ಕೊರಟಗೆರೆ:
ಇತಿಹಾಸ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಕ್ಯಾಮೇನಹಳ್ಳಿ ಆಂಜನೇಯಸ್ವಾಮಿ ದನಗಳ ಜಾತ್ರಾ ಮಹೋತ್ಸವ ಸಂಕ್ರಾಂತಿ ನಂತರ ಪ್ರಾರಂಭವಾಗಲಿದ್ದು, ಈಗ ಕೊರೋನಾ ತೀವ್ರತೆಯಿಂದ ತಾಲ್ಲೂಕಾಡಳಿತದ ಆದೇಶದನ್ವಯ ಜಾತ್ರೆಯನ್ನು ತಡೆಹಿಡಿಯಲಾಗಿದೆ.
ಗತಕಾಲದ ವೈಭವವು ಇದೇ ಪ್ರಥಮ ಬಾರಿಗೆ ಜಾತ್ರೆ ಸ್ಥಗಿತವಾದ ಕಾರಣ ಕ್ಯಾಮೇನಹಳ್ಳಿ ಶ್ರೀ ಆಂಜನೇಯ ಸ್ವಾಮಿಯ ದನಗಳ ಜಾತ್ರಾ ಮಹೋತ್ಸವ ಕಳೆಗುಂದಿದಂತಾಗಿದೆ.
ಧಾರ್ಮಿಕ ಇತಿಹಾಸ ಪ್ರಸಿದ್ಧ ಕ್ಷೇತ್ರವಾದ ತಾಲ್ಲೂಕಿನ ಹೊಳವನಹಳ್ಳಿ ಹೋಬಳಿ ಕ್ಯಾಮೇನಹಳ್ಳಿ ಶ್ರೀ ಆಂಜನೇಯ ಸ್ವಾಮಿ ಸನ್ನಿಧಿಯು ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಭಕ್ತಾದಿಗಳನ್ನು ಹೊಂದಿದೆ.
ದನಗಳ ಜಾತ್ರೆಗೆ ರಾಜ್ಯದ ಮೂಲೆ ಮೂಲೆ ಸೇರಿದಂತೆ ಹೊರರಾಜ್ಯಗಳಿಂದಲೂ ಸಾವಿರಾರು ಜನ ಆಗಮಿಸಿ ಕೋಟ್ಯಂತರ ರೂ.ಗಳ ಹೋರೊ ಕೊಳ್ಳುವ-ಮಾರುವ ವ್ಯವಹಾರ ನಡೆಯುತ್ತಿತ್ತು. ಧಾರ್ಮಿಕ ರಥೋತ್ಸವ ಹಾಗೂ ದÀನಗಳ ಜಾತ್ರಾ ಮಹೋತ್ಸವವು ರಾಜ್ಯ ಸರ್ಕಾರ ಹೊರಡಿಸಿರುವ ಕೊರೋನಾ ನಿಯಮದಡಿ ತಹಸೀಲ್ದಾರ್ ನಾಜಿಮಾ ಜಮ್ ಜಮ್ ಜಾತ್ರಾ ಮಹೋತ್ಸವವನ್ನು ರದ್ದುಗೊಳಿಸಿದ್ದಾರೆ.
ರಾಜ್ಯ ಸರ್ಕಾರ ಜನವರಿ 3 ರಿಂದ ಜನವರಿ 26 ರವರೆಗೆ ಕೋವಿಡ್-19 ರ ಮಾರ್ಗಸೂಚಿಯನ್ನು ಹೊರಡಿಸಿದ್ದು, ಸದರಿ ಮಾರ್ಗಸೂಚಿಯನ್ವಯ ಸಭೆ-ಸಮಾರಂಭಗಳನ್ನು 200 ಜನರಿಗೆ ಸೀಮಿತಗೊಳಿಸಿದೆ.
