್ತಿರ, ಪಟ್ಟಣದ ಕೆ.ಎಸ್.ಅರ್.ಟಿ.ಸಿ ಬಸ್ ಡಿಪೋ ಹತ್ತಿರ ಇರುವ ತೋಟದಲ್ಲಿ, ರಾಜವಂತಿ ,ಕೃಷ್ಣಪುರ ಹಾಗೂ ವೆಂಕಟಾಪುರ ಮಧ್ಯದ ಕರೆಯಲ್ಲಿ, ಸಿಂಗರೆಡ್ಡಿಹಳ್ಳಿಯ ಬೆಟ್ಟದಲ್ಲಿ, ಕಡಪಲಕೆರೆ ಹತ್ತಿರ, ರಾಜರೋಷವಾಗಿ ನಡೆಯುತ್ತಿದ್ದು, ಇದಕ್ಕೆಲ್ಲಾ ಈ ಹಿಂದೆ ಇದ್ದ ಪೋಲೀಸರ ಸಹಕಾರವಿದೆ ಎಂಬ ಆರೋಪ ಕೇಳಿಬಂದಿದೆ.
ಇಸ್ವೀಟ್ ಆಟ ಬೆಳಿಗ್ಗೆ 8 ರಿಂದ 9 ಗಂಟೆ ಹಾಗೂ ಸಂಜೆ ಒಂದು ಗಂಟೆ ಮಾತ್ರ ಜೂಜಾಟ ಆಡಿಸುತ್ತಾರೆ ಎಂಬ ಮಹಿತಿ ತಿಳಿದು ಬಂದಿದ್ದು, ಮಟ್ಕಾ ಸಂಜೆ 6 ರಿಂದ ರಾತ್ರಿ 11 ಗಂಟೆ ತನಕ ಆಡುತ್ತಿದ್ದು, ಪಟ್ಟಣದ ನಾಗರಕಟ್ಟೆ, ಆರ್ದನಗರ, ಟೋಲ್‍ಗೆಟ್, ಕೆಲವು ಟೀ ಅಂಗಡಿಗಳಲ್ಲಿ, ಎಸ್.ಎಸ್.ಕೆ ವೃತ್ತದ ಹೋಟಲ್‍ನಲ್ಲಿ, ಹಳೇ ಬಸ್‍ನಿಲ್ದಾನದಲ್ಲಿ ಹಾಗೂ ರೊಪ್ಪದಲ್ಲಿ, ಅರಸಿಕೆರೆ, ಮಂಗಳವಾಡ, ಮದ್ದೆ, ವೈ.ಎನ್.ಹೊಸಕೋಟೆಗಳಲ್ಲಿ ಯಾರದೇ ಭಯವಿಲ್ಲದೆ ರಾಜರೋಷವಾಗಿ ನಡೆಯುತ್ತದೆ ಎಂಬ ಮಾಹಿತಿ ತಿಳಿದು ಬಂದಿದೆ.
ಕೆಲ ಪೊಲೀಸರ ಕೈವಾಡ ಇದ್ದು, ಇಲ್ಲಿಗೆ ಹೊಸದಾಗಿ ಬಂದ ಮೇಲಾಧಿಕಾರಿಗಳಿಗೆ ಮಾಹಿತಿ ಸಿಗದೆ ಮುಚ್ಚು ಹಾಕುತ್ತಿದ್ದು, ಮಟ್ಕಾ ಮತ್ತು ಜೂಜಾಟವನ್ನು ಮಟ್ಟ ಹಾಕಲು ಸಾಧ್ಯವಾಗುತ್ತಿಲ್ಲವೆ ಎಂಬ ಅನುಮಾನ ಸಾರ್ವಜನಿಕರಲ್ಲಿದೆ. ಪೊಲೀಸ್ ವರಿಷ್ಠಾಧಿಕಾರಿಗಳು ಈ ಬಗ್ಗೆ ಗಮನ ಹರಿಸಿ, ಈ ದಂದೆಗಳನ್ನು ಹತ್ತಿಕ್ಕುವ ಕೆಲಸ ಮಾಡುವವರೆ?
