ಅನುಶ್ರೀಗಿಂತ ಎರಡು ಪಟ್ಟು ಹೆಚ್ಚು ಸಂಭಾವನೆ ಪಡೆಯುತ್ತಿರುವ ನಟಿ ಅನುಪಮಾ ಗೌಡ..! ಸಂಭಾವನೆ ಕೇಳಿದ್ರೆ ಶಾಕ್ ಆಗ್ತೀರಾ..?

ಬೆಂಗಳೂರು:

ಅಕ್ಕ ಸೀರಿಯಲ್ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟು, ಅವಳಿ ಜವಳಿ ಪಾತ್ರದಲ್ಲಿ , ನೆಗಟಿವ್ ಪಾಸಿಟಿವ್ ಎರಡು ರೋಲ್ ಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು ನಟಿ ಅನುಪಮಾ ಗೌಡ. ಸೀರಿಯಲ್ ನಂತರ ಬಿಗ್ ಬಾಸ್ ಮನೆಗೆ ಕಾಲಿಟ್ಟು, ಹವಾ ಸೃಷ್ಟಿಸಿದ್ದ ಅನುಪಮಾ ಅವರು ಈಗ ನಿರೂಪಣೆಯಲ್ಲಿ ಬ್ಯುಸಿಯಾಗಿದ್ದಾರೆ.

ಪ್ರಸ್ತುತ ಅನುಪಮ ಅವರು ಕಲರ್ಸ್ ಕನ್ನಡ ವಾಹಿನಿಯ ನನ್ನಮ್ಮ ಸೂಪರ್ ಸ್ಟಾರ್ ಶೋನಲ್ಲಿ ಬ್ಯುಸಿ ಇದ್ದಾರೆ.

ಅನುಪಮಾ ಅವರು ಪ್ರತಿ ಎಪಿಸೋಡ್ ನಲ್ಲೂ ವಿಶೇಷವಾದ ಕಾಸ್ಟ್ಯೂಮ್ ಗಳನ್ನು ಧರಿಸುತ್ತಾರೆ. ರಾಜಾ ರಾಣಿ ಶೋ ನಿರೋಪ್ಪನೆ ಮಾಡುವಾಗ ಹಳ್ಳಿ ರೌಂಡ್ ನಲ್ಲಿ ಮೋಹಕ ನಟಿ ಮಾಲಾಶ್ರಿ ಅವರ ರಾಮಾಚಾರಿ ಲುಕ್ ಅನ್ನು ಅನುಪಮಾ ಅವರು ಇಮಿಟೇಟ್ ಮಾಡಿದ್ದರು.

ರೊಮ್ಯಾಂಟಿಕ್ ರೌಂಡ್ ನಲ್ಲಿ ಮತ್ತೊಂದು ಹೊಸ ಪ್ರಯೋಗ ಮಾಡಿದ್ದರು. 70 ಮತ್ತು 80ರ ದಶಕದ ಖ್ಯಾತ ನಟಿ ಆರತಿ ಅವರ ಶೈಲಿಯಲ್ಲಿ ರೆಡಿಯಾಗಿದ್ದರು ಅನುಪಮಾ. ಈ ಲುಕ್ ಗೆ ಬಹಳಷ್ಟು ಪ್ರಶಂಸೆ ಸಿಕ್ಕಿತ್ತು.

ಈ ಮೊದಲು ಸಹ ಅನುಪಮಾ ಗೌಡ ಕೆಲವು ಶೋಗಳನ್ನು ನಿರೂಪಣೆ ಮಾಡಿದ್ದರು. ಪಟಪಟ ಎಂದು ತಮಾಷೆಯಾಗಿ ಮಾತನಾಡುವ ಮೂಲಕ ನಿರೂಪಣೆಯಲ್ಲಿ ಯಶಸ್ಸು ಗಳಿಸಿರುವ ಅನುಪಮಾ ಗೌಡ ಅವರಿಗೆ ಈಗ ದೊಡ್ಡ ಮೊತ್ತದ ಸಂಭಾವನೆಯನ್ನೇ ಸೃಜನ್ ಲೋಕೇಶ್ ಅವರ ಸಂಸ್ಥೆ ನೀಡುತ್ತಿದೆ. ಸಿಕ್ಕಿರುವ ಮಾಹಿತಿಯ ಪ್ರಕಾರ ಅನುಪಮಾ ಗೌಡ ಅವರ ನಿರೂಪಣೆಗೆ ಬರೋಬ್ಬರಿ 10 ಲಕ್ಷ ರೂಪಾಯಿ ಸಂಭಾವನೆ ನೀಡಲಾಗುತ್ತಿದೆಯಂತೆ.

        ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link