ಕುಣಿಗಲ್:
ಬ್ಲಾಕ್ ಫಂಗಸ್ ಪ್ರಕರಣ ದಾಖಲು : ತುಂಬಿ ಹರಿದ ಮಾರ್ಕೋನಹಳ್ಳಿ ಜಲಾಶಯ
2021 ನೇ ವರ್ಷಕ್ಕೆ ವಿದಾಯ ಕುಣಿಗಲ್ :
ಜನವರಿ :
ತಾಲ್ಲೂಕು ಒಕ್ಕಲಿಗ ಮಹಾಸಭಾದಿಂದ ಅದ್ಧೂರಿ ಸಮಾವೇಶ, ಚುಂಚನಗಿರಿ ಶ್ರೀಗಳ ದಿವ್ಯ ಸಾನಿಧ್ಯ, ಒಕ್ಕಲಿಗರು ಸದಾ ಒಗ್ಗಟ್ಟಿನ ಮಂತ್ರ ಜಪಿಸಬೇಕು ಎಂಬ ಕರೆ.
ಶ್ರೀಸಿದ್ಧಲಿಂಗೇಶ್ವರ ಯೋಗವನ ಬೆಟ್ಟದ ನಿರ್ಮಾತೃ ಜ್ಞಾನಯೋಗಿ ಶ್ರೀ ಕಪದ್ರಿ ಸಿದ್ಧಲಿಂಗೇಶ್ವರ ಸ್ವಾಮಿಜಿ ಹೃದಯಾಘಾತದಿಂದ ನಿಧನ.
ವೈಕೆಆರ್ ಸ್ಮರಣಾರ್ಥ ಸ್ನೇಹ ಕಲಾ ಪ್ರತಿಷ್ಠಾನದಿಂದ ಕವಿಗೋಷ್ಠಿ
ಫೆಬ್ರವರಿ :
ತಾಲ್ಲೂಕಿನ ಹಂಗರಹಳ್ಳಿ ಚೌಡೇಶ್ವರಿ ದೇವಾಲಯಕ್ಕೆ ಮೈಸೂರು ಮಹಾರಾಜರ ಭೇಟಿ, ವಿಶೇಷ ಪೂಜೆ
ಪಟ್ಟಣದ ದೊಡ್ಡ ಪೇಟೆಯಲ್ಲಿರುವ ಶ್ರೀ ಎಲ್ಲಮ್ಮ ದೇವರ ಜಾತ್ರಾ ಮಹೋತ್ಸವಕ್ಕೆ ಚಾಲನೆ
ಮಾರ್ಚ್ :
ತಾಲ್ಲೂಕು ಟೈಲರ್ ಸಂಘದಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ, ಮೂರು ಪಕ್ಷಗಳ ಮುಖಂಡರು ಭಾಗಿ.
ಮುಂದಿನ ಚುನಾವಣೆಯಲ್ಲೂ ಬಿ ಫಾರಂ ನನ್ನದೆ, ವಿರೋಧ ಪಕ್ಷಕ್ಕೆ ಟಾಂಗ್ ನೀಡಿದ ಡಿ.ಕೃಷ್ಣಕುಮಾರ್
ಏಪ್ರಿಲ್ :
ಕುಣಿಗಲ್ ಪುರಸಭೆಯಲ್ಲಿ ಮಾಸ್ಕ್, ಅಂತರ ಇಲ್ಲದೆ ಭರ್ಜರಿ ಬಜೆಟ್ ಮಂಡಿಸಿದ ಪುರಸಭೆ ಅಧ್ಯಕ್ಷ ನಾಗೇಂದ್ರ
ಪೋಲಿಸರಿಂದ ಮಾಸ್ಕ್ ಹಾಕದವರಿಗೆ ದಂಡ, ಕೊರೋನಾ ತೀವ್ರತೆಯ ಬಗ್ಗೆ ಜಾಗೃತಿ.