ಕ್ಯಾಮೇನಹಳ್ಳಿ ಆಂಜನೇಯ ಸ್ವಾಮಿಯ ದನಗಳ ಜಾತ್ರಾ ಮಹೋತ್ಸವದಲ್ಲಿ ಸಾವಿರಾರು ರ್ಯತರು-ಜನರು ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಬಮದು ಭಾಗವಹಿಸುವ ಕಾರಣ, ಕೋವಿಡ್-19 ಮಾರ್ಗಸೂಚಿ ಅನ್ವಯ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಸಾಧ್ಯವಾಗದ ಕಾರಣ, ಇವರನ್ನು ನಿಯಂತ್ರಿಸುವ ದೃಷ್ಟಿಯಿಂದ ಜಾತ್ರಾ ಮಹೋತ್ಸವ ರದ್ದುಗೊಳಿಸಲಾಗಿದೆ.
ಜಾತ್ರಾ ಮಹೋತ್ಸವು ಫೆಬ್ರ್ರುವರಿ 6 ರಿಂದ 17ರವರೆಗೆ ಜರುಗಲಿದ್ದು, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದರೆ, ಫೆ. 8 ರಂದು ಬ್ರಹ್ಮರಥೋತ್ಸವ ಹಮ್ಮಿಕೊಂಡಿದ್ದು, ಸಾಂಪ್ರದಾಯಿಕ ಪೂಜೆಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಲಾಗಿದೆ.
ಸಾಂಪ್ರದಾಯಿಕ ಪೂಜೆಯನ್ನು ಹೊರತುಪಡಿಸಿ ಯಾವುದೇ ವಿಶೇಷ ಪೂಜೆ, ಅನ್ನಸಂತರ್ಪಣೆ ಕಾರ್ಯವನ್ನು ನಡೆಸುವಂತಿಲ್ಲ. ಯಾವುದೇ ಅಂಗಡಿ-ಮುಂಗಟ್ಟುಗಳು ಹಾಗೂ ಮಾರಾಟ ಮಳಿಗೆಗಳನ್ನು ಇಟ್ಟು ವ್ಯಾಪಾರ ಮಾಡಲು ಅವಕಾಶವಿರುವುದಿಲ್ಲ. ಮಾಹಿತಿ ಕೊರತೆಯಿಂದ ಅಂಗಡಿ-ಮುಂಗಟ್ಟುಗಳು ಹೊರಗಡೆಯಿಂದ ಬಂದು ಇಡುವುದಾಗಲಿ ವ್ಯವಹಾರ ಮಾಡುವುದಾಗಲಿ ನಿಷೇಧಿಸಲಾಗಿದೆ.
ಇದಕ್ಕೆ ಸಾರ್ವಜನಿಕರು ಸಹಕರಿಸುವಂತೆ ತಹಸೀಲ್ದಾರ್ ಪತ್ರಿಕಾ ಹೇಳಿಕೆ ನೀಡಿದ್ದರು. ಆದರೆ ಈಗ ದನಗಳ ಜಾತ್ರೆ ಕೂಡಲು ಪ್ರಾರಂಭವಾಗುತ್ತಿರುವುದು ಕಂದಾಯ ಹಾಗೂ ಪೆÇಲೀಸ್ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ. ಸೊಮವಾರ ಜನರಲ್ಲಿ ತಿಳಿವಳಿಕೆ ಮೂಡಿಸಲು ಈ ಎರಡೂ ಇಲಾಖೆಗಳು ಹರಸಾಹಸಪಟ್ಟವು.
ಮಾಮೂಲಿಯಂತೆ ಪ್ರತಿವರ್ಷದ ರೀತಿಯಲ್ಲಿ ಈ ಬಾರಿಯೂ ಹೊರ ಜಿಲ್ಲೆ ಹಾಗೂ ಹೊರರಾಜ್ಯದ ಅನೇಕ ಜನರು ಜಾನುವಾರುಗಳ ಸಹಿತ ಮಕರ ಸಂಕ್ರಾಂತಿಯ ನಂತರ ಅಂದರೆ ಸೋಮವಾರ ಜಾತ್ರೆ ಸೇರಲಿದೆ ಎಂಬ ನಂಬಿಕೆಯಲ್ಲಿ ಆಗಮಿಸಿದ್ದಾರೆ.
