ಮಧುಗಿರಿ:
ಇತಿಹಾಸ ಪ್ರಸಿದ್ಧ ಶ್ರೀ ದಂಡಿನ ಮಾರಮ್ಮನ ಜಾತ್ರಾ ಮಹೋತ್ಸವು ಮಾರ್ಚ್ 11 ರಿಂದ 21 ರವರೆಗೆ ನಡೆಯಲಿದೆಂದು ಉಪವಿಬಾಗಾಧಿಕಾರಿ ಹಾಗೂ ದೇವಾಲಯದ ಆಡಳಿತ ಅಧಿಕಾರಿ ಯಾಗಿರುವ ಗೋಟೂರು ಶಿವಪ್ಪ ತಿಳಿಸಿದರು.
ಮಂಗಳವಾರದಂದು ಉಪ ವಿಭಾಗಾಧಿಕಾರಿ ಕಚೇರಿಯಲ್ಲಿ ಜಾತ್ರೆಯ ಕುರಿತು ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ,
ಫೆ. 25 ರಂದು ಶಿವರಾತ್ರಿ ಹಬ್ಬದ ಮುನ್ನಾ ದಿನವೆ ಸಂಪ್ರದಾಯ ಬದ್ಧವಾಗಿ ಜಾತ್ರೆಯನ್ನು ಸಾರಲಾಗುವುದು, ಮಾ. 11 ರಿಂದ ಮಾ. 21 ರ ವರೆಗೂ ಜಾತ್ರೆ ನಡೆಯಲಿದೆ .ಮಾ. 4ರಂದು ವಿಶೇಷ ವಿಶೇಷ ಪೂಜೆಗಳು, ಮಾ. 11ರಂದು ಜಾತ್ರೆ ಆರಂಭ, 12 ರಂದು ಗ್ರಾಮಸ್ಥರ ಆರತಿ ,,13 ರಂದು ಗುಗ್ಗರಿ ಗಾಡಿ ಸೇವೆ, 14ರಂದು ರಥೋತ್ಸವ ,15ರಂದು ಉಯ್ಯಾಲೆ ಉತ್ಸವ, 16 ರಂದು ಸಿಂಹವಾಹನ, 17ರಂದು ಚಂದ್ರಮಂಡಲ ವಾಹನ ,18ರಂದು ನವಿಲುವಾಹನ, 19 ರಂದು ಭಂಡಾರ ಮತ್ತು ಬೆಳ್ಳಿ ಪಲ್ಲಕ್ಕಿ ಉತ್ಸವ, ಮಾ. 20 ರ ಗುರುವಾರ ಅಗ್ನಿಕುಂಡ ಮಾ. 21ರಂದು ಮಡಲಕ್ಕಿ ಸೇವೆಯ ಮೂಲಕ ಜಾತ್ರೆಯು ಮುಕ್ತಾಯಗೊಳ್ಳಲಿದೆಂದು ತಿಳಿಸಿದರು.
ತೆಪ್ಪೋತ್ಸವ:
ಮಧುಗಿರಿಯಲ್ಲಿ ಜನವರಿ 24ರಂದು ಚೋಳೇನಹಳ್ಳಿ ಕೆರೆಯಲ್ಲಿ ನಡೆದ ಶ್ರೀ ದಂಡಿನ ಮಾರಮ್ಮ ದೇವರ ತೆಪ್ಪೋತ್ಸವ ಯಶಸ್ವಿಗೆ ಕಾರಣಕರ್ತರಾದ ಸಹಕಾರ ಸಚಿವ ಕೆ. ಎನ್. ರಾಜಣ್ಣ, ಎಂಎಲ್ಸಿ ಆರ್. ರಾಜೇಂದ್ರ, ಅಧಿಕಾರಿಗಳ ವರ್ಗ ಹಾಗೂ ಭಕ್ತವೃಂದಕ್ಕೆ ಮತ್ತು ಯಶಸ್ವಿಯಾಗಿ ಧಾರ್ಮಿಕ ಚಟುವಟಿಕೆಗಳು ನಡೆಯಲು ಕಾರಣರಾದ ಪ್ರಧಾನ ಅರ್ಚಕರಾದ ಲಕ್ಷ್ಮಿಕಾಂತ ಆಚಾರ್ ಮತ್ತು ತಂಡಕ್ಕೆ ಅಭಿನಂದನೆಗಳನ್ನು ಸಲ್ಲಿಸಿದರು. ಈ ಬಾರಿ ಜಾತ್ರಾ ಮಹೋತ್ಸವವನ್ನು ವಿಶೇಷವಾಗಿ ಆಚರಿಸಲಾಗುವುದು ಎಂದು ತಿಳಿಸಿದರು.
ಈ ವೇಳೆ ಪ್ರಧಾನ ಅರ್ಚಕ ಶ್ರೀ ಲಕ್ಷ್ಮಿಕಾಂತಾಚಾರ್ ,ಪಾರು ಪತ್ತೆದಾರ ಗಿರೀಶ್ ಹಾಗೂ ಪತ್ರಕರ್ತರು ಇದ್ದರು .
