ಮುಚ್ಚಿಹೋಗಿದ್ದ ತಲಪರಿಗೆ ಕಾಲುವೆಗೆ ಜೀವ

ಮಧುಗಿರಿ:

ಗಂಜಲಗುಂಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ 400 ಎಕರೆ ಪ್ರದೇಶಕ್ಕೆ ನಿರಂತರ ನೀರುಣಿಸುವ ತಲಪುರಿಗೆಯ ಕಾಲುವೆ ಮುಚ್ಚಿ ಹೋಗಿದ್ದು, ಅದನ್ನು ಮತ್ತೆ ತೆಗೆಸುವುದರ ಮೂಲಕ ರೈತ ಬಾಂಧÀವರಿಗೆ ಅನುಕೂಲವಾಗುವ ಮಹತ್ಕಾರ್ಯಕ್ಕೆ ಕೆ.ಎನ್.ಆರ್. ಅಭಿಮಾನಿ ಬಳಗ, ಆರ್.ಆರ್. ಅಭಿಮಾನಿ ಬಳಗ ಹಾಗೂ ಕಾಂಗ್ರೆಸ್ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ಕೆ ವಿಧಾನ ಪರಿಷತ್ ಸದಸ್ಯ ಆರ್. ರಾಜೇಂದ್ರ ಬುಧವಾರ ಚಾಲನೆ ನೀಡಿದರು.

ನಂತರ ಗ್ರಾಮದ ಶ್ರೀ ವೀರಭದ್ರಸ್ವಾಮಿ ದೇವಾಲಯದ ಮುಂಭಾಗ ಏರ್ಪಡಿಸಿದ್ದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತಾನಾಡಿದ ಅವರು, ತಲಪುರಿಗೆ ನೀರು ಹಾದು ಹೋಗುವ ಕಾಲುವೆ ಈ ಹಿಂದೆ ಮುಚ್ಚಿ ಹೋಗಿತ್ತು. ಅಂದಿನ ಶಾಸಕರಾಗಿದ್ದ ರಾಜಣ್ಣನವರು ತಮ್ಮ ಸ್ವಂತ ಖರ್ಚಿನಲ್ಲಿ ರೈತರ ಹಿತದೃಷ್ಟಿಯಿಂದ ಕಾಲುವೆಯನ್ನು ಸರಿಪಡಿಸಿದ್ದರು. ಬಿಜವಾರ ಕೆರೆ ತುಂಬಿರುವುದರಿಂದ ತಲಪುರಿಗೆಗೆ ಮತ್ತೆ ಜೀವ ಕಳೆ ಬಂದಿದೆ. ಈಗ ಒಂದು ವರ್ಷ ಕಾಲ ತಲುಪುರಿಗೆ ನೀರು ಹರಿಯಲಿದೆ.

ಜಲಮೂಲಗಳ ಅಭಿವೃದ್ಧಿಗೆ ಶಾಸಕ ಕೆ. ಎನ್ ರಾಜಣ್ಣನವರು ತೆಗೆದುಕೊಂಡಿದ್ದ ಮುತುವರ್ಜಿ ಫಲ ನೀಡಿದೆ. ನೀರಿಗೆ ಮೋಟಾರ್ ಪಂಪ್ ಸೆಟ್ ಉಪಯೋಗಿಸದೆ ನೀರು ತನ್ನಿಂದ ತಾನೆ ಉಕ್ಕಿ ಹರಿಯುತ್ತದೆ. ಮುಚ್ಚಿ ಹೋಗಿರುವ ಕಾಲುವೆಯ ಅಭಿವೃದ್ಧಿಯಿಂದ ಈ ಭಾಗದ ಕೃಷಿ ಚಟುವಟಿಕಗೆ ಬಹಳಷ್ಟು ಅನುಕೂಲ ಆಗಲಿದೆ. ಮುಂದಿನ ದಿನಗಳಲ್ಲಿ ಅಮರಾವತಿ ಬಳಿಯ ಕಾಲುವೆಯನ್ನು ಸಹ ಅಭಿವೃದ್ದಿ ಪಡಿಸಲಾಗುವುದೆಂದರು.

