ತುಮಕೂರು
ಗಂಗಸಂದ್ರದಲ್ಲಿ ಜಿ.ಎಸ್.ಬಸವರಾಜು ತುಮಕೂರು ರೈತರಿಗೆ ಸಂಬಂಧಿಸಿದ ಕಂದಾಯ ದಾಖಲೆ ಗಳನ್ನು ಅವರ ಮನೆ ಬಾಗಿಲಿಗೆ ತಲುಪಿಸುವುದು ಕಂದಾಯ ಅಧಿಕಾರಿಗಳ ಕರ್ತವ್ಯ ಎಂದು ಸಂಸದ ಜಿ.ಎಸ್ ಬಸವರಾಜ್ ತಿಳಿಸಿದರು .

ಮುಖ್ಯ ಮಂತ್ರಿ ಬೊಮ್ಮಾಯಿ ಅವರು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಶನಿವಾರ ಚಾಲನೆ ನೀಡಿದ್ದು , ತುಮಕೂರು ಜಿಲ್ಲೆಯ ಎಲ್ಲಾ ತಾಲ್ಲೂಕಿನಲ್ಲಿಯೂ ಹಮ್ಮಿಕೊಂಡಿರುವ ಕಾರ್ಯಕ್ರಮದಡಿ ಒಟ್ಟು 2,58,000 ಕುಟುಂಬಗಳ ಮನೆ ಬಾಗಿಲಿಗೆ ಕಂದಾಯ ದಾಖಲೆಗಳನ್ನು ತಲುಪಿಸಲಾಗುತ್ತಿದೆ ಎಂದು ತಿಳಿಸಿದರು .
ತುಮಕೂರು ನಗರ ವ್ಯಾಪ್ತಿಯ 11 ನೇ ವಾಡ್ ೯ ಗಂಗಸಂದ್ರದ ಗಂಗಾಧರೇಶ್ವರ ಸಮುದಾಯ ಭವನದಲ್ಲಿ ಶನಿವಾರ ಏರ್ಪಡಿಸಿದ್ದ ಕಂದಾಯ ಗ್ರಾಮ ರೈತರ ಮನೆ ಬಾಗಿಲಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು , ಪ್ರಧಾನ ಮೋದಿಯವರ ಆಶಯದಂತೆ ರೈತಾಪಿ ಬಾಗಿಲಿಗೆ ಕಂದಾಯ ದಾಖಲೆಗಳನ್ನು ತಲುಪಿಸುವ ಉದ್ದೇಶದಿಂದ ಈ ಮಹತ್ವಾಕಾಂಕ್ಷಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು , ತಮ್ಮ ಕಂದಾಯ ದಾಖಲೆಗಳನ್ನು ಪಡೆದು ಜೋಪಾನವಾಗಿಟ್ಟುಕೊಳ್ಳಬೇಕೆಂದು ತಿಳಿಸಿದರು.
ಹುಟ್ಟೂರಾಗಿರುವ ಮೆಳೆಕೋಟೆ 11 ನೇ ವಾರ್ಡ್ ವ್ಯಾಪ್ತಿಯ ಗಂಗಸಂದ್ರ ಗ್ರಾಮದಲ್ಲಿ ಎಲ್ಲರೂ ವಿದ್ಯಾವಂತರಾಗಿದ್ದು , ಎಂದರಲ್ಲದೆ , ಉದ್ಯೋಗಸ್ಥರಾಗಿದ್ದಾರೆ ವಿದ್ಯುತ್ , ಕುಡಿಯುವ ನೀರು , ರಸ್ತೆ ಸೇರಿ ದಂತೆ ಎಲ್ಲಾ ಸೌಲಭ್ಯಗಳು ಗ್ರಾಮಸ್ಥರಿಗೆ ಯಾವುದೇ ದೇಶ ಅಭಿವೃದ್ಧಿಯಾಗ ಬೇಕಾದರೆ ಭೂ ಸಂಬಂಧಿತ ವ್ಯಾಜ್ಯಗಳ ಪ್ರಕರಣಗಳು ಕಡಿಮೆ ಪ್ರಮಾಣದಲ್ಲಿ ರಬೇಕು . ಭೂವ್ಯಾಜ್ಯಗಳು ಸಂಪೂರ್ಣವಾಗಿ ಬಗೆಹರಿದಿರುವ ದೇಶದಲ್ಲಿ ಒಟ್ಟು ದೇಶೀಯ ಉತ್ಪನ್ನ ಹೆಚ್ಚುವುದರಿಂದ ಆ ದೇಶವು ಬೆಳವಣಿಗೆಯಾಗಲು ಸಾಧ್ಯ . ಈ ನಿಟ್ಟಿನಲ್ಲಿ ರೈತರು ಭೂವ್ಯಾಜ್ಯಗಳನ್ನು ಶೂನ್ಯಕ್ಕೆ ತಂದು ದೇಶದ ಅಭಿವೃದ್ಧಿಗೆ ಕೈ ಜೋಡಿಸಬೇಕು ರೈತರು ಎಂದರಲ್ಲದೆ , ವರ್ಷಕ್ಕೊಮ್ಮೆ ಯಾದರೂ ತಮ್ಮ ಕಂದಾಯ ದಾಖಲೆಗಳನ್ನು ಪರಿಶೀಲಿಕೊಳ್ಳಬೇಕು ಎಂದು ತಿಳಿಸಿದರು.ಪ್ರಾಸ್ತಾವಿಕವಾಗಿ ತಲುಪುತ್ತಿವೆ ಎಂದು ಸಂತಸ ವ್ಯಕ್ತಪಡಿಸಿದರು .