ಮೇ:
ತಾಲ್ಲೂಕಿನ ಇಪ್ಪಾಡಿ ಗ್ರಾಪಂ ವ್ಯಾಪ್ತಿಯಲ್ಲಿ ಬ್ಲಾಕ್ ಫಂಗಸ್ ಪ್ರಕರಣ ದಾಖಲು, ಜನತೆ ಆತಂಕ.
ಕೊರೋನಾ ಎರಡನೆ ಅಲೆ ಸಂದರ್ಭದಲ್ಲಿ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆ, ಶಾಸಕ ಡಾ.ರಂಗನಾಥ್ ಪ್ರತಿಭಟನೆ. ನಂತರ ಪ್ರತಿಭಟನೆ ಮೊಟಕುಗೊಳಿಸಿ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದ ಕೆಡಿಪಿ ಸಭೆಗೆ ಸಂಸದ ಡಿ.ಕೆ.ಸುರೇಶ್ ಜೊತೆ ಹಾಜರು.
ಜೂನ್ :
ವಾಯ್ಸ್ ಫಾರ್ ಬಾಯ್ಸ್ ಕಾರ್ಯಕ್ರಮಕ್ಕೆ ಚಾಲನೆ, ರಾಷ್ಟ್ರೀಯ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯರು ಭಾಗಿ, ದಯಾಭವನ ಸಂಸ್ಥೆಯ ಅನಾಥಾಶ್ರಮದಲ್ಲಿ ಪ್ರಧಾನಮಂತ್ರಿ ಮೋದಿ ಪರಿಕಲ್ಪನೆಗೆ ಚಾಲನೆ
ಪೆÇಲೀಸ್ ಇಲಾಖೆ ರಾಷ್ಟ್ರೀಯ ಪಕ್ಷಗಳ ಕೈಗೊಂಬೆ, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಜಗದೀಶ್ ನಾಗರಾಜಯ್ಯ ಆರೋಪ
ಜುಲೈ :
ಶಾಸಕ ಡಾ.ರಂಗನಾಥ್‍ರಿಂದ ಗ್ರಾಮ ವಾಸ್ತವ್ಯ, ದಲಿತರ ಮನೆಯಲ್ಲಿ ಊಟ ಮಾಡಿ ಚಾಪೆಯ ಮೇಲೆ ಮಲಗಿದರು.
ರಸ್ತೆ ಬದಿಯಲ್ಲಿ ಆಸ್ಪತ್ರೆಯ ತ್ಯಾಜ್ಯ ಎಂಬ ವರದಿ ಪ್ರಜಾ ಪ್ರಗತಿಯಲ್ಲಿ ಪ್ರಕಟ, ಆಸ್ಪತ್ರೆಯವರಿಗೆ ಪುರಸಭೆ ಯಿಂದ ನೋಟೀಸು
ಆಗಸ್ಟ್ :
ಪಟ್ಟಣದಲ್ಲಿ ಭಾರಿ ದುರಂತಕ್ಕೆ ಕಾರಣವಾಗಿದ್ದ ಬೇಕಾಬಿಟ್ಟಿ ವೈರಿಂಗ್, ಪುರಸಭೆಯ ನಿರ್ಲಕ್ಷ್ಯ. ವರದಿ ಮಾಡಿದ ಪ್ರಜಾ ಪ್ರಗತಿ. ಎಚ್ಚೆತ್ತು ದುರಸ್ತಿ ಮಾಡಿಸಿದ ಪುರಸಭೆ.
ಜನರ ಆಸ್ತಿ ಖಾತೆ ಮಾಡಿಕೊಡಲು ಕಿತಾಪತಿ, ಪುರಸಭೆ ಅಧಿಕಾರಿಯ ಕಣ್ಣೀರಿಗೆ ಕರಗಿದ ಪುರಸಭೆ ಅಧಿಕಾರಿಯಿಂದ ಛೂಮಂತ್ರ, ಜನರಿಗೆ ಪಂಗನಾಮ
ಸೆಪ್ಟೆಂಬರ್ :
ಮಾನವೀಯ ಮೌಲ್ಯಗಳ ಉಳಿವಿಗೆ ಪಾದಯಾತ್ರೆ ಮಾಡುತ್ತಿರುವ ವಿವೇಕಾನಂದ ಹೆಚ್.ಕೆ ತಾಲ್ಲೂಕಿಗೆ ಆಗಮನ.