15 ವರ್ಷಗಳಿಂದ ಬರ
ರಾಜ್ಯದಲ್ಲಿ ಅತಿ ಹಿಂದುಳಿದ ತಾಲೂಕು ಎಂದೇ ಕುಖ್ಯಾತಿ ಪಡೆದ ಪಾವಗಡ, ಸತತವಾಗಿ 15 ವರ್ಷಗಳಿಂದ ಮಳೆ ಬೆಳೆ ಇಲ್ಲದೆ ಇಲ್ಲಿನ ರೈತರು ಕಂಗಾಲಾಗಿದ್ದು, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಅಭಿವೃದ್ಧಿ ಕಡೆ ಗಮನ ಹರಿಸದೇ ನಿರ್ಲಕ್ಷ್ಯವಹಿಸಿದ್ದು, ಬರದ ನಾಡಿಗೆ ಸಹಾಯ ಹಸ್ತ ನೀಡುವವರು ಯಾರು ಎನ್ನುವಂತಾಗಿದೆ. ಪಾವಗಡ ತಾಲೂಕಿನ ರೈತರು ಮಳೆ ಅಶ್ರಿತ ಬೆಳೆ ಶೇಂಗಾವನ್ನು ನಂಬಿ ಜೀವನ ನಡೆಸುತ್ತಾರೆ.
ಮಳೆ ಕೊರತೆಯಿಂದ ವರ್ಷ ವರ್ಷಕ್ಕೆ ಶೇಂಗಾ ಬೆಳೆ ರೈತರ ಕೈಹಿಡಿಯದೆ, ರೈತರು ಕೃಷಿ ಭೂಮಿಯನ್ನು ಮಾರಾಟ ಮಾಡಿ, ನಗರಗಳಿಗೆ ವಲಸೆ ಹೋಗುತ್ತಿದ್ದಾರೆ. ಈ ಭಾಗದ ಜನರ ಪರಿಸ್ಥಿತಿ ಗಮನ ಹರಿಸದ ಸರ್ಕಾರ ಮತ್ತು ಇಲ್ಲಿನ ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಗಡಿ ಪ್ರದೇಶಕ್ಕೆ ಆಕ್ರಮ ದಂದೆಯ ಯೋಜನೆಗಳ ಭಾಗ್ಯ ತಂದು. ಸಾಮಾನ್ಯ ಬಡವರ್ಗದ ಜನರು, ಕೂಲಿ ಕಾರ್ಮಿಕರು, ರೈತಾಪಿ ವರ್ಗದ ಜನರ ಬದುಕಿನಲ್ಲಿ ಆಡವಾಡುತ್ತಿದ್ದಾರೆ ಎಂದು ಜನ ಆಕ್ರೊಶಗೊಂಡಿದ್ದಾರೆ.
ಆಂಧ್ರದ ಗಡಿ ಭಾಗದಲ್ಲಿ ಇರುವ ಪಾವಗಡ ತಾಲೂಕಿನಿಂದ ಆವರಿಸಿದ್ದು, ಆಂಧ್ರ ಪ್ರದೇಶ ಎಂದರೆ ಸಾಕು ಭಯದ ವಾತಾವರಣ ನಿರ್ಮಾಣವಾಗಿತ್ತು. 1991 ರಿಂದ 2000 ನೇ ಸಾಲಿನವರಿಗೂ ನಕ್ಸಲ್ ಸಂಘಟನೆಗಳು ಇದ್ದು, ಭೂ ಮಾಲೀಕರ ವಿರುದ್ದ ಹೋರಾಡಲು ಪಾವಗಡ ತಾಲ್ಲೂಕು ನಕ್ಸಲ್ ಚಳುವಳಿಯ ಅಡುಗುತಾಣವಾಗಿತ್ತು.
2005 ರಲ್ಲಿ ವೆಂಕಟಮ್ಮನಹಳ್ಳಿಯ ಪೋಲೀಸ್ ಹತ್ಯಾಕಾಂಡ ಘಟನೆ ನಂತರ ಆಂಧ್ರದ ಅಂದಿನ ಮುಖ್ಯಮಂತ್ರಿ ವೈ.ಎಸ್. ರಾಜಶೇಖರರೆಡ್ಡಿ ಕ್ಯಗೊಂಡ ಕಠಿಣ ಕ್ರಮಗಳಿಂದ ನಕ್ಸಲ್ ಚಟವಟಿಕೆಗಳು ಆಂಧ್ರದವೂ ಸೇರಿದಂತೆ ಪಾವಗಡ ತಾಲ್ಲೂಕಿನಲ್ಲಿ ಕಾಣೆಯಾದವು.
ಸರ್ಕಾರ ಪಾವಗಡ ತಾಲೂಕು ನಕ್ಸಲ್ ಪೀಡಿತ ಪ್ರದೇಶವೆಂದು ಘೋಷಣೆ ಮಾಡಿದ ನಂತರ ನಕ್ಸಲ್ ಸಂಘಟನೆ ಬಿಟ್ಟು ಹಳ್ಳಿ ಸೇರಿ ಹೆಂಡತಿ ಮಕ್ಕಳ ಜೊತೆ ನೆಮ್ಮದಿ ಜೀವನ ನಡೆಸುತ್ತಿದ್ದು, ಅಂದಿನ ಸಮ್ಮಿಶ್ರ ಸರ್ಕಾರ ಮಾಜಿ ನಕ್ಸಲ್‍ರವರಿಗೆ ಅಭಿವೃದ್ಧಿಗಾಗಿ 9 ಕೋಟಿ ಅನುದಾನ ನೀಡಿದರೂ ಯಾವುದೇ ಅಭಿವೃದ್ಧಿ ಕಾಣಲಿಲ್ಲ.
