ದೇಶ ಮೊದಲೋ..? ಧರ್ಮ ಮೊದಲೋ..? ಮದ್ರಾಸ್ ಹೈಕೋರ್ಟ್ ಮಹತ್ವದ ಪ್ರಶ್ನೆ

ಕರ್ನಾಟಕ:

   ದೇಶದಲ್ಲಿ ಕೋಮು ಸೌಹಾರ್ದತೆಗೆ ಭಂಗ ತರಲು ನಡೆಯುತ್ತಿರುವ ಪ್ರಯತ್ನಗಳ ವಿಚಾರವಾಗಿ ವಿಷಾದ ವ್ಯಕ್ತಪಡಿಸಿರುವ ಮದ್ರಾಸ್ ಹೈಕೋರ್ಟ್ ರಾಷ್ಟ್ರ ಹಾಗೂ ಧರ್ಮಗಳಲ್ಲಿ ಯಾವುದಕ್ಕೆ ಮೊದಲ ಆದ್ಯತೆ ಎಂದು ಪ್ರಶ್ನಿಸಿದೆ.

ಕರ್ನಾಟಕದಲ್ಲಿ ಹಿಜಾಬ್ ವಿವಾದದ ಹಿನ್ನೆಲೆಯಲ್ಲಿ ಮಾತನಾಡಿದ ಮುಖ್ಯ ನ್ಯಾಯಾಧೀಶ ಎಂ ಎನ್ ಭಂಡಾರಿ ಹಾಗೂ ಡಿ ಭರತ ಚಕ್ರವರ್ತಿ ಇದ್ದ ಪೀಠವು, ಇತ್ತೀಚಿನ ದಿನಗಳಲ್ಲಿ ವಸ್ತ್ರಸಂಹಿತೆ ಕುರಿತಂತೆ ವಿವಾದಗಳನ್ನು ಸೃಷ್ಟಿಸುತ್ತಿರುವುದು ದೇಶಾದ್ಯಂತ ಹಬ್ಬುತ್ತಿದೆ ಎಂದಿದೆ.

      “ಇದು ನಿಜಕ್ಕೂ ಶಾಕಿಂಗ್, ಕೆಲವರು ಹಿಜಾಬ್‌ ಪರವಾದರೆ ಕೆಲವರು ಟೋಪಿ ಪರ ಮತ್ತು ಕೆಲವು ಇತರೆ ವಸ್ತುಗಳ ಪರ. ಇದು ಒಂದು ದೇಶವೋ ಅಥವಾ ಧರ್ಮಾಧರಿತವಾಗಿ ವಿಭಜನೆಯಾಗಿಬಿಟ್ಟಿದೆಯೋ. ಇದು ಅಚ್ಚರಿ ಮೂಡಿಸುವ ವಿಚಾರ,” ಎಂದು ಪೀಠ ತಿಳಿಸಿದೆ.

ರಾಜ್ಯಾದ್ಯಂತ ದೇವಸ್ಥಾನಗಳಿಗೆ ಹಿಂದೂಯೇತರರಿಗೆ ಪ್ರವೇಶ ನಿರಾಕರಿಸಿ, ದೇವಾಲಯಗಳ ಆವರಣಗಳಲ್ಲಿ ವ್ಯಾಪಾರಿ ಚಟುವಟಿಕೆಗಳಿಗೆ ನಿಷೇಧ ಹೇರಿ, ದೇಗುಲಗಳ ಪ್ರದೇಶಗಳಲ್ಲಿ ವಸ್ತ್ರಸಂಹಿತೆಯ ಕಟ್ಟುನಿಟ್ಟಿನ ಅನುಷ್ಠಾನಕ್ಕೆ ಆದೇಶ ನೀಡುವಂತೆ ಕೋರಿ ತಿರುಚ್ಚಿರಾಪ್ಪಳ್ಳಿ ಜಿಲ್ಲೆಯ ಶ್ರೀರಂಗಂನ ರಂಗರಾಜನ್ ನರಸಿಂಹನ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಆಲಿಕೆ ವೇಳೆ ನ್ಯಾಯಾಧೀಶರು ಈ ವಿಚಾರದ ಉಲ್ಲೇಖ ಮಾಡಿದ್ದಾರೆ.

ಈ ವಿಚಾರವಾಗಿ ನ್ಯಾಯಾಲಯದ ಗಮನಕ್ಕೆ ಕೆಲವೊಂದು ಅಂಶಗಳನ್ನು ತಂದ ತಮಿಳುನಾಡು ಅಡ್ವೋಕೇಟ್ ಜನರಲ್ ಆರ್‌ ಷಣ್ಮುಗಸುಂದರಂ, ಹಿಂದೂಯೇತರ ಮಂದಿಯನ್ನು ದೇವಸ್ಥಾನಗಳ ಧ್ವಜಸ್ಥಂಭದವರೆಗೂ ಬಿಡಲಾಗುತ್ತಿದೆ ಎಂದಿದ್ದಾರೆ.

ದೇವಸ್ಥಾನಗಳಲ್ಲಿ ಧರಿಸಬಹುದಾದ ರೀತಿಯ ವಸ್ತ್ರಗಳ ಕುರಿತಂತೆ ಅಫಿಡವಿಟ್ ಸಲ್ಲಿಸಲು ಅರ್ಜಿದಾರರಿಗೆ ಹೈಕೋರ್ಟ್ ಪೀಠ ಅನುಮತಿ ನೀಡಿದೆ.

            ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link