ಗ್ರಾಮೀಣ ಸ್ಥಿತ್ಯಂತರವನ್ನು ದಾಖಲಿಸುವ ಕೃತಿಗಳೂ

ತುಮಕೂರು:

ಗ್ರಾಮೀಣ ಪ್ರದೇಶಗಳು ಪಟ್ಟಣೀಕರಣವಾಗಿ ಪಲ್ಲಟಗೊಳ್ಳುತ್ತಿರುವ ಇಂದಿನ ದಿನಮಾನಗಳಲ್ಲಿ ಗ್ರಾಮೀಣ ಸ್ಥಿತ್ಯಂತರವನ್ನು ತಮ್ಮ ಕೃತಿಗಳ ಮೂಲಕ ದಾಖಲಿಸುವ ಕೆಲಸವನ್ನು ಡಾ.ಓ.ನಾಗರಾಜು ಅವರ ಮೂರು ಕೃತಿಗಳಲ್ಲಿಯೂ ಮಾಡಿದ್ದಾರೆ ಎಂದು ನಾಡೋಜ ಡಾ.ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟಿದ್ದಾರೆ.

ನಗರದ ಕನ್ನಡ ಭವನದಲ್ಲಿ ಧವನ ಭೂಮಿಕೆ ಸಾಂಸ್ಕøತಿಕ ಟ್ರಸ್ಟ್,ತುಮಕೂರು,ಕರ್ನಾಟಕ ರಾಜ್ಯ ಎಸ್.ಸಿ.,ಎಸ್ಟಿ ಸರಕಾರಿ ನೌಕರರ ಸಮನ್ವಯ ಸಮಿತಿ,ಅರುಣೋದಯ ಶೈಕ್ಷಣಿಕ ಮತ್ತು ಗ್ರಾಮೀಣಾಭಿವೃದ್ದಿ ಟ್ರಸ್ಟ್ ಮತ್ತು ಶ್ರೀವಾಲ್ಮೀಕಿ ಸನಿವಾಸ ಪ್ರೌಢಶಾಲೆ ಹಳೆಯ ವಿದ್ಯಾರ್ಥಿ ಬಳಗದವತಿಯಿಂದ ಆಯೋಜಿಸಿದ್ದ ಸಹಾಯಕ ಪ್ರಾಧ್ಯಾಪಕ ಡಾ.ಓ.ನಾಗರಾಜು ಅವರ ಪಲ್ಲಟ ಕಾದಂಬರಿ,ಪ್ರತಿಕ್ರಾಂತಿ ನಾಟಕ ಮತ್ತು ಸೋಂಕು ಕಥಾ ಸಂಕಲನವನ್ನು ಬಿಡುಗಡೆ ಮಾಡಿ ಮಾತನಾಡುತ್ತಿದ್ದ ಅವರು,ಬದಲಾಗುತ್ತಿರುವ ಗ್ರಾಮೀಣ ಬದುಕನ್ನು ಹಿಡಿದಿಡುವುದು ನಿಜಕ್ಕೂ ಸವಾಲಿನ ಕೆಲಸ ಎಂದರು.

ಕಳೆದೆರಡು ವರ್ಷಗಳಿಂದಲೂ ಆರೋಗ್ಯ ಮತ್ತು ಸಾಮಾಜಿಕ ಕ್ಷೇತ್ರಕ್ಕೂ ಸೋಂಕು ತಗುಲಿದೆ.ಮಾನವೀಯ ಮೌಲ್ಯಗಳ ಅಧಃಪತನಕ್ಕೆ ಸಾಕ್ಷಿಯಾದ ಅನೇಕ ಘಟನೆಗಳು ನಮ್ಮ ಮುಂದಿರುವಾಗ,ಅವುಗಳನ್ನು ಮೀರಿದ ಸ್ಪಂದನೆಯನ್ನು ಸಾಮಾಜಿಕ, ಅರ್ಥಿಕ ನೆಲಗಟ್ಟಿನಲ್ಲಿ ಡಾ.ಓ.ನಾಗರಾಜು ತಮ್ಮ ಕೃತಿಗಳಲ್ಲಿ ಚಿತ್ರಿಸಿದ್ದಾರೆ.