ನಾಗಲಮಡಿಕೆ ಹೋಬಳಿ ಪ್ರಾಂತ್ಯದಲ್ಲಿ ಸೋಲಾರ್ ಪಾರ್ಕ್ ನಿರ್ಮಾಣ ಮಾಡಲು ರೈತರ ಭೂಮಿಯನ್ನು 30 ವರ್ಷಗಳಿಗೆ ಸರ್ಕಾರ ಲೀಜ್‍ಗೆ ಭೂಮಿಯನ್ನು ಪಡೆದು ಸೋಲಾರ್ ಪಾರ್ಕ್‍ಪ್ರಾರಂಭಿಸಿ, ಈ ಭಾಗದ ನಿರುದ್ಯೋಗಿ ಯುವಕರಿಗೆ ಉದ್ಯೋಗ ಕೊಡಿಸುವುದಾಗಿ ಭರವಸೆ ನೀಡಲಾಗಿತ್ತು, ಆದರೆ, ಉದ್ಯೋಗ ಕಲ್ಪಿಸುವಲ್ಲಿ ಸರ್ಕಾರ ವಿಫಲವಾಗಿದೆ.
ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಬವಣಿ ದಿನದಿಂದ ದಿನಕ್ಕೆ ಜಾಸ್ತಿ ಅಗುತ್ತಿದ್ದು, ಕೆಲ ಗ್ರಾಮಗಳಲ್ಲಿ ಅರ್ಧದಷ್ಟು ಕೊಳವೆಬಾವಿಗಳು ಒಣಗಿದ್ದು, ಅಂತಹ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರು ನೀಡಬೇಕೆಂದು ಜಿಲ್ಲಾಧಿಕಾರಿಗಳು ಇತ್ತೀಚಿಗೆ ಆದೇಶ ನೀಡಿದ್ದರು. ಒಟ್ಟಾರೆ ಕೂಲಿ ಕಾರ್ಮಿಕರ ಹಾಗೂ ರೈತರಿಗೆ ಉದ್ಯೋಗ ಮತ್ತು ಕುಡಿಯುವ ನೀರು ವ್ಯವಸ್ಥೆ, ಸಾಕು ಪ್ರಾಣಿಗಳಿಗೆ ಮೇವು ಕುಡಿಯುವ ನೀರಿನ ಬಗ್ಗೆ ಜನಪ್ರತಿನಿಧಿಗಳು ಹಾಗೂ ಜಿಲ್ಲಾ ಮತ್ತು ತಾಲ್ಲೂಕು ಅಧಿಕಾರಿಗಳು ಶ್ರಮಿಸಬೇಕಾಗಿದೆ.
ಕಿಸಾನ್ ರೈತ ಸಂಘದ ರಾಜ್ಯಾಧ್ಯ ನಾಗಭೂಷಣರೆಡ್ಡಿ ಕಳೆದ 15 ವರ್ಷಗಳಿಂದ ನೀರುಗಾಗಿ ತಾಲ್ಲೂಕಿನ 30 ಕ್ಕೂ ಹೆಚ್ಚು ಸಂಘ ಸಂಸ್ಥೆಗಳು ಹೈಕೋರ್ಟ್ ಮೇಟ್ಟಲೇರಿದ ನಂತರ ಸರ್ಕಾರ ಡಿ ಪ್ಲೋರೈಡ್ ಘಟಕಗಳು ನಿರ್ಮಾಣ ಗೊಂಡರು ಗುಣ ಮಟ್ಟ ನೀರು ಒದಗಿಸುವ ಪ್ರಯತ್ನವಾಗಿಲ್ಲ. ಕೋಟಿಗಟ್ಟಲೆ ರೂ.ಗಳನ್ನು ಸರ್ಕಾರ ಖರ್ಚು ಮಾಡಿದರೂ ಪ್ರಯೋಜನವಾಗದೆ ನೀರಿನ ಘಟಕಗಳ ನಿರ್ವಹಣೆಯ ಗುತ್ತಿಗೆದಾರರ ಪಾಲಾಗಿದ್ದು, ಹಲವು ಘಟಕಗಳು ಕೆಟ್ಟು ನಿಂತ್ತಿವೆ.