ಇಲ್ಲಿಯ ಪರಿಸ್ಥಿತಿ ಅರಿಯದೆ ನೂರಾರು ಜನ ಬಂದ ದಾರಿಗೆ ಸುಂಕ ಇಲ್ಲ ಎಂಬಂತೆ ಜಾನುವಾರುಗಳ ಸಹಿತ ಹಿಂದಕ್ಕೆ ಹೊರಟಿದ್ದು ಕಂಡು ಬಂದಿತು.
ಸೋಮವಾರ ಬೆಳ್ಳಂಬೆಳಗ್ಗೆ ನೂರಾರು ಜನ ಜಾತ್ರೆ ಸೇರಲಿದೆ ಎಂಬ ಭಾವನೆಯಲ್ಲಿ ಜಾನುವಾರುಗಳ ಸಹಿತ ಆಗಮಿಸಿ ಕೊಡು – ಕೊಳ್ಳುವ ವ್ಯವಹಾರದಲ್ಲಿ ತೊಡಗಿದ್ದರು.
ಇದನ್ನು ಕಂಡ ಕಂದಾಯ ಇಲಾಖೆಯ ವೃತ್ತ ನಿರೀಕ್ಷಕರು ಹಾಗೂ ಕಂದಾಯ ಅಧಿಕಾರಿಗಳು ಬಂದ ರೈತರನ್ನು ಹಾಗೂ ಜಾನುವಾರುಗಳ ಕೊಳ್ಳಲು ಹಾಗೂ ಕೊಡಲು ವ್ಯವಹಾರ ಕುದುರಿಸುತ್ತಿದ್ದ ದಲ್ಲಾಳಿ ವ್ಯಕ್ತಿಗಳ ಮನವೊಲಿಸಿ ಕೊರೋನಾ ತೀವ್ರತೆ ಹೆಚ್ಚಾಗುತ್ತಿದೆ. ಜಿಲ್ಲಾಡಳಿತ ಹಾಗೂ ತಾಲ್ಲೂಕಾಡಳಿತ ಜಾತ್ರಾ ಮಹೋತ್ಸವವನ್ನು ಸ್ಥಗಿತಗೊಳಿಸುವಂತೆ ಆದೇಶಿಸಿದೆ.
ನೀವು ಮಾಹಿತಿ ಕೊರತೆಯಿಂದ ಆಗಮಿಸಿದ್ದೀರಿ, ದಯಮಾಡಿ ಇಲ್ಲಿಂದ ಜಾಗ ಖಾಲಿ ಮಾಡಿ ಎಂದು ಮನವಿ ಮಾಡಿಕೊಂಡರಾದರೂ ಯಾರೊಬ್ಬರೂ ಈ ಮಾತಿಗೆ ಸೊಪ್ಪು ಹಾಕಲಿಲ್ಲ. ಕೊನೆಗೆ ಪೆÇಲೀಸ್ ಇಲಾಖೆಯ ಸಿಪಿಐ ಸಿದ್ದರಾಮೇಶ್ವರ ಸ್ವತಃ ಕಾರ್ಯಾಚರಣೆ ನಡೆಸಿ, ಎಎಸ್ಐ ಯೋಗೇಶ್ವರ್ ಸೇರಿದಂತೆ ಹಲವು ಪೆÇಲೀಸ್ ಅಧಿಕಾರಿಗಳು ರೈತರ ಮನವೊಲಿಸಿ ಜಾತ್ರೆಯಿಂದ ಹೊರಕಳುಹಿಸುವಲ್ಲಿ ಯಶಸ್ವಿಯಾದರು.
ಕೆಲವು ರೈತರು ಪತ್ರಿಕೆಯೊಂದಿಗೆ ಮಾತನಾಡಿ, ಬೇಸಾಯಕ್ಕೆ ಅನುಕೂಲಕರವಾಗುವಂತಹ ರಾಸುಗಳನ್ನು ಕೊಂಡುಕೊಳ್ಳಲು ಆಗಮಿಸಿದೆವುದ್ದೆವು. ಈಗ ದನಗಳ ಜಾತ್ರೆ ನಿಂತು ಹೋದರೆ ನಾವು ಹೇಗೆ ಕೊಳ್ಳುವುದು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇನ್ನು ಕೆಲವು ರೈತರು ನಮ್ಮ ಮಕ್ಕಳ ಮದುವೆಗಾಗಿ ಹಣ ಬೇಕಿದೆ, ನಮ್ಮ ರಾಸುಗಳನ್ನು ಮಾರುವ ಅನಿವಾರ್ಯತೆ ಇದೆ, ದಯಮಾಡಿ ನಮ್ಮ ಪರಿಸ್ಥಿತಿ ಅರ್ಥ ಮಾಡಿಕೊಳ್ಳಿ ಎಂದು ಪೆÇಲೀಸರನ್ನು ಅಂಗಲಾಚಿದ್ದು ಕೂಡ ಇದೇ ಸಂದರ್ಭದಲ್ಲಿ ಕಂಡು ಬಂದಿತು. ಆದರೆ ವಿಧಿಯಾಟ ಕೊರೋನಾ ಮಾರಕ ರೋಗ ರಾಜ್ಯ ವ್ಯಾಪಿ ಆಕ್ರಮಿಸುತಿದ್ದು,
ಅದರ ರುದ್ರನರ್ತನಕ್ಕೆ ಎಷ್ಟೋ ಕುಟುಂಬಗಳು ಬೀದಿಪಾಲಾದ ಕಾರಣ ಸರ್ಕಾರದ ಮಾರ್ಗದರ್ಶನದಂತೆ ಅನಿವಾರ್ಯವಾಗಿ ಸರ್ಕಾರದ ಮಾರ್ಗದರ್ಶನಕ್ಕೆ ಕೊನೆಗೆ ಎಲ್ಲರೂ ತಲೆಬಾಗಿ ದನಗಳ ಜಾತ್ರೆಯಿಂದ ಕಾಲ್ಕಿತ್ತಿದ್ದು ಸಾಮಾನ್ಯವಾಗಿತ್ತು.
ಒಟ್ಟಾರೆ ಗತವೈಭವ ಮೆರೆದಂತಹ ಕ್ಯಾಮೇನಹಳ್ಳಿ ಶ್ರೀ ಆಂಜನೇಯ ಸ್ವಾಮಿಯ ದನಗಳ ಜಾತ್ರಾ ಮಹೋತ್ಸವ ಹಾಗೂ ಬ್ರಹ್ಮರಥೋತ್ಸವ ಕೊರೋನಾ ರುದ್ರನರ್ತನಕ್ಕೆ ಬಲಿಯಾಗಿದೆ. ದನಗಳ ಜಾತ್ರಾ ಮಹೋತ್ಸವ ಸ್ಥಗಿತವಾದರೆ ಬ್ರಹ್ಮರಥೋತ್ಸವಕ್ಕೆ ಕೇವಲ ಸಾಂಪ್ರದಾಯಿಕ ಪೂಜಾ-ಪುರÀಸ್ಕಾರ ನಡೆಯಲಿದೆ.
ಹೆಚ್ಚು ಜನ ಸೇರದೆ ಕಡಿಮೆ ಸಂಖ್ಯೆಯಲ್ಲಿ ಆಡಳಿತ ಮಂಡಳಿ ಕಂದಾಯ ಇಲಾಖೆ, ಪೆÇಲೀಸ್ ಇಲಾಖೆಯ ಸಹಯೋಗದಲ್ಲಿ ಪೂಜೆ, ಹವನ-ಹೋಮಗಳು ಜರುಗಲಿವೆ. ಯಾವುದೇ ಪ್ರಸಾದ ವಿನಿಯೋಗ ಸೇರಿದಂತೆ ಇನ್ನಿತರ ಆಡಂಬರದ ಪೂಜೆ, ಅಂಗಡಿ-ಮುಂಗಟ್ಟುಗಳು ಇರುವುದಿಲ್ಲ ಎಂದು ತಹಸೀಲ್ದಾರ್ ನಾಜೀಮಾ ಜಮ್ ಜಮ್ ಪ್ರಜಾಪ್ರಗತಿ ಪತ್ರಿಕೆಗೆ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