ಗ್ರಾಮೀಣ ಹಿನ್ನೆಲೆಯಲ್ಲಿ ರಚಿತವಾಗಿರುವ ಕೃತಿಗಳ ದೊಡ್ಡ ಪರಂಪರೆಯೇ ಇದೆ.ಗ್ರಾಮೀಣ ಬದುಕಿನ ಸಮೃದ್ದಿ,ಗ್ರಾಮೀಣ ಮೌಲ್ಯಗಳ ವೈಭವೀಕರಣ,ಅವುಗಳು ನಾಶವಾಗು ತ್ತಿರುವ ಬಗ್ಗೆ ಇರುವ ಕಳಕಳಿ ಇವುಗಳಲ್ಲಿ ಕೃತಿಕಾರರು ಹಳೆಯದರಿಂದ ಹೊಸತನಕ್ಕೆ ಬದಲಾಗುವ ಸ್ಥಿತ್ಯಂತರವನ್ನು ಹಿಡಿದಿಡುವ ಪ್ರಯತ್ನವನ್ನು ಮಾಡಿದ್ದಾರೆ.ಪುಸ್ತಕ ಬಿಡುಗಡೆ ಕಾರ್ಯಕ್ರಮವೇ ಒಂದು ವಿಚಾರ ಸಂಕಿರಣದ ರೀತಿ ನಡೆದಿದ್ದು ನಿಜಕ್ಕೂ ಸಂತೋಷ ತಂದಿದೆ ಎಂದು ಬರಗೂರು ರಾಮಚಂದ್ರಪ್ಪ ನುಡಿದರು.

ಡಾ.ಓ.ನಾಗರಾಜು ಅವರ ಪಲ್ಲಟ ಕಾದಂಬರಿಯ ಕುರಿತು ಮಾತನಾಡಿದ ವಿಮರ್ಶಕ ಡಾ.ರವಿಕುಮಾರ್    ಜಾಗತೀಕರಣ,ಅಧುನಿಕತೆಯ ಭರಾಟೆಯಲ್ಲಿ ಗ್ರಾಮೀಣ ಜನರಲ್ಲಿ ಮೌಲ್ಯಗಳು ಪಲ್ಲಟವಾಗುತ್ತಿರುವುದನ್ನು ಈ ಕಾದಂಬರಿ ಯ ಹಲವು ಪಾತ್ರಗಳ ಮೂಲಕ ಚಿತ್ರಿಸಿದ್ದಾರೆ.ರಕ್ತ ಸಂಬಂಧಿಗಳಿಂದಲೇ ಅತ್ಯಾಚಾರಕ್ಕೆ ಒಳಗಾಗುವ ಹೆಣ್ಣು ಮಕ್ಕಳು ರಕ್ಷಣೆಗಾಗಿ ಯಾರನ್ನು ಆಶ್ರಯಿಸಬೇಕು.ರೋಗಗ್ರಸ್ಥ ಸಮಾಜಕ್ಕೆ ಚಿಕಿತ್ಸೆಯನ್ನು 70-80ರ ದಶಕದ ಸನ್ನಿವೇಶಗಳ ಮೂಲಕ ಕೊರಟಗೆರೆ ಮತ್ತು ಮಧುಗಿರಿ ಭಾಗದ ನೈಜ ಭಾಷೆಯಲ್ಲಿ ಕಟ್ಟಿಕೊಟ್ಟಿದ್ದಾರೆ.ಶುದ್ದ ಕನ್ನಡ ಬಗ್ಗೆ ದ್ವನಿ ಎತ್ತಿದವರಿಗೆ ಉತ್ತರ ನೀಡಿದ್ದಾರೆ ಎಂದರು.