ಗಂಗಸಂದ್ರ ಗ್ರಾಮದಲ್ಲಿ ಹರಿಜನರಿಗಾಗಿ ಮಂಜೂರಾಗಿರುವ ಸ್ಮಶಾನ ಭೂಮಿ ವಿವಾದವನ್ನು ಶೀಘ್ರವೇ ಬಗೆಹರಿಸಬೇಕು ಹಾಗೂ ಒತ್ತುವರಿಯಾಗಿರುವ ಸರ್ಕಾರಿ ಜಮೀ ನನ್ನು ಸ್ವಾಧೀನಕ್ಕೆ ಪಡೆದುಕೊಳ್ಳಬೇಕೆಂದು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು .
ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಮಾತ ನಾಡಿ , ಕಂದಾಯ ದಾಖಲೆ ರೈತರ ಮನೆ ಬಾಗಿಲಿಗೆ ಕಾರ್ಯಕ್ರಮದಡಿ ಸರ್ವೇ ನಂಬರ್‌ವಾರು ಪಹಣಿ , ಅಟ್ಲಾಸ್ ಹಿಸ್ಸಾ ಟಿಪಣಿ , ಆದಾಯ ಮತ್ತು ಜಾತಿ ಪ್ರಮಾಣ ಪತ್ರ ಸೇರಿದಂತೆ ಮತ್ತಿತರ ದಾಖಲೆಗಳನ್ನು ರೈತರ ಮನೆ ಬಾಗಿಲಿಗೆ ತಲುಪಿಸಲಾಗುತ್ತಿದೆ ಎಂದು ತಿಳಿಸಿದರು .
ರಾಜ್ಯಾದ್ಯಂತ ಹಮ್ಮಿ ಕಾರ್ಯಕ್ರಮವನ್ನು ಕಂದಾಯ ಹಾಗೂ ಇಲಾಖೆ ಮಾತನಾಡಿದ ಶಿರಸ್ತೇದಾರರು ಸರ್ಕಾರಿ ನೌಕರರ ಜಿಲ್ಲಾಧ್ಯಕ್ಷ ನರಸಿಂಹರಾಜು ಮಾತನಾಡಿ ಎಲ್ಲಾ ಇಲಾಖೆಗಳ ತವರು ಇಲಾಖೆಯಾದ ಕಂದಾಯ ಇಲಾಖೆಯು ಸದಾ ಸೇವೆಯನ್ನು ನಿರ್ವಹಿಸುತ್ತಾ 2020 ರಲ್ಲಿ ಕಂದಾಯ ಗಣಕೀಕರಣವಾದ ನಂತರ ಜಿಲ್ಲೆಯಲ್ಲಿ ಸುಮಾರು 40,000 ದಾಖಲೆ ಕೊಂಡಿರುವ ಪಹಣಿಗಳಲ್ಲಿ ಲೋಪ ದೋಷ ಕಂಡು ಬಂದಿದ್ದು ಪ್ರಸ್ತುತ ಕೇವಲ 3,000 ದೋಷಪೂರಿತ ಪಹಣಿಗಳು ಬಾಕಿ ಇವೆ ಎಂದರಲ್ಲದೆ , ಪಹಣಿ ತಿದ್ದುಪಡಿ ಮಾಡುವ ಕೆಲಸ ಇನ್ನೂ ಜಾರಿಯಲ್ಲಿದೆ . ಪ್ರತಿ ಸೋಮವಾರ ಜಿಲ್ಲಾಧಿಕಾರಿಗಳು ಪಹಣಿ ತಿದ್ದುಪಡಿಗೆ ಸಂಬಂಧಿಸಿದಂತೆ ಪ್ರಗತಿ ಪರಿಶೀಲನೆ ನಡೆಸುತ್ತಿದ್ದಾರೆ . ರೈತರು ಕಂದಾಯ ದಾಖಲೆಗಳಿಗಾಗಿ ಮಧ್ಯವರ್ತಿಗಳನ್ನು ಸಂಪರ್ಕಿಸದೆ ನೇರವಾಗಿ ಕಂದಾಯ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಬೇಕೆಂದು ತಿಳಿಸಿದರು .
ನಂತರ ಸಂಸದರು ಗಂಗಸಂದ್ರ ಗ್ರಾಮದ ಲೋಕೇಶ್ , ಬಸವರಾಜು , ಜಯಮ್ಮ , ಮತ್ತಿತರ ರೈತರ ಮನೆ ಬಾಗಿಲಿಗೆ ಸಾಂಕೇತಿಕವಾಗಿ ಕಂದಾಯ ದಾಖಲೆಗಳನ್ನು ವಿತರಿಸಿದರು . ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ : ನಾಗೇಂದ್ರಪ್ಪ , ಉಪವಿಭಾಗಾಧಿಕಾರಿ ಅಜಯ್ , ತಹಶೀಲ್ದಾರ್ ಮೋಹನ್ ಕುಮಾರ್ , ಡಿಡಿಎಲ್‌ಆರ್ ಸುಜಯ್ , ಎಡಿಎಲ್ಆರ್ ಮಂಜುನಾಥ , ಮತ್ತಿತರರು ಉಪಸ್ಥಿತರಿದ್ದರು .