ಪಾವಗಡ ತಾಲ್ಲೂಕಿಗೆ ಶುದ್ದ ಕುಡಿಯುವ ನೀರು ಕೋಡಲು ಕೋರ್ಟ್ ಅದೇಶ ನೀಡಿದನಂತರ ತುತ್ರ್ತಾಗಿ ಪ್ಲೋರೈಡ್ ಘಟಕಗಳನ್ನು ಸ್ಥಾಪಿಸಿ ಶಾಶ್ವತ ನೀರಾವರಿ ಯೋಜನೆ ಜಾರಿಗೆ ತರುತ್ತೇವೆ ಎಂದು ರಾಜ್ಯ ಸರ್ಕಾರ ಕೋರ್ಟ್‍ಗೆ ಮಾಹಿತಿ ನೀಡಿತ್ತು.ಮತ್ತೆ ತಾಲ್ಲೂಕಿನಲ್ಲಿ ವಿವಿಧ ಸಂಘ ಸಂಸ್ಥೆಗಳು ಹೋರಾಟದ ನಂತರ ರಾಜ್ಯ ಸರ್ಕಾರ 2350 ಕೋಟಿ ರೂಗಳಿಗೆ ತುಂಗಾಭಧ್ರಾ ಹಿನೀರುಗೆ ಅನುಮೊದನೆ ನೀಡಿ ಕಾಮಗಾರಿ ಪ್ರಾರಂಭಿಸಿದ್ದಾರೆ
ಉದ್ಯೋಗ ವ್ಯವಸ್ಥೆ ಕಲ್ಪಿಸಲು ಕೂಲಿ ಕಾರ್ಮಿಕರ ಒತ್ತಾಯ,
ತಾಲ್ಲೂಕಿಗೆ ಬರದ ಹಿನ್ನೇಲೆಯಲ್ಲಿ ಬರದ ಅನುದಾನಡಿಯಲ್ಲಿ ರೈತರಿಗೆ ಮತ್ತು ಕೂಲಿ ಕಾರ್ಮಿಕರಿಗೆ ಅನುಕೂಲವಾಗುವ ಯೋಜನೆಗಳನ್ನು ಜಾರಿಗೆ ತಂದರೆ ಮಾನವೀಯತೆ ಮೇರದಂದತೆ ಅಗುತ್ತದೆ. ರೈತರ ಜಮೀನುಗಳಲ್ಲಿ ಕೊಳವೆ ಬಾವಿಗಳು ಒಣಗಿದ್ದರೆ ಅಂತಹ ರೈತರಿಗೆ ಸರ್ಕಾರ ವೆಚ್ಚದಲ್ಲಿ ಕೊಳವೆ ಬಾವಿ ಕೊರಸಿ ಅವರ ಜೀವನ ಮಟ್ಟ ಸುಧಾರಿಬೇಕು. ಕೂಲಿ ಕಾರ್ಮಿಕರು ಬೇರೆ ಕಡೆ ವಲಸೆ ಹೋಗದಂತೆ ಸ್ಥಳೀಯವಾಗಿ ಉದ್ಯೋಗ ಸೃಸ್ಟಿಸುವ ಕೆಲಸ ಆಗಬೇಕು.
ಸಣ್ಣ ನೀರಾವರಿ ಇಲಾಖೆಯಿಂದ ಕೆರೆ, ಕುಂಟೆಗಳಲ್ಲಿ ಹೂಳು ತೆಗೆಯುವಂತಹ ಯೋಜನೆ ಅನುಷ್ಠಾನಕ್ಕೆ ತರಬೇಕು. ಇದರ ಪರಿರ್ಯಾಯವಾಗಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೂಲಿ ನೀಡುತ್ತೇವೆ ಎಂದರೆ ಸಾಲದು ಈ ಯೋಜನೆಯಲ್ಲಿ ವಾರಕ್ಕೊಮ್ಮ ಕೂಲಿ ಸಿಗುವುದಿಲ್ಲ, ಕಾರಣ ಉದ್ಯೋಗ ಖಾತ್ರಿ ಯೋಜನೆ ಕೆಲಸ ಮಾಡಲು ಕೂಲಿ ಕಾರ್ಮಿಕರು ಹಿಂಜರಿಯುತ್ತಿದ್ದಾರೆ. ವಾರಕ್ಕೊಮ್ಮ ಕೂಲಿ ನೀಡುವ ಯೋಜನೆ ತ್ವರಿತವಾಗಿ ಜಾರಿಗೆ ತಂದರೆ ತಾಲ್ಲೂಕಿನಲ್ಲಿ ಬರವನ್ನು ನಿಭಾಯಿಸಬಹುದೆಂದು ಕೂಲಿ ಕಾರ್ಮಿಕರ ಅಭಿಪ್ರಾಯಪಡುತ್ತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