ಕೆಎನ್‍ಆರ್ ರನ್ನು  ಗೆಲ್ಲಿಸಿ ಆರ್.ರಾಜೇಂದ್ರ ಮನವಿ:

ಕೆ.ಎನ್.ರಾಜಣ್ಣನವರು ಶಾಸಕರಾಗಿದ್ದ ಕಾಲದಲ್ಲಿ ಮಧುಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಆದ ಅಭಿವೃದ್ಧಿ ಕಾರ್ಯಗಳು ನಿಮ್ಮ ಕಣ್ಮುಂದೆ ಇವೆ. 2023 ರ ಚುನಾವಣೆಯಲ್ಲಿ ಅವರನ್ನು ಮತ್ತೆ ಶಾಸಕರನ್ನಾಗಿಸಿ ಎಂದು ಮನವಿ ಮಾಡಿ, ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ರಚನೆಯಾಗುವುದು ನಿಶ್ಚಿತ, ರಾಜಣ್ಣನವರು ಮಂತ್ರಿಯಾಗುತ್ತಾರೆ.

ಕೋವಿಡ್ ಕಷ್ಟ ಕಾಲದಲ್ಲಿ ವಿಎಸ್ಸೆಸ್ಸೆನ್ ಮೂಲಕ 10 ಕೋಟಿ ರೂ. ಗಳವರೆಗೂ ರೈತರಿಗೆ ಸಾಲವನ್ನು ನೀಡಿದರು. ಜಯಮಂಗಲಿ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ ಮಾಡಿದೆ. ಮೂವತ್ತು ವರ್ಷಗಳ ನಂತರ ದೊಡ್ಡಮಾಲೂರು ಕೆರೆ ಸಹ ತುಂಬಿರುವುದು ಆಶಾದಾಯಕ ಎಂದರು.

ನಿಮ್ಮ ಪ್ರೀತಿ-ವಿಶ್ವಾಸ ಇದೇ ರೀತಿ ನನ್ನ ಮೇಲಿರಲಿ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಹೆಚ್ಚು ಅಭಿವೃದ್ಧಿ ಕೆಲಸಗಳನ್ನು ಮಾಡುವುದರ ಜತೆಗೆ ಮುಂದಿನ ವಿಧಾನಸಭಾ ಚುನಾವಣೆಗೆ ಅಣಿಯಾಗಬೇಕಾಗಿದೆ. ನನ್ನನ್ನು ಆಯ್ಕೆ ಮಾಡುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಮತ್ತೆ ಶಕ್ತಿಯನ್ನು ತುಂಬಿದ್ದೀರಿ. ಪಕ್ಷಾತೀತವಾಗಿ ಎಲ್ಲರೂ ನನಗೆ ಸಹಕಾರ ನೀಡಿದ್ದು, ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಮತ್ತು ಕೆ.ಎನ್.ರಾಜಣ್ಣನವರ ಕೈ ಬಲಪಡಿಸುವ ನಿಟ್ಟಿನಲ್ಲಿ ಕೆಲಸ ಕಾರ್ಯಗಳನ್ನು ಮಾಡುತ್ತೇನೆಂದರು

ಈ ವೇಳೆ ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ .ನಾಗೇಶ್ ಬಾಬು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಎಂ.ಎಸ್. ಮಲ್ಲಿಕಾರ್ಜುನಯ್ಯ, ಎಸ್. ಆರ್. ರಾಜಗೋಪಾಲ್, ಗಂಜಲಗುಂಟೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಾವಿತ್ರಮ್ಮ ಡಿ.ಹೆಚ್. ನಾಗರಾಜು, ಎಪಿಎಂಸಿ ಮಾಜಿ ಅಧ್ಯಕ್ಷ ಮರಿಯಣ್ಣ, ವಿಎಸ್ಸೆಸ್ಸೆನ್ ಅಧ್ಯಕ್ಷ ಪಾಜೀಲ್, ಗ್ರಾಪಂ ಉಪಾಧ್ಯಕ್ಷೆ ಚೇತನಾ, ಸದಸ್ಯರುಗಳಾದ ಮಾಲಾ, ನಗಭೂಷಣ, ರಾಮಚಂದ್ರಪ್ಪ, ಲಕ್ಷ್ಮಿನಾರಾಯಣ, ರಂಗರಾಜು, ಅಮರಾವತಿ ದಾಸೇಗೌಡ, ವೀರೇಶ್, ಭಕ್ತರಹಳ್ಳಿ ವೀರನಾಗಪ್ಪ, ಜಿ.ಎನ್.ರವಿ, ತಿಮ್ಮಣ್ಣ, ಕೆ. ರಮೇಶ್, ಪಟೇಲ್ ರಾಮಣ್ಣ, ಬ್ಯಾಂಕ್ ರಾಮಚಂದ್ರಪ್ಪ, ಎಚ್.ಎಸ್. ನಾಗಭೂಷಣ, ರಂಗರಾಜು, ನಾಗರಾಜು ಇತರರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link