ಪ್ರತಿಕ್ರಾಂತಿ ನಾಟಕ ಕುರಿತು ಮಾತನಾಡಿದ ಸಹಾಯಕ ಕನ್ನಡ ಪ್ರಾಧ್ಯಾಪಕ ಡಾ.ನಾಗಭೂಷಣ್ ಬಗ್ಗನಡು,ಜಾತಿ, ಧರ್ಮ,ಶ್ರೀಮಂತಿಕೆಯ ದರ್ಪದ ನಡುವೆಯೂ ಪ್ರೀತಿ ಹೇಗೆ ಅವುಗಳನ್ನು ಮಣಿಸುತ್ತದೆ ಎಂಬುದನ್ನು ನೈಜ ಘಟನೆ ಯೊಂದನ್ನು ಆರ್ಧರಿಸಿ,ಲೇಖಕರು ಈ ನಾಟಕವನ್ನು ರಚಿಸಿದ್ದು,ಬಾಬಾ ಸಾಹೇಬರು ನೀಡಿದ ಎಚ್ಚರಿಕೆಯ ನಂತರ ಎಚ್ಚೆತ್ತ ಪರಂಪರೆಯನ್ನು ಸ್ಥಳೀಯ ಭಾಷೆಯಲ್ಲಿ ನಾಟಕವಾಗಿಸುವ ಪ್ರಯತ್ನ ನಡೆಸಿದ್ದಾರೆ ಎಂದರು.

ಸೋಂಕು ಕಥಾ ಸಂಕಲನ ಕುರಿತು ಮಾತನಾಡಿದ ಸಹಾಯಕ ಪ್ರಾಧ್ಯಾಪಕಿ ಡಾ.ಗೀತ ವಸಂತ,ಕೋರೋನದಿಂದಾಗಿ ವಿಶ್ವದ ಮನಸ್ಥಿತಿಯೇ ಬದಲಾಗಿರುವ ಸನ್ನಿವೇಶದಲ್ಲಿ,ಪ್ಲಗು ಇನ್ನಿತರ ಸಾಂಕ್ರಾಮಿಕ ರೋಗಗಳಿಂದ ಗ್ರಾಮೀಣ ಜನರ ಮೇಲಾಗಿರುವ ಪರಿಣಾಮಗಳನ್ನು ನೈಜ ನೆಲೆಯಲ್ಲಿ ಕಟ್ಟಿಕೊಟ್ಟಿದ್ದಾರೆ.ಇದು ಭೂತ, ವರ್ತಮಾನ ಮತ್ತು ಭವಿಷ್ಯ ಮೂರನ್ನು ಒಳಗೊಳ್ಳುವ ಅಪ್ಪಟ್ಟ ದೇಶಿಯ ಕೃತಿಯಾಗಿದೆ.ಮನುಷ್ಯ ಸ್ಪರ್ಷವೇ ಇಲ್ಲದ ವರ್ಚುಯಲ್ ಜಗತ್ತಿನ ಹಲವು ಆಯಾಮಗಳು ಚಿತ್ರಿತವಾಗಿವೆ.ಭಾಷಾಭಿವೃದ್ದಿಗೆ ಪೂರಕವಾದ ಬರಹಗಳಿವೆ ಎಂದರು.

ಕೃತಿಕಾರರಾದ ಡಾ.ಓ.ನಾಗರಾಜು ಮಾತನಾಡಿ, ನನ್ನ ಪ್ರೀತಿಯ ಮೇಸ್ಟ್ರು ಮೂರು ಕೃತಿಗಳನ್ನು ಬಿಡುಗಡೆಗೊಳಿಸಿ,ಧೈರ್ಯ ತುಂಬಿದ್ದಾರೆ. ಇದು ನನ್ನಗೆ ಮತ್ತಷ್ಟು ಸಾಹಿತ್ಯ ಕೃಷಿಯಲ್ಲಿ ತೊಡಗುವಂತೆ ಮಾಡಿದೆ. ತನ್ನೊಂದಿಗೆ ಯುವಪೀಳಿಗೆಯನ್ನು ತನ್ನದೊಂದಿಗೆ ಕರೆದುಕೊಂಡು ಹೋಗುವ,ಜನರ ನಡುವೆಯೇ ಇರುವ ಜನಪದ ನಾಯಕ ಬರಗೂರು ರಾಮಚಂದ್ರಪ್ಪ ಎಂದರು.

ವೇದಿಕೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ದಿ ನಿಗಮದ ವ್ಯವಸ್ಥಾಪಕ ಡಾ.ವೈ.ಕೆ.ಬಾಲಕೃಷ್ಣಪ್ಪ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕ ಬಸವರಾಜಪ್ಪ ಆಪ್ಪಿನಕಟ್ಟೆ, ರಂಗಸಂಘಟಕ ಸಿದ್ದರಾಜು ಮಾತನಾಡಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಡಾ.ಶಿವನಂಜಪ್ಪ,ಲಕ್ಷ್ಮಿರಂಗಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap