IPL 2022: ಹೆಸರು ಘೋಷಿಸಿದ ಅಹಮದಾಬಾದ್ ತಂಡ

      ಈಗಾಗಲೇ 10 ಫ್ರಾಂಚೈಸಿಗಳು ಒಟ್ಟು 33 ಆಟಗಾರರನ್ನು ಉಳಿಸಿಕೊಂಡಿದ್ದು. ಅದರಂತೆ ಫೆಬ್ರವರಿ 12 ಮತ್ತು 13 ರಂದು ನಡೆಯಲಿರುವ ಮೆಗಾ ಹರಾಜಿನಲ್ಲಿ ಉಳಿದ ಆಟಗಾರರನ್ನು ಖರೀದಿಸಲಿದೆ.

       ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 15 (IPL 2022) ಮೆಗಾ ಹರಾಜಿಗಾಗಿ ಸಿದ್ದತೆಗಳು ಶುರುವಾಗಿದೆ.

      ಮುಂದಿನ ಸೀಸನ್​ನಲ್ಲಿ ಹೊಸ ಎರಡು ತಂಡಗಳು ಕಾಣಿಸಿಕೊಳ್ಳಲಿದ್ದು, ಅದರಂತೆ ಈಗಾಗಲೇ ಲಕ್ನೋ ಫ್ರಾಂಚೈಸಿ ತನ್ನ ತಂಡದ ಹೆಸರನ್ನು ಲಕ್ನೋ ಸೂಪರ್ ಜೈಂಟ್ಸ್ ಎಂದು ಘೋಷಿಸಿದೆ. ಇದೀಗ ಅಹಮದಾಬಾದ್ ಫ್ರಾಂಚೈಸಿ ಕೂಡ ಹೆಸರನ್ನು ಘೋಷಿಸಿದ್ದು, ಮುಂದಿನ ಸೀಸನ್​ನಲ್ಲಿ ಅಹಮದಾಬಾದ್ ಟೈಟಾನ್ಸ್  ಹೆಸರಿನಲ್ಲಿ ತಂಡವು ಕಣಕ್ಕಿಳಿಯಲಿದೆ ಎಂದು ವರದಿಯಾಗಿದೆ.

ಸಿವಿಸಿ ಕ್ಯಾಪಿಟಲ್ಸ್ ಮಾಲೀಕತ್ವದ ಅಹಮದಾಬಾದ್ ಟೈಟಾನ್ಸ್ ತಂಡವನ್ನು ಹಾರ್ದಿಕ್ ಪಾಂಡ್ಯ ಮುನ್ನಡೆಸಲಿದ್ದಾರೆ. ಇನ್ನು ತಂಡದ ಮುಖ್ಯ ಕೋಚ್ ಆಗಿ ಭಾರತದ ಮಾಜಿ ಆಟಗಾರ ಆಶಿಸ್ ನೆಹ್ರಾ ಕಾಣಿಸಿಕೊಳ್ಳಲಿದ್ದಾರೆ. ಹಾಗೆಯೇ ಟೈಟಾನ್ಸ್ ತಂಡದ ಮೆಂಟರ್​ ಆಗಿ ಟೀಮ್ ಇಂಡಿಯಾದ ಮಾಜಿ ಕೋಚ್ ದಕ್ಷಿಣ ಆಫ್ರಿಕಾದ ಗ್ಯಾರಿ ಕರ್ಸ್ಟನ್ ಇರಲಿದ್ದಾರೆ.

ಈಗಾಗಲೇ ಅಹಮದಾಬಾದ್ ಟೈಟಾನ್ಸ್ ತಂಡವು ಸ್ಪೆಷಲ್ ಪಿಕ್ ಆಯ್ಕೆಯ ಮೂಲಕ ಮೂವರು ಆಟಗಾರರನ್ನು ಆಯ್ಕೆ ಮಾಡಿಕೊಂಡಿದ್ದು, ಅದರಂತೆ ತಂಡದಲ್ಲಿ ನಾಯಕನಾಗಿ ಹಾರ್ದಿಕ್ ಪಾಂಡ್ಯ ಇದ್ದರೆ, 2ನೇ ಆಟಗಾರನಾಗಿ ಅಫ್ಘಾನಿಸ್ತಾನ್ ಸ್ಪಿನ್ನರ್ ರಶೀದ್ ಖಾನ್ ಇದ್ದಾರೆ. ಹಾಗೆಯೇ ಮೂರನೇ ಆಟಗಾರನಾಗಿ ಟೀಮ್ ಇಂಡಿಯಾದ ಯುವ ಬ್ಯಾಟ್ಸ್​ಮನ್ ಶುಭ್​ಮನ್ ಗಿಲ್ ಆಯ್ಕೆಯಾಗಿದ್ದಾರೆ.

ಇನ್ನು ಲಕ್ನೋ ಸೂಪರ್ ಜೈಂಟ್ಸ್​ ತಂಡದ ನಾಯಕರಾಗಿ ಕೆಎಲ್ ರಾಹುಲ್ ಆಯ್ಕೆಯಾಗಿದ್ದು, ಹಾಗೆಯೇ ಎರಡನೇ ಆಟಗಾರನಾಗಿ ಆಸ್ಟ್ರೇಲಿಯಾದ ಮಾರ್ಕಸ್ ಸ್ಟೊಯಿನಿಸ್ ಹಾಗೂ ಮೂರನೇ ಆಟಗಾರನಾಗಿ ಟೀಮ್ ಇಂಡಿಯಾ ಯುವ ಸ್ಪಿನ್ನರ್ ರವಿ ಬಿಷ್ನೋಯ್ ತಂಡದಲ್ಲಿದ್ದಾರೆ.

ಈಗಾಗಲೇ 10 ಫ್ರಾಂಚೈಸಿಗಳು ಒಟ್ಟು 33 ಆಟಗಾರರನ್ನು ಉಳಿಸಿಕೊಂಡಿದ್ದು. ಅದರಂತೆ ಫೆಬ್ರವರಿ 12 ಮತ್ತು 13 ರಂದು ನಡೆಯಲಿರುವ ಮೆಗಾ ಹರಾಜಿನಲ್ಲಿ ಉಳಿದ ಆಟಗಾರರನ್ನು ಖರೀದಿಸಲಿದೆ. ಈ ಹರಾಜಿನಲ್ಲಿ ಒಟ್ಟು 590 ಆಟಗಾರರು ಕಾಣಿಸಿಕೊಳ್ಳುತ್ತಿದ್ದು, ಇವರಲ್ಲಿ ಯಾರು ಯಾವ ತಂಡಕ್ಕೆ ಆಯ್ಕೆಯಾಗಲಿದ್ದಾರೆ ಕಾದು ನೋಡಬೇಕಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link