ರಾಜ್ಯಮಟ್ಟದ ಕಾಡುಗೊಲ್ಲರ ಕ್ಷೇಮಾಭಿವೃದ್ಧಿ ಸಂಘದಿಂದ ಆಲಪ್ಪನ ಸನ್ನಿಧಿಯಲ್ಲಿ ಚಿಂತನ ಮಂಥನ, ಒಗ್ಗಟ್ಟಿನಿಂದ ಸಮಸ್ಯೆಗಳ ನಿವಾರಣೆಗೆ ಹೋರಾಡಲು ತೀರ್ಮಾನ.
ಅಕ್ಟೋಬರ್ :
ಹುತ್ರಿದುರ್ಗದಲ್ಲಿ ಬೃಹತ್ ಆರೋಗ್ಯ ಶಿಬಿರ ಎಚ್.ಡಿ.ರಾಜೇಶ್‍ಗೌಡ ನೇತೃತ್ವದಲ್ಲಿ ಸಾವಿರಾರು ಜನಕ್ಕೆ ಉಚಿತ ಚಿಕಿತ್ಸೆ, ಕಾರ್ಯಕ್ರಮದಲ್ಲಿ ಬೆಟ್ಟಹಳ್ಳಿ ಮಠದ ಶ್ರೀಗಳು ಹಾಗೂ ಆದಿಚುಂಚನಗಿರಿ ಶ್ರೀಗಳು ಭಾಗಿ.
ನೂತನ ಪುರಸಭಾ ಕಚೇರಿ ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ, ಉದ್ಘಾಟನಾ ವೇದಿಕೆಯನ್ನು ರಸ್ತೆಯಲ್ಲಿ ನಿರ್ಮಿಸಿದ್ದಕ್ಕೆ ಕೆಆರ್‍ಎಸ್ ಪಕ್ಷದಿಂದ ಖಂಡನೆ. ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಹೋರಾಟಗಾರರಿಂದ ಕಪ್ಪುಪಟ್ಟಿ ಪ್ರದರ್ಶನ, ಪೋಲಿಸರಿಂದ ಬಂಧನ ನಂತರ ಬಿಡುಗಡೆ.
ನವೆಂಬರ್ :
ತುಂಬಿ ಹರಿದ ಮಾರ್ಕೋನಳ್ಳಿ ಜಲಾಶಯ ವೀಕ್ಷಣೆಗೆ ಹೋದ 4 ಮಂದಿ ಜಲ ಸಮಾಧಿ
ಜಿಲ್ಲಾ ಕಸಾಪ ಚುನಾವಣೆ, ತಾಲ್ಲೂಕಿನಲ್ಲಿ ಸಿದ್ಧಲಿಂಗಪ್ಪನವರಿಗೆ ಬಹುಮತ
ಡಿಸೆಂಬರ್ :
ವಿಧಾನಪರಿಷತ್ ಚುನಾವಣೆ, ಕುಣಿಗಲ್‍ನಲ್ಲಿ ರಣಕಹಳೆ ಮೊಳಗಿಸಿದ ಮಾಜಿ ಪ್ರಧಾನಿ ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ
ರಾಜ್ಯ ಒಕ್ಕಲಿಗ ಸಂಘದ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ, ಕುಣಿಗಲ್ ಮೂಲದ 5 ಜನ ಸ್ಪರ್ಧೆಯಿಂದ ರಂಗೇರಿದ ಚುನಾವಣಾ ಕಣ, ನಿರ್ದೇಶಕ ಸ್ಥಾನಕ್ಕೆ ತಾಲ್ಲೂಕಿನಿಂದ ಲೋಕೇಶ್ ಡಿ. ನಾಗರಾಜಯ್ಯ ಆಯ್ಕೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
