ಸಿಎಂ ಬೊಮ್ಮಾಯಿ ಅವರನ್ನು ಎಂ.ಎಸ್​. ಧೋನಿಗೆ ಹೋಲಿಸಿ ಸಂಸದೆ ಸುಮಲತಾ ಕೊಟ್ಟ ಕಾರಣ ಹೀಗಿದೆ.

ಮಂಡ್ಯ:

 ಸಂಸದೆ ಸುಮಲತಾ ಅಂಬರೀಷ್​ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಟೀಮ್​ ಇಂಡಿಯಾದ ಮಾಜಿ ನಾಯಕ ಎಂ.ಎಸ್​. ಧೋನಿಗೆ ಹೋಲಿಸಿದ ಪ್ರಸಂಗ ನಡೆದಿದೆ.

ನಿನ್ನೆ (ಮಾ.14) ನಡೆದ ವೈರಮುಡಿ ಉತ್ಸವ ವೇದಿಕೆ ಕಾರ್ಯಕ್ರಮದಲ್ಲಿ ಸಂಸದೆ ಸುಮಲತಾ ಮಾತನಾಡುವಾಗ ಸಿಎಂ ಬಸವರಾಜ ಬೊಮ್ಮಾಯಿರನ್ನ ಧೋನಿಗೆ ಹೋಲಿಸಿದರು.

ಆರು ತಿಂಗಳ ಅವಧಿಯಲ್ಲಿ ಹಲವು ಬಾರಿ ಸಿಎಂ ಅವರನ್ನು ಭೇಟಿ ಮಾಡಿದ್ದೀನಿ. ಹಲವಾರು ವಿಷಯದ ಬಗ್ಗೆ ಒಂದೆ ಪತ್ರದಲ್ಲಿ ತರ್ತೀರಲ್ಲ ಅಂತಾರೆ, ತಾಳ್ಮೆಯಿಂದ ಆಲಿಸುತ್ತಾರೆ. ಸಿಎಂ ಸರ್ ಕೂಲ್ ಕ್ಯಾಪ್ಟನ್​ ಧೋನಿ‌ ರೀತಿ ಎಂದು ಸಂಸದೆ ಸುಮಲತಾ ಶ್ಲಾಘಿಸಿದರು.

ಮಂಡ್ಯ ಜಿಲ್ಲೆಯ ಕೆಲಸಕ್ಕೆ ಅವರ ಮುಂದೆ ಹೋದ್ರು ಯಾವುದಕ್ಕು ಇಲ್ಲ ಎನ್ನಲಿಲ್ಲ. ಜಿಲ್ಲೆಯಲ್ಲಿ ನಿಂತಿದ್ದ ಎರಡು ಕಾರ್ಖಾನೆಗಳ ಪೈಕಿ ಪಿಎಸ್​ಎಸ್ ಕೆ ಕಾರ್ಖಾನೆ ಆರಂಭಿಸಿದ್ರು. ಇದೀಗ ಮೈಷುಗರ್ ಆರಂಭವಾಗುವ ಶುಭಗಳಿಗೆ ಬಂದಿದೆ. ಮಂಡ್ಯ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಹೆಚ್ಚು ಒತ್ತು ನೀಡುವಂತೆ ಇದೇ ಸಂದರ್ಭದಲ್ಲಿ ಸುಮಲತಾ ಅವರು ಮನವಿ ಮಾಡಿದರು.

       ